School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

Team Udayavani, May 29, 2024, 6:06 PM IST

School Opening; ಚಿಣ್ಣರ ಸ್ವಾಗತಕ್ಕೆ ರಬಕವಿ-ಬನಹಟ್ಟಿ ತಾಲೂಕು ಸಜ್ಜು

ರಬಕವಿ-ಬನಹಟ್ಟಿ : ಮೇ 29 ರಂದು ಶಾಲೆಗಳು ಪ್ರಾರಂಭವಾಗಿದ್ದು, ಮೇ 31ರಂದು ಶಾಲಾ ಪ್ರಾರಂಭೋತ್ಸವ ನಿಮಿತ್ಯ ಚಿಣ್ಣರನ್ನು ಶಾಲೆಗೆ ಸ್ವಾಗತಿಸಲು ಸಕಲ ಸಿದ್ಧತೆಗಳನ್ನು ಶಿಕ್ಷಣ ಇಲಾಖೆ ಕೈಗೊಳ್ಳುತ್ತಿದೆ.

ಮೇ 29 ಹಾಗೂ 30 ರಂದು ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ಪೂರ್ವ ತಯಾರಿಯಲ್ಲಿ ತೊಡಗಲಿದ್ದಾರೆ. ಶಾಲಾ ಕೋಣೆ, ಆವರಣ, ಅಡುಗೆ ಕೋಣೆ, ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು, ನೀರಿನ ಟ್ಯಾಂಕ್ ಇತ್ಯಾದಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಲಿದ್ದು, ಶಿಕ್ಷಕರು ತರಗತಿ, ಶಾಲಾ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಸಿದ್ಧಪಡಿಸಿಕೊಂಡು ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದಾರೆ.

ಮೇ 31 ಪ್ರಾರಂಭೋತ್ಸವ: ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ ಶಾಲಾ ವಾತಾವರಣವನ್ನ ಆಕರ್ಷಕಗೊಳಿಸಿ ಅತ್ಯಂತ ಉತ್ಸಾಹದಿಂದ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಎಸ್ ಡಿಎಂಸಿ ಹಾಗೂ ಪೋಷಕರು ಸೇರಿ ಶಾಲಾ ಮಕ್ಕಳನ್ನು ಸ್ವಾಗತಿಸಲಿದ್ದಾರೆ. ಮಧ್ಯಾಹ್ನದ ಬಿಸಿ ಊಟವನ್ನು ಸಿಹಿಯೊಂದಿಗೆ ಆರಂಭಿಸಿ ಶಾಲೆಯನ್ನು ಆಕರ್ಷಕ ಕೇಂದ್ರ ಮಾಡಲು ಶಿಕ್ಷಣ ಇಲಾಖೆ ಸಜ್ಜಾಗಿದೆ.

ಗುಣಾತ್ಮಕ ಶೈಕ್ಷಣಿಕ ವರ್ಷ: ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಗುಣಾತ್ಮಕ ಶೈಕ್ಷಣಿಕ ವರ್ಷ ಎಂದು ಆಚರಿಸಲಾಗುತ್ತಿದ್ದು ಪರಿಣಾಮಕಾರಿಯಾದ ಮತ್ತು ರಚನಾತ್ಮಕ ಚಟುವಟಿಕೆಗಳನ್ನು ಶಾಲೆಗಳು ಸಂಘಟಿಸಲು ಸೂಚನೆಗಳನ್ನು ನೀಡಲಾಗಿದೆ. ಶಿಕ್ಷಕರು ನಿತ್ಯದ ಚಟುವಟಿಕೆಗಳು, ವಾರದ ವಿಶೇಷಗಳು, ಮಾಸಿಕ ಕಾರ್ಯಕ್ರಮಗಳು ಇವುಗಳನ್ನು ಒಳಗೊಂಡ ಸಮಗ್ರ ಯೋಜನೆಯನ್ನು ರೂಪಿಸಿಕೊಂಡು ಕಾರ್ಯ ಪ್ರವೃತ್ತರಾಗಲಿದ್ದಾರೆ.

ಮಿಂಚಿನ ಸಂಚಾರ : ಶಾಲಾ ಸಿದ್ಧತೆ, ಸ್ವಚ್ಛತೆ, ಶಿಕ್ಷಕರ ತಯಾರಿ ಹಾಗೂ ಮಕ್ಕಳ ಹಾಜರಾತಿ ಕುರಿತು ಪರಿಶೀಲಿಸಲು ಶಿಕ್ಷಣ ಇಲಾಖೆ ವಿವಿಧ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು ಮಿಂಚಿನ ಸಂಚಾರ ಕೈಗೊಳ್ಳಲಿವೆ.

ಸೇತುಬಂಧ ಕಾರ್ಯಕ್ರಮ: ಸೇತುಬಂಧ ಶಿಕ್ಷಣ ವಾಗಲಿದ್ದು ಒಂದರಿಂದ ಮೂರನೇ ತರಗತಿಗಳಿಗೆ 30 ದಿನಗಳು ಹಾಗೂ ನಾಲ್ಕರಿಂದ 10ನೇ ತರಗತಿಗಳಿಗೆ 15 ದಿನಗಳು ಸೇತುಬಂಧ ಶಿಕ್ಷಣವನ್ನು ನಿರ್ವಹಿಸಲಾಗುತ್ತದೆ. ಈ ಅವಧಿಯಲ್ಲಿ ಮಕ್ಕಳ ಕಲಿಕಾ ನ್ಯೂನ್ಯತೆಗಳನ್ನು ಗುರುತಿಸಿ ಪರಿಹಾರ ಬೋಧನೆ ಮಾಡುವ ಮೂಲಕ ಮಕ್ಕಳನ್ನು ಮುಂದಿನ ಕಲಿಕೆಗೆ ಅಣಿ ಮಾಡಲಾಗುತ್ತದೆ.

