ಹೊರಬಿತ್ತು ಅಂಬಾನಿ ಪುತ್ರನ ವೆಡ್ಡಿಂಗ್ ಕಾರ್ಡ್: ಎಲ್ಲಿ,ಯಾವಾಗ,ವಿಶೇಷಗಳೇನು? ಇಲ್ಲಿದೆ ವಿವರ
Team Udayavani, May 30, 2024, 5:55 PM IST
ಮುಂಬಯಿ: ಉದ್ಯಮಿ ಮುಕೇಶ್ – ನೀತಾ ಅಂಬಾನಿ ಪುತ್ರ ಅನಂತ್ – ರಾಧಿಕಾ ಮರ್ಚೆಂಟ್ ಅವರ ಎರಡನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಇಟಲಿಯಲ್ಲಿ ನಡೆಯುತ್ತಿದೆ.
ಬಿಟೌನ್ ನ ಖ್ಯಾತ ಸೆಲೆಬ್ರಿಟಿಗಳು ಸೇರಿದಂತೆ ಅಂಬಾನಿ ಕುಟುಂಬದ ಆತ್ಮೀಯರು ಕ್ರೂಸ್ ನಲ್ಲಿ ನಡೆಯುತ್ತಿರುವ ಅದ್ಧೂರಿ ಪ್ರೀ ವೆಡ್ಡಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಇದೀಗ ಅನಂತ್ – ರಾಧಿಕಾ ಅವರ ವಿವಾಹ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಗುರುವಾರ(ಮೇ.30 ರಂದು) ʼಸೇವ್ ದಿ ಡೇಟ್ʼ ಎಂದು ಬರೆದಿರುವ ಆಮಂತ್ರಣ ಪತ್ರ ರಿವೀಲ್ ಆಗಿದೆ. ಕೆಂಪು ಮತ್ತು ಚಿನ್ನದ ಸಾಂಪ್ರದಾಯಿಕ ಶೇಡ್ಸ್ ನಿಂದ ವಿನ್ಯಾಸಗೊಳಿಸಲಾದ ಆಹ್ವಾನ ಪತ್ರಿಕೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ವಿವರವನ್ನು ಬಹಿರಂಗಪಡಿಸಲಾಗಿದೆ.
ಜುಲೈ 12 ರಂದು ನಡೆಯುವ ಸಮಾರಂಭಕ್ಕೆ ʼಶುಭ್ ವಿವಾಹʼ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮಕ್ಕೆ “ಭಾರತೀಯ ಸಾಂಪ್ರದಾಯಿಕ” ಡ್ರೆಸ್ ಕೋಡ್ ಇರಲಿದೆ.
ಜುಲೈ 13 ರಂದು “ಶುಭ್ ಆಶೀರ್ವಾದ್ ” ಸಮಾರಂಭ ನಡೆಯಲಿದೆ. ಇದರಲ್ಲಿ ಭಾರತದ ಫಾರ್ಮಲ್ ಡ್ರೆಸ್ ಕೋಡ್ ಇರಲಿದೆ.
ಜುಲೈ 14 ರಂದು ʼಮಂಗಲ್ ಉತ್ಸವ್ʼ(ಮದುವೆ ಆರತಕ್ಷತೆ) ನಡೆಯಲಿದೆ. ಈ ಸಮಾರಂಭದಲ್ಲಿ ಭಾರತದ ಸ್ಟೈಲಿಸ್ಟ್ ಉಡುಗೆಗಳ ಡ್ರೆಸ್ ಕೋಡ್ ಇರಲಿದೆ.
ಎಲ್ಲಾ ಸಮಾರಂಭ ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ.
ಸದ್ಯ ಈ ಮದುವೆ ಆಮಂತ್ರಣ ಪತ್ರವನ್ನು ಅಂಬಾನಿ ಕುಟುಂಬಸ್ಥರು ಕೆಲವರಿಗೆ ಮಾತ್ರ ಕಳುಹಿಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.