![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 28, 2024, 6:53 AM IST
ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರಿಗೆ ಪಾಕಿಸ್ಥಾನ ಬೆಂಬಲ ನೀಡುತ್ತಿದೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಈ ಕುರಿತಾಗಿ ತನಿಖೆ ನಡೆಯಬೇಕು ಎಂದು ಪ್ರಧಾನಿ ಮೋದಿ ಸೋಮವಾರ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತ ನಾಡಿ, “ನಾನು ಇರುವ ಸ್ಥಾನದಿಂದ ಇಂತಹ ವಿಷಯಗಳ ಬಗ್ಗೆ ಮಾತನಾಡಬೇಕೆಂದು ನಾನು ಭಾವಿಸುವುದಿಲ್ಲ. ಆದರೆ ಈ ವಿಷಯದ ಬಗ್ಗೆ ನೀವು ಹೊಂದಿರುವ ಕಳವಳ ನನಗೆ ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.
“ನಮ್ಮೊಂದಿಗೆ ವೈರತ್ವ ಹೊಂದಿರುವವರನ್ನು ಕೆಲವೇ ಜನರು ಏಕೆ ಇಷ್ಟ ಪಡುತ್ತಾರೆ ಮತ್ತು ಆ ಕೆಲವೇ ಜನರಿಗೆ ಏಕೆ ಅಲ್ಲಿಂದ ಬೆಂಬಲ ವ್ಯಕ್ತವಾಗುತ್ತದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಭಾರತದ ಚುನಾವಣೆ
ಮತ್ತು ಪ್ರಜಾಪ್ರಭುತ್ವ ಪ್ರಬುದ್ಧವಾಗಿದೆ. ಹಾಗೆಯೇ ಉತ್ತಮವಾದ ಸಂಪ್ರದಾಯವನ್ನು ಹೊಂದಿದೆ. ಭಾರತದ ಮತದಾರರು ಈಗ ಪ್ರಬುದ್ಧರಾಗಿದ್ದಾರೆ. ಗಡಿಯಾಚೆ ಯಿಂದ ಬರುವ ಹೇಳಿಕೆಗಳು ಭಾರತದ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದರು.
ವಿವಾದವೇನು?
-ಕೇಜ್ರಿವಾಲ್ ಬಿಡುಗಡೆಯಾದಾಗ ಪಾಕ್ ಮಾಜಿ ಸಚಿವ ಫವಾದ್, “ಥಂಬ್ಸ್ ಅಪ್’ ಎಂದು ಟ್ವೀಟ್ ಮಾಡಿದ್ದರು.
-ರಾಹುಲ್ ಗಾಂಧಿ ವೀಡಿಯೋವನ್ನು ಹಂಚಿಕೊಂಡಿದ್ದ ಫವಾದ್, ರಾಹುಲ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.
-ಕೇಜ್ರಿವಾಲ್ ಮತದಾನದ ಫೋಟೋಗೆ, “ದ್ವೇಷದ ವಿರುದ್ಧ ಶಾಂತಿ ಗೆಲ್ಲಲಿ’ ಎಂದಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.