Patla Foundation ಉದಾತ್ತ ಗುಣ: ಒಡಿಯೂರು ಶ್ರೀ

ಯಕ್ಷಧ್ರುವ ಪಟ್ಲ ಸಂಭ್ರಮ; ಪ್ರಶಸ್ತಿ, ನೆರವು, ಸಮ್ಮಾನ

Team Udayavani, May 26, 2024, 11:06 PM IST

Patla Foundation ಉದಾತ್ತ ಗುಣ: ಒಡಿಯೂರು ಶ್ರೀ

ಮಂಗಳೂರು: ಯಕ್ಷಗಾನ ಎಂದರೆ ಒಂದು ಸಂಸ್ಕೃತಿ, ಅದರಲ್ಲಿ ಬದುಕಿಗೊಂದು ದೊಡ್ಡ ಪಾಠವಿದೆ, ಯಕ್ಷಗಾನ ಬದುಕಿಗೆ ಬೆಳಕು ನೀಡುತ್ತದೆ, ಅದರಂತೆಯೇ ಪಟ್ಲ ಫೌಂಡೇಶನ್‌ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಷ್ಟವನ್ನು ಕಂಡು ಅವರಿಗೆ ಸಹಾಯ ಹಸ್ತ ಚಾಚುತ್ತಿರುವುದು ಅಭಿನಂದನೀಯ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಮಂಗಳೂರು ವತಿಯಿಂದ ಅಡ್ಯಾರಿನ ಅಡ್ಯಾರ್‌ ಗಾರ್ಡನ್‌ನಲ್ಲಿ ರವಿವಾರ “ಯಕ್ಷಧ್ರುವ ಪಟ್ಲ ಸಂಭ್ರಮ 2024’ದ ಭಾಗವಾಗಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಯಕ್ಷಗಾನ, ದೈವಾರಾಧನೆ, ಕಂಬಳ ಸೇರಿದಂತೆ ವಿವಿಧ ರಂಗದಲ್ಲಿ ಅಶಕ್ತರಿಗೆ ನೆರವು ನೀಡುವ, ಪ್ರತಿಭಾನ್ವಿತರನ್ನು ಗೌರವಿಸುವ, ಅದರೊಂದಿಗೆ ಸೇರಿದವರನ್ನು ರಂಜಿಸುವಂತಹ ಈ ಸಮೃದ್ಧ ಸಮಾರಂಭ ನಡೆಸಿರುವುದು ಪಟ್ಲ ಅವರ ಅರ್ಪಣಾ ಮನೋಭಾವಕ್ಕೆ, ಹಾಗೂ ದಾನಿಗಳ ವಿಶಾಲ ಮನೋಭಾವಕ್ಕೆ ನಿದರ್ಶನ ಎಂದರು.

ಕೊಂಡದಕುಳಿ ಅವರಿಗೆ ಪಟ್ಲ ಪ್ರಶಸ್ತಿ
ಹಿರಿಯ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ಅವರಿಗೆ 2024ರ ಸಾಲಿನ ಯಕ್ಷಧ್ರುವ ಪಟ್ಲಪ್ರಶಸ್ತಿ ನೀಡಿ ಗೌರವಿಸಲಾಯಿತು.

2024ರ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಸಿಎ ದಿವಾಕರ್‌ ರಾವ್‌ ಅವರಿಗೆ ನೀಡಲಾಯಿತು. ಈ ವೇಳೆ ಮಾತನಾಡಿದ ಕೊಂಡದಕುಳಿ ಅವರು, ಹಿಂದಿನ ತಲೆಮಾರಿನ ಯಕ್ಷಗಾನದ ಹಿರಿಯರು ಫಲಾಪೇಕ್ಷೆಯಿಲ್ಲದೆ ಕಷ್ಟದ ಕಾಲದಲ್ಲೂ ಕಲೆಯನ್ನು ಉಳಿಸಿ ಬೆಳೆಸಿದ್ದಾರೆ, ಅದರ ಫಲವನ್ನು ನಾವೀಗ ಉಣ್ಣುತ್ತಿದ್ದೇವೆ. ಯಾವುದೇ ಭೇದವೆಣಿಸದೆ ಎಲ್ಲರನ್ನೂ ಒಳಗೊಂಡಂತೆ ನಡೆಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕಾರ್ಯ ಅನುಕರಣೀಯ ಎಂದರು.

