Team India ಕೋಚ್ ಹುದ್ದೆಗೆ ಮೋದಿ, ಶಾ, ಧೋನಿ, ಶಾರುಖ್, ಸಚಿನ್ ಅರ್ಜಿ! ಏನಿದರ ಅಸಲೀಯತ್ತು?
Team Udayavani, May 29, 2024, 10:12 AM IST
ಮುಂಬೈ: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಟಿ20 ವಿಶ್ವಕಪ್ ಗೆ ಅಂತ್ಯವಾಗುವ ಕಾರಣದಿಂದ ಹೊಸ ಕೋಚ್ ನೇಮಕಕ್ಕೆ ಬಿಸಿಸಿಐ ಮುಂದಾಗಿದೆ. ಅದಕ್ಕಾಗಿ ಅರ್ಜಿ ಕೂಡಾ ಆಹ್ವಾನ ಮಾಡಿದೆ.
ಆದರೆ ಕೋಚ್ ಹುದ್ದೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಸಚಿನ್ ತೆಂಡುಲ್ಕರ್, ಎಂ.ಎಸ್.ಧೋನಿ, ನಟ ಶಾರುಖ್ ಖಾನ್ ಹೆಸರಲ್ಲೂ ಅರ್ಜಿಗಳು ಸಲ್ಲಿಕೆಯಾಗಿವೆ! ಆದರೆ ಇದೆಲ್ಲಾ ನಕಲಿ.
ಮೇ 27ಕ್ಕೆ ಅರ್ಜಿ ಸಲ್ಲಿಸಲು ಗಡುವು ಮುಗಿದ ಮೇಲೆ ಒಟ್ಟು 3000 ಅರ್ಜಿಗಳು ಬಂದಿವೆ, ಅದರಲ್ಲಿ ಬಹುತೇಕ ನಕಲಿ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಬಿಸಿಸಿಐ ಈ ಹಿಂದೆ ಅರ್ಜಿ ಕರೆದಿದ್ದಾಗಲೂ ಇಂತಹ ಘಟನೆಗಳು ನಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹರ್ಭಜನ್ ಸಿಂಗ್, ವೀರೇಂದ್ರ ಸೆಹವಾಗ್ ಹೆಸರುಗಳು ನಕಲಿ ಅರ್ಜಿದಾರರಲ್ಲಿ ಸೇರಿವೆ. 2022ರಲ್ಲಿ ಬಿಸಿಸಿಐ ಅರ್ಜಿ ಕರೆದಿದ್ದಾಗ ನಕಲಿ ಅರ್ಜಿಗಳ ಸಂಖ್ಯೆಯೇ 5000 ಇದ್ದವು.
ಗಂಭೀರ್ ಹೆಸರು ಅಂತಿಮ?
ಇತ್ತೀಚೆಗಷ್ಟೇ ಕೆಕೆಆರ್ ಐಪಿಎಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾ ಮುಂದಿನ ಕೋಚ್ ಆಗುವುದು ಬಹುತೇಕ ಅಂತಿಮ ಎನ್ನಲಾಗಿದೆ.
ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗಿದ್ದಾರೆ, ಅಧಿಕೃತ ಘೋಷಣೆಯಷ್ಟೇ ಬಾಕಿ ಎಂದು ಮೂಲಗಳು ಹೇಳಿವೆ. ಐಪಿಎಲ್ ಫ್ರಾಂಚೈಸಿಯೊಂದರ ಅತಿ ಪ್ರಭಾವಿ ಮಾಲಿಕರೊಬ್ಬರು ಈ ಮಾಹಿತಿ ನೀಡಿದ್ದಾರೆಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಫ್ರಾಂಚೈಸಿಯ ಪ್ರಭಾವಿ ಮಾಲಿಕ, “ಗೌತಮ್ ಗಂಭೀರ್ ಕೋಚ್ ಆಗುವ ಒಪ್ಪಂದ ನಡೆದಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆಯಾಗಲಿದೆ’ ಎಂದಿದ್ದಾರಂತೆ. ಹಾಗೆಯೇ ಪ್ರಭಾವಿ ವೀಕ್ಷಕ ವಿವರಣೆಕಾರರೊಬ್ಬರು ಕೋಲ್ಕತ ಮೆಂಟರ್ ಅನ್ನು ಒಳಕ್ಕೆ ತರಲು ಗಂಭೀರ ಯತ್ನ ಸಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.