ಶಾಲಾ ದಾಖಲಾತಿ ಆಂದೋಲನ : ಶಾಲೆಗೆ ದಾಖಲಾಗದಿರುವ ಅರ್ಹ ವಯಸ್ಸಿನ ಮಕ್ಕಳು ಹಾಗೂ ಶಾಲೆಯನ್ನು ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಸೇರಿಸಲು ದಾಖಲಾತಿ ಆಂದೋಲನ ಕೈಗೊಳ್ಳಲಾಗುತ್ತದೆ. 2024ರ ಜೂನ್ ಒಂದಕ್ಕೆ ನಾಲ್ಕು ವರ್ಷ ತುಂಬಿದ ಎಲ್ಲ ಮಕ್ಕಳು ಎಲ್‌ಕೆಜಿ ತರಗತಿಗೆ ದಾಖಲಾಗಲು ಅರ್ಹ ಆಗಿರುತ್ತಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪಠ್ಯ ಪುಸ್ತಕಗಳ ಪೂರೈಕೆ: ಈಗಾಗಲೇ ಬಹುತೇಕ ಪಠ್ಯ ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದ್ದು ಶಾಲಾ ಪ್ರಾರಂಭೋತ್ಸವದಂದು ಮಕ್ಕಳ ಕೈ ಸೇರಲಿವೆ.

ಅತಿಥಿ ಶಿಕ್ಷಕರ ನೇಮಕ : ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರು ನೇಮಿಸಿಕೊಳ್ಳುವ ಮೂಲಕ ಕಲಿಕಾ ಬೋಧನಾ ಪ್ರಕ್ರಿಯೆಗೆ ತೊಂದರೆಯಾಗದಂತೆ ಕ್ರಮವಹಿಸಲಾಗುತ್ತಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಹಬ್ಬದ ವಾತಾವರಣ ನಿರ್ಮಿಸಿ ಮಕ್ಕಳನ್ನು ಸಿಹಿಯೊಂದಿಗೆ ಸ್ವಾಗತಿಸಲು ನಮ್ಮ ಶಾಲೆಗಳು ಸನ್ನದ್ಧವಾಗಿವೆ. ಶಿಥಿಲಗೊಂಡ ಕೊಠಡಿಗಳಲ್ಲಿ ಮಕ್ಕಳನ್ನು ಕೂಡಿಸದಂತೆ ಎಚ್ಚರಿಕೆ ನೀಡಲಾಗಿದ್ದು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಎಲ್ಲ ಕ್ರಮ ವಹಿಸಲು ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ.
-ಅಶೋಕ್ ಬಸಣ್ಣವರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಜಮಖಂಡಿ

2024-25ನೇ ಶೈಕ್ಷಣಿಕ ವರ್ಷ ಮಕ್ಕಳ ಕಲಿಕೆಯಲ್ಲಿ ಗರಿಷ್ಠ ಕಲಿಕೆಯ ಮೈಲುಗಲ್ಲಾಗಲಿ ಎಂಬ ಆಶಯವಿದ್ದು ಶೈಕ್ಷಣಿಕ ವರ್ಷ ಆರಂಭಕ್ಕೆ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
-ಶ್ರೀಶೈಲ ಬುರ್ಲಿ, ಶಿಕ್ಷಣ ಸಂಯೋಜಕರು, ಜಮಖಂಡಿ

-ಕಿರಣ ಶ್ರೀಶೈಲ ಆಳಗಿ

ಟಾಪ್ ನ್ಯೂಸ್

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

Mudhol ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ

Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ

Minister RB Timmapur ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ಮಾಡುತ್ತಿದೆ

ಬಾಗಲಕೋಟೆ: ಫಲಾನುಭವಿಗಳಿಗೆ ಸಾಲ ವಿಳಂಬ ಮಾಡಬೇಡಿ-ಶಶಿಧರ ಕುರೇರ

ಬಾಗಲಕೋಟೆ: ಫಲಾನುಭವಿಗಳಿಗೆ ಸಾಲ ವಿಳಂಬ ಮಾಡಬೇಡಿ-ಶಶಿಧರ ಕುರೇರ

Mudhol: ತಾಯಿ-ಮಗು ಆಸ್ಪತ್ರೆ ಅನುಷ್ಠಾನಕ್ಕೆ‌ ಕ್ರಮ: ಸಚಿವ ದಿನೇಶ್ ಗುಂಡೂರಾವ್

Mudhol: ತಾಯಿ-ಮಗು ಆಸ್ಪತ್ರೆ ಅನುಷ್ಠಾನಕ್ಕೆ‌ ಕ್ರಮ: ಸಚಿವ ದಿನೇಶ್ ಗುಂಡೂರಾವ್

BJP-protest

Congress Government: ತೈಲ, ಹಾಲಿನ ದರ ಹೆಚ್ಚಿಸಿ ಬಡವರಿಗೆ ಅನ್ಯಾಯ 

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು

Modi,-Dravid

T-20 World Cup: ದೂರವಾಣಿ ಕರೆ ಮಾಡಿ ಭಾರತ ತಂಡಕ್ಕೆ ಶುಭ ಹಾರೈಸಿದ ಮೋದಿ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

1

T20 world cup: ವಿಶ್ವಕಪ್‌ ದಿಗ್ವಿಜಯ… ಅಂದು – ಇಂದು 

shivamogga

Shimoga; ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ಸಚಿವ ಕುಮಾರಸ್ವಾಮಿ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.