Jamakhandi ಐಬಿಯಲ್ಲಿ ಪಾರ್ಟಿ: ಐವರು ಅಧಿಕಾರಿಗಳ ಅಮಾನತು
Team Udayavani, May 25, 2024, 10:13 PM IST
ಬಾಗಲಕೋಟೆ: ಜಮಖಂಡಿಯ ಸರಕಾರಿ ಅತಿಥಿ ಗೃಹದಲ್ಲಿ ಗುತ್ತಿಗೆದಾರರೊಂದಿಗೆ ಮದ್ಯ ಸೇವನೆ ಪಾರ್ಟಿ ಮಾಡಿದ್ದ ಐವರು ಹಿರಿಯ ಮತ್ತು ಕಿರಿಯ ಅಧಿಕಾರಿಗಳನ್ನು ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಜಮಖಂಡಿ ಉಪವಿಭಾಗದ ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗದ ಸಹಾಯಕ ಅಭಿಯಂತ ರಾಮಪ್ಪ ರಾಠೊಡ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತ ಎಸ್.ಎಂ. ನಾಯಕ, ಕಿರಿಯ ಅಭಿಯಂತ ಗಜಾನನ ಪಾಟೀಲ್, ಸಹಾಯಕ ಅಭಿಯಂತ ಜಗದೀಶ ನಾಡಗೌಡರ ಹಾಗೂ ಜಮಖಂಡಿ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತ ಎಸ್.ಆರ್. ಜಂಬಗಿ ಅಮಾನತುಗೊಂಡವರು.
ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಈ ಅಧಿಕಾರಿಗಳು, ಕೆಲವು ಗುತ್ತಿಗೆದಾರರೊಂದಿಗೆ ಜಮಖಂಡಿ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಪ್ರವಾಸಿ ಮಂದಿರ(ರಮಾ ನಿವಾಸ-ಐಬಿ)ದಲ್ಲಿ ಮದ್ಯ ಸೇವಿಸಿದ್ದರು. ಇದನ್ನು ಸಾರ್ವಜನಿಕರೊಬ್ಬರು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಜತೆಗೆ ಹಿರಿಯ ಅಧಿಕಾರಿಗಳ ವಾಟ್ಸ್ ಆ್ಯಪ್‌ಗೂ ಕಳುಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
Belthangady: ಖಾಸಗಿ ಬಸ್ಸಿನಡಿಗೆ ಬಿದ್ದ ಬೈಕ್ ಸವಾರ: ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
Tabla maestro: ಮಂಗಳೂರಿಗೆ ಮೂರು ಬಾರಿ ಭೇಟಿ ಕೊಟ್ಟಿದ್ದ ತಬಲಾ ಮಾಂತ್ರಿಕ ಜಾಕೀರ್ ಹುಸೇನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.