Movie Review: ಸಿನೆರಂಗ; ರಾಮನ ಅವತಾರ


Team Udayavani, May 29, 2024, 2:17 PM IST

10-ramana-avathara

ಹಳ್ಳಿಯನ್ನು ಉದ್ದಾರ ಮಾಡುವ ಕನಸು ಅವನದು. ಏನೇ ಆದರೂ ಹಳ್ಳಿಯನ್ನು ಬಿಟ್ಟು ಹೋಗಬಾರದು, ಕೆಲಸಕ್ಕಾಗಿ ಸಿಟಿಗೆ ಹೋದವರು ಮತ್ತೆ ಹಳ್ಳಿಗೆ ಬಂದು ಇಲ್ಲೇ ಕೆಲಸ ಮಾಡುವಂತೆ ಪಣ ತೊಡುವ ರಾಮ. ಆದರೆ ಅವನೇ ಹಳ್ಳಿಯನ್ನು ಬಿಡುವ ವಿಪರ್ಯಾಸ ಉಂಟಾಗುತ್ತದೆ.

ಊರು ಬಿಟ್ಟು ಸಾಗುವ ಪಯಣದ ಹಾದಿಯೇ ಅಧ್ಯಾಯ-2. ಅಲ್ಲಿ ರಾಮನಿಗೆ ಸಿಗುವ ಹೀರೋಯಿನ್‌, ವಿಲ್ಲನ್‌, ಎಲ್ಲವೂ ರಾಮಾಯಣದ ಪರಿಕಲ್ಪನೆಯಡಿಯಲ್ಲಿ ಆಧುನಿಕವಾಗಿ ಹಾಸ್ಯಭರಿತವಾಗಿ ಸಾಗುತ್ತದೆ. ಇದು ರಿಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ರಾಮನ ಅವತಾರ’ ಸಿನೆಮಾ.

ಈ ರೀತಿ ಸಾಗುವ ಕಥೆಯಲ್ಲಿ ನಡು ನಡುವೆ ಸಂಭಾಷಣೆಯಲ್ಲಿ ಕೊಡುವ ಜಲಕ್‌, ಎಮೋಶನ್‌ ಹಾಗೂ ನೀತಿಪಾಠಗಳು ಎಲ್ಲಿಯೂ ಮೋಸ ಮಾಡಿಲ್ಲ. ರುಚಿಗೆ ತಕ್ಕಷ್ಟು ಉಪ್ಪು ಬಳಸುವಂತೆ ಕಥೆಗೆ ತಕ್ಕಷ್ಟು ಹಾಸ್ಯ, ಮನೋರಂಜನೆ, ಮಾಸ್‌ ಎಲಿಮೆಂಟ್‌ ಸೇರಿಸಿದ್ದಾರೆ.

ಇನ್ನು ಕೊನೆಯ ಭಾಗವೇ ಸಂಹಾರ. ರಾಮ ಅನ್ನೋ ಹೆಸರು ಇದೆ ಅಂದಮೇಲೆ ಯುದ್ಧ ಇರಲೇ ಬೇಕು ಅಲ್ವಾ? ಕ್ಲೈಮ್ಯಾಕ್ಸ್‌ ಅಲ್ಲಿ ಬರುವ 2 ನಿಮಿಷದ ಆಕ್ಷನ್‌ ಪ್ಯಾಕ್‌, ಕಡಕ್‌ ಲುಕ್‌ ಜನರನ್ನು ಹುರಿದುಂಬಿಸುತ್ತದೆ. ನಾಯಕನ ಪ್ರೀತಿಯ ಪಯಣದಲ್ಲಿ ಕಂಡು ಬರುವ ಸಂಭಾಷಣೆ, ಸೀತೆಯನ್ನು ಅವನ ಪ್ರೇಮ ಬಲೆಗೆ ಬೀಳಿಸಿಕೊಳ್ಳುವ ಅವನ ಮಾತಿನ ವರಸೆ, ಮಾತಿನ ಚಕಮಕಿ ಪ್ರೇಕ್ಷಕರ ಮುಖದಲ್ಲಿ ನಗು ಹುಟ್ಟುಹಾಕುತ್ತದೆ.

ಚಿತ್ರದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ. ಇದರೊಟ್ಟಿಗೆ ಬೆರೆತ ಮಂಗಳೂರು ಕನ್ನಡದ ಉಚ್ಚಾರಣೆ ಕಥೆಗೆ ಮತ್ತಷ್ಟು ಸ್ವಾಧ ತಂದಿದೆ. ದೃಶ್ಯಕ್ಕೆ ತಕ್ಕನಾದ ಮೆಲೋಡಿಸ್‌, ಬಿಜಿಎಂ ಹಾಗೂ ಸಂಜಿತ್‌ ಹೆಗ್ಡೆಯವರ ಧ್ವನಿ ಕಿವಿಗೆ ಹಿಂಪು ಎನ್ನಿಸುತ್ತದೆ.

ಅರುಣ್‌ ಸಾಗರ್‌ ಅವರ ನಟನಾ ಚಾತುರ್ಯ ಎಂದಿನಂತೆ ಹೊಸದೇನಲ್ಲ. ಆದರೂ ಅವರ ಮಂಗಳೂರು ಭಾಷೆ ಉಚ್ಚಾರಣೆ ಅಬ್ಟಾ ಅನ್ನಿಸುವುದರಲ್ಲಿ ಮತ್ತೂಂದು ಮಾತಿಲ್ಲ. ಕರಾವಳಿಯ ಸೊಬಗನ್ನು ಕೆಮರಾದಲ್ಲಿ ಸೆರೆಹಿಡಿಯುವಲ್ಲಿ ಛಾಯಾಗ್ರಾಹಕರು ಗೆದ್ದಿದ್ದಾರೆ.

