Pen Drive Case ಪ್ರಜ್ವಲ್ ವಿಡಿಯೋ ಮಾಡಿರುವುದು ಎಲ್ಲಿಂದ?: ಪತ್ತೆಗಿಳಿದ ಎಸ್ಐಟಿ
Team Udayavani, May 29, 2024, 6:39 AM IST
ಬೆಂಗಳೂರು: ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 31ರಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ ಸಂಸದ ಪ್ರಜ್ವಲ್ ರೇವಣ್ಣ ವೀಡಿಯೋ ಯಾವ ದೇಶದಿಂದ ಬಂದಿದೆ ಎನ್ನುವುದರ ಜಾಡು ಹಿಡಿಯಲು ಎಸ್ಐಟಿ ಹೊರಟಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರು ರಾಜ್ಯದ ಜನತೆ, ತಾತಾ ಎಚ್.ಡಿ. ದೇವೇಗೌಡ, ಚಿಕ್ಕಪ್ಪ ಕುಮಾರಸ್ವಾಮಿ, ತಂದೆ-ತಾಯಿಗೆ ಕ್ಷಮಾಪಣೆ ಕೇಳಿ, ಮೇ 31ರಂದು ವಿಚಾರಣೆಗೆ ಹಾಜರಾಗುವುದಾಗಿ ಹೇಳಿರುವ ವೀಡಿಯೋ ಯಾವ ದೇಶದಿಂದ ಹರಿಯಬಿಟ್ಟಿದ್ದಾರೆ ಎಂಬ ಬಗ್ಗೆ ಎಸ್ಐಟಿ ಮಾಹಿತಿ ಕಲೆ ಹಾಕುತ್ತಲೇ ಇದೆ. ಪ್ರಜ್ವಲ್ ರೇವಣ್ಣ ಸಂಪರ್ಕಕ್ಕೂ ಎಸ್ಐಟಿ ಪ್ರಯತ್ನಿಸುತ್ತಿದೆ.
ವಿದೇಶದಿಂದ ನೇರವಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಾರೆ ಅಥವಾ ಬೇರೆ ವಿಮಾನ ನಿಲ್ದಾಣಕ್ಕೆ ಬರುತ್ತಾರಾ ಎಂಬ ಬಗ್ಗೆಯೂ ನಿಗಾ ಇಟ್ಟಿರುವ ಎಸ್ಐಟಿಯು ಪ್ರಜ್ವಲ್ ಟಿಕೆಟ್ ಬುಕ್ ಮಾಡುವುದನ್ನೇ ಕಾದು ಕುಳಿತಿದೆ. ಯಾವ ರಾಜ್ಯಕ್ಕೆ ಪ್ರಜ್ವಲ್ ಬಂದು ಇಳಿದರೂ ವಶಕ್ಕೆ ಪಡೆಯಲು ಎಸ್ಐಟಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಸೋಮವಾರ ಎಸ್ಐಟಿ ಅಧಿಕಾರಿಗಳ ಸಭೆಯೂ ನಡೆದಿದೆ. ಪ್ರಜ್ವಲ್ ರೇವಣ್ಣ ವಾಪಸ್ ಆದ ಬಳಿಕ ಅವರನ್ನು ವಿಚಾರಣೆ ಮಾಡುವುದು ಸೇರಿದಂತೆ ಕೈಗೊಳ್ಳುವ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundurao; ತಿಂಗಳೊಳಗೆ ಗೃಹ ಆರೋಗ್ಯ ಯೋಜನೆ ಜಾರಿ
BJP Meeting: ದಾವಣಗೆರೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ ಇಂದು ಮಹತ್ವದ ಸಭೆ
Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.