ಟ್ರಸ್ಟ್‌ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಉದ್ಯಮಿಗಳಾದ ವಕ್ವಾಡಿ ಪ್ರವೀಣ್‌ ಶೆಟ್ಟಿ, ಹರೀಶ್‌ ಶೇರಿಗಾರ್‌, ಕೆ.ಕೆ. ಶೆಟ್ಟಿ, ರಘುರಾಮ್‌ ಶೆಟ್ಟಿ, ಇನ್ನಂಜೆ ಶಶಿಧರ ಶೆಟ್ಟಿ, ಕೃಷ್ಣಮೂರ್ತಿ ಮಂಜ, ತಲ್ಲೂರು ಶಿವರಾಮ ಶೆಟ್ಟಿ, ರಘು ಎಲ್‌. ಶೆಟ್ಟಿ, ಸುಧಾಕರ್‌ ಸೆಟ್ಟಿ ಸುಗ್ಗಿ, ಗಿರೀಶ್‌ ಶೆಟ್ಟಿ ಕಟೀಲು, ಅಜಿತ್‌ ಶೆಟ್ಟಿ, ಅಮೃತೇಶ್ವರಿ ಹಲವುಮಕ್ಕಳ ತಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ ಸಿ. ಕುಂದರ್‌, ಅಶೋಕ್‌ ಶೆಟ್ಟಿ, ಉಳೂ¤ರು ಮೋಹನದಾಸ್‌ ಶೆಟ್ಟಿ, ಎನ್‌.ಟಿ. ಪೂಜಾರಿ, ಪುತ್ತಿಗೆ ಯೋಗೇಂದ್ರ ಭಟ್‌ ಉಳಿ, ಗೋಪಾಲ್‌ ಶೆಟ್ಟಿ ಟ್ರಸ್ಟ್‌ನಪದಾಧಿಕಾರಿಗಳಾದ ಸುದೇಶ್‌ ಕುಮಾರ್‌ ರೈ, ಡಾ| ಮನುರಾವ್‌, ಬಾಳ ಜಗನ್ನಾಥ ಶೆಟ್ಟಿ, ದುರ್ಗಾಪ್ರಸಾದ್‌, ರಾಜೀವ ಪೂಜಾರಿ, ಉದಯ ಕುಮಾರ್‌ ಶೆಟ್ಟಿ, ರವಿಚಂದ್ರ ಶೆಟ್ಟಿ ಅಶೋಕನಗರ ಉಪಸ್ಥಿತರಿದ್ದರು.

ಟ್ರಸ್ಟ್‌ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು, ಪ್ರದೀಪ್‌ ಆಳ್ವ ಕದ್ರಿ ವಂದಿಸಿದರು.

ನಿಮ್ಮ ನಡುವೆ ಬಂದಿದ್ದೇ ನನಗೆ ಹೆಮ್ಮೆ: ಸುದೀಪ್‌
ಅತಿಥಿಯಾಗಿದ್ದ ಕನ್ನಡ ಚಿತ್ರನಟ ಕಿಚ್ಚ ಸುದೀಪ್‌ ಮಾತನಾಡಿ, ತುಳುನಾಡಿನ ಜನ ಸ್ವಾಭಿಮಾನಿಗಳು, ಸುಲಭವಾಗಿ ಯಾರನ್ನೂ ಇಷ್ಟ ಪಡುವುದಿಲ್ಲ. ಹಾಗಿರುವಾಗ ನಿಮ್ಮ ಮನಸ್ಸಿನಲ್ಲಿ ನನಗೊಂದು ಚಿಕ್ಕ ಜಾಗ ಕೊಟ್ಟಿದ್ದಿರಿ. ಇಷ್ಟು ದೊಡ್ಡ ಸಾಧಕರು, ಕಲಾವಿದರಿದ್ದೀರಿ, ನಿಮ್ಮ ಮಧ್ಯೆ ನನ್ನನ್ನು ಕರೆಸಿಕೊಂಡಿರುವುದೇ ನನಗೆ ಖುಷಿ, ಹೆಮ್ಮೆ ಎಂದರು.