ಹುಡುಗಿಯರ ಕಿಡ್ನಾಪ್‌ ದಂದೆ, ಮಾದಕ ವಸ್ತುವಿನ ದುಷ್ಪರಿಣಾಮಗಳು ಎಲ್ಲವೂ ಚಿತ್ರದಲ್ಲಿ ಸಮಾಜಕ್ಕೆ ದೊರಕುವ ಉತ್ತಮ ಸಂದೇಶ. ಕ್ಲೆçಮ್ಯಾಕ್ಸ್‌ನಲ್ಲಿ ಲಾಜಿಕ್‌ ಹುಡುಕಿದರೆ ಬೇಸರವಾಗಬಹುದು.. ಅದನ್ನು ಹೊರತುಪಡಿಸಿ ಹಾಸ್ಯಕ್ಕೆ, ಮನರಂಜನೆಗೆ ಕಿಂಚಿತ್ತೂ ಮೋಸವಿಲ್ಲ. ಪೈಸಾ ವಸೂಲ್‌ ಚಿತ್ರ ಎಂದರೆ ತಪ್ಪಾಗದು.

ಇನ್ನು ಹಳ್ಳಿ ಉದ್ಧಾರ ಮಾಡುವುದಾಗಿ ಪಣ ತೊಟ್ಟ ರಾಮ ಹಳ್ಳಿ ಬಿಡುವುದು ಯಾಕೆ? ಸೀತೆಯ ಅಪಹರಣ ಮಾಡುವುದು ಯಾಕೆ? ಈ ಆಧುನಿಕ ರಾಮಾಯಣದಲ್ಲಿ ವಾನರ ಸೇನೆ ಎಲ್ಲಿದೆ? ರಾಮ ತನ್ನ ಬದುಕಿನಲ್ಲಿ ಗೆಲ್ಲುವನೇ, ರಾವಣನ ವಧೆ ಆಗುವುದೇ? ಹಾಗೂ ಈ ಕಥೆಯಲ್ಲಿ ಲಕ್ಷ್ಮಣ ಯಾರು? ಎಂಬುದಕ್ಕೆ ಉತ್ತರ ತಿಳಿದುಕೊಳ್ಳಲು ನೀವು ಸಿನೆಮಾ ನೋಡಲೇಬೇಕು.

ಒಟ್ಟಾರೆ ಇದೊಂದು ವಿಭಿನ್ನ ಪ್ರಯತ್ನ, ಹೊಸ ರೀತಿಯ ಫ್ರೆಶ್‌ ಕಾನ್ಸೆಪ್ಟ್. ಜನರನ್ನು ಒಂದು ಇಂಚು ಆಚೆ ಇಚೆ ಅಲ್ಲಾಡದಂತೆ ಚಿತ್ರ ಬಂಧಿ ಮಾಡಿ ಕೊನೆಯ ತನಕ ಕಥಾ ಲೋಕದಲ್ಲಿ ಮುಳುಗಿಸುತ್ತದ್ದೆ.

ವಿಕಾಸ್‌ ಪಂಪಾಪತಿ ಅವರ ನಿರ್ದೇಶನ ನಿಜಕ್ಕೂ ಅದ್ಭುತ. ಸ್ಟೋರಿ ಲೈನ್‌ ಹೊಸ ತಂತ್ರಜ್ಞಾನದ ಬಳಕೆ, ಕಲರ್‌ ಗ್ರೇಡಿಂಗ್‌ ಐಡಿಯಾ ತುಂಬಾ ಹೊಸತೆನಿಸುತ್ತದೆ. ಲಾಜಿಕ್‌ ಹಾಗೂ ಪದ್ಯದ ಮೇಲೆ ಇನ್ನಷ್ಟು ಗಮನ ಕೊಟ್ಟಿದ್ದರೆ ಕಥೆ ಮತ್ತಷ್ಟು ಚೂಪಾಗಿ ಕಂಡು ಬರುತ್ತಿತ್ತು. ಆದರೆ ಆಕ್ಷನ್‌, ಹಾಸ್ಯ, ಪ್ರೀತಿ, ಎಮೋಷನ್‌ಗೆ ಯಾವುದೇ ರೀತಿಯ ಕೊರತೆ ಇಲ್ಲ.

-ರಕ್ಷಿತ್‌ ಆರ್‌.ಪಿ.

ಹೆಬ್ರಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

Ganesh Chaturthi: ಗಣೇಶ ಬಂದ

14-wayanad

Wayanad: ವಯನಾಡಿನ ಪ್ರಕೃತಿ ವಿಕೋಪ ಮತ್ತು ಮಾನವೀಯತೆ

13-

UV Fusion: ಅನಾಹುತಕಾರಿ ಮಾನವ

11

UV Fusion: ನಮ್ಮ ಔನ್ನತ್ಯವನ್ನು ನಾವೇ ನಿರ್ಧರಿಸಬೇಕಲ್ಲವೇ?

10-

Childhood: ಈ ಬಾಲ್ಯ ಮತ್ತೊಮ್ಮೆ ಮರುಕಳಿಸಬಾರದೇ?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.