Surathkal: ಗುತ್ತಿಗೆ ಕಾರ್ಮಿಕ ಬಿದ್ದು ಸಾವು
Team Udayavani, May 28, 2024, 10:20 PM IST
ಸುರತ್ಕಲ್: ಜೆ.ಸಿ. ಎಂಜಿನಿಯರಿಂಗ್ ಝಾರ್ಖಂಡ್ ಕಂಪೆನಿಯ ಉದ್ಯೋಗಿ ಎಂಆರ್‌ಪಿಎಲ್‌ನ 2 ಹೈಡ್ರೋ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಮಂಗಳವಾರ ನಡೆದಿದೆ.
ಝಾರ್ಖಂಡ್ ರಾಜ್ಯದ ರಾಂಚಿ ನಿವಾಸಿ ಮಂಗಳ ಓರನ್ (38) ಮೃತ ಕಾರ್ಮಿಕ.
120 ಅಡಿ ಎತ್ತರವಿದ್ದ ಘಟಕದ ಮೇಲ್ಭಾಗದಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸಲು ಮೇಲೆ ಹತ್ತಿದ್ದರು. ಕೆಲಸ ಮಾಡುತ್ತಿದ್ದ ಸಂದರ್ಭ ಸುರಕ್ಷಾ ವಿಧಾನ ಅನುಸರಿಸಿ ಕೆಲಸ ಮಾಡಿದ್ದರೆ ಅವಘಡ ತಪ್ಪುತ್ತಿತ್ತು ಎನ್ನಲಾಗಿದೆ. ಸಂಬಂಧಪಟ್ಟ ಗುತ್ತಿಗೆದಾರ ಕಂಪೆನಿ ಹಾಗೂ ಇತರರ ವಿರುದ್ಧ ಸುರತ್ಕಲ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.