ನನ್ನ ತಂದೆಗೆ ನನ್ನ ತಾಯಿ ಸಿಕ್ಕಿದ್ದು ಈ ಊರಲ್ಲೇ. ಹಾಗಾಗಿ ಅಮ್ಮನಿಗೆ ಒಳ್ಳೆಯ ತುಳು ಬರುತ್ತದೆ. ಬದುಕಿನಲ್ಲಿ ಕೇವಲ ದುಡಿದು ತಿನ್ನೋದಷ್ಟೇ ಅಲ್ಲ, ಇತರರಿಗೆ ನೆರವಾಗುವುದಕ್ಕೆ ದೊಡ್ಡ ಮನಸ್ಸು ಬೇಕು, 8 ವರ್ಷದಲ್ಲಿ 11.5 ಕೋಟಿ ರೂ. ನೆರವು ಅಂದರೆ ದೊಡ್ಡದು ಎಂದ ಸುದೀಪ್‌, ಪಟ್ಲ ಫೌಂಡೇಶನ್‌ ಆಲದ ಮರದಂತೆ ಬೆಳೆದು ನಿಲ್ಲಲಿ ಎಂದು ಹಾರೈಸಿದರು.

ಚಲನಚಿತ್ರದ ಬಿಗ್‌ಬಾಸ್‌, ಯಕ್ಷರಂಗದ ಬಿಗ್‌ಬಾಸ್‌
ಸಮಾರಂಭದಲ್ಲಿ ಪಾಲ್ಗೊಳ್ಳಲು ಕಿಚ್ಚ ಸುದೀಪ್‌ ಬರುತ್ತಿರುವ ಬಗ್ಗೆ ಮಾತನಾಡಿದ ಒಡಿಯೂರು ಶ್ರೀಗಳು, ನಮ್ಮೊಡನೆ ಚಲನಚಿತ್ರ ರಂಗದ ಬಿಗ್‌ಬಾಸ್‌ ಸೇರಿಕೊಳ್ಳುತ್ತಾರೆ, ಆದರೆ ಯಕ್ಷರಂಗದ ಬಿಗ್‌ಬಾಸ್‌ ಪಟ್ಲ ಸತೀಶ್‌ ಶೆಟ್ಟರು, ಇಲ್ಲೆಲ್ಲ ಓಡಾಡುತ್ತಾ ಅನುಕರಣೀಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಲ ಸಂಭ್ರಮದ ಅಂಗಣದಿಂದ
-ಯಕ್ಷಗಾನ, ರಂಗಭೂಮಿ, ದೈವಾರಾಧನೆ, ಕಂಬಳದ 3,500 ಕಲಾವಿದರಿಗೆ ಅಪಘಾತ ವಿಮಾ ಯೋಜನೆ
-18 ಮಂದಿಗೆ ತಲಾ 20 ಸಾವಿರ ರೂ. ಕಲಾ ಗೌರವವನ್ನು ನೀಡಲಾಯಿತು.
-ಪಟ್ಲ ಯಕ್ಷಾಶ್ರಯ ಯೋಜನೆಯಡಿ ನಿವೇಶನರಹಿತ ಫಲಾನುಭವಿಗಳಿಗೆ ಕಿಚ್ಚ ಸುದೀಪ್‌ ತಲಾ 5 ಲಕ್ಷ ರೂ. ಚೆಕ್‌ ವಿತರಿಸಿದರು.
-ಅಶಕ್ತರಿಗೆ, ಗೃಹನಿರ್ಮಾಣಕ್ಕೆ ಸಹಾಯಧನ ನೀಡಲಾಯಿತು.
-ವೈದ್ಯಕೀಯ ನೆರವು, ವೈದ್ಯಕೀಯ ತಪಾಸಣೆ, ಕನ್ನಡಕ ವಿತರಣೆ ನಡೆಯಿತು.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.