Dream: ಕಾಣುವ ಕನಸು ದೊಡ್ಡದಿರಲಿ


Team Udayavani, May 31, 2024, 2:40 PM IST

14-dream

ಕನಸು …ಇದು ನಮ್ಮನ್ನು ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಇದರಿಂದ ನಮಗೆ ಖುಷಿಯನ್ನು ಕೊಡುತ್ತದೆ ದುಃಖವನ್ನು ಕೊಡುತ್ತದೆ ಭಯವನ್ನು ತರಿಸುತ್ತದೆ ಧೈರ್ಯವನ್ನು ಕೊಡುತ್ತದೆ. ಇದು ಬರುವುದು ಕೆಲವು ನಿಮಿಷಗಳು ಆದರೂ ಇದರ ಪರಿಣಾಮ ಬೇರೇನೇ ಇರುತ್ತದೆ.

ನನಗೆ ತಿಳಿದ ಹಾಗೆ ಕನಸಿನಲ್ಲಿ ಎರಡು ವಿಧ. ಒಂದು ನಿದ್ರೆ ಮಾಡುವಾಗ ಬರುವ ಕನಸು ಇನೊಂದು ನಮಗೆ ನಿದ್ರೆ ಮಾಡಲು ಬಿಡದ ಕನಸು… ಮನುಷ್ಯನು ಭವಿಷ್ಯದ ಬಗೆ ಕನಸು ಕಾಣುವುದು ಸಹಜ, ಆದರೆ ಅದೇ ಕನಸನ್ನು ದೊಡ್ಡದಾಗಿ ಕಾಣಬೇಕು ನಾವು ಅದನು ನನಸಾಗಿಸುವ ಹಾದಿಯಲ್ಲಿ ನಮ್ಮ ಜೀವನವನು ಸುಂದರವಾಗಿ ರೂಪಿಸಿಕೊಳ್ಳಬಹುದು ಎಂದನು.

ಇದನು ತಿಳಿದ ನಾನು ನನ್ನ ಕನಸನ್ನು ದೊಡ್ಡದಾಗಿಸಿದೆ, ಅನೇಕ ನಕಾರಾತ್ಮಕ ಸಮಸ್ಯೆಗಳು ಕಂಡರೂ ಕೂಡ ಆ ಕನಸಿನ ಕಡೆ ಗಮನ ಹರಿಸಲಾರಂಭಿಸಿದೆ.

ನಮಗೆ ನಿದ್ರೆ ಮಾಡುವಾಗ ಬೀಳುವ ಕನಸುಗಳು ಕ್ಷಣಿಕವಾಗಿರುತ್ತದೆ. ನಮ್ಮ ಹಿಂದಿನ ದಿನಗಳ ಯೋಚನೆಯಿಂದ ಬೀಳುತ್ತವೆ ಎನ್ನುವುದು ನನ್ನ ಅನುಭವ. ಆದರೆ ನಾವು ನಿದ್ರೆ ಮಾಡಲು ಬಿಡದ ಕನಸಿನ ಬಗೆ ನೆನಸಿಕೊಂಡಾಗ, ನನಗೆ ನನ್ನ ಸ್ನೇಹಿತ ನೆನಪಾಗುತ್ತಾನೆ. ಒಂದೇ ಊರಿನ ನಮ್ಮ ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಜತೆಯಲ್ಲೆ ಓದಿರುವ ಸ್ನೇಹಿತ, ನೋಡಿ. ಕನ್ನಡ ಮಾಧ್ಯಮ ಶಾಲೆ ಎಂದು ಹೇಳಲು ಇಂದು ನನಗೆ ಹೆಮ್ಮೆಯಾಗುತ್ತದೆ ಏಕೆಂದರೆ.. ನಾವು ಎಲ್ಲಿಯವರೆಗೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತಿರುತೇವೋ ಅಲ್ಲಿಯವರೆಗೂ ನಮಗೆ ಆದಂತಹ ಅನುಭವ ಮತ್ತು ನಮಗೆ ಸಿಕ್ಕಂತಹ ಶಿಕ್ಷಕರು ಮತ್ತು ಪರಿಚಯ ಆದ ಸ್ನೇಹಿತರನ್ನು ಮರೆಯಲಾಗುವುದಿಲ್ಲ. ಅಲ್ಲಿ ನಮಗೆ ಶಿಕ್ಷಣದ ಜತೆಗೆ ಜೀವನ ಪಾಠಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ.

ಅಲ್ಲಿ ನನಗೆ ಪರಿಚಯ ಆದ ಸ್ನೇಹಿತರಲ್ಲಿ ಇವನು ಒಬ್ಬ, ನಮ್ಮ ಹಳ್ಳಿ ಶಾಲೆಯಲ್ಲಿ ಒಂದು ತರಗತಿಗೆ ಹತ್ತು- ಹದಿನೈದು ಜನ ಮಕ್ಕಳು, ನಮ್ಮ ತರಗತಿಯಲ್ಲಿ ನಾವು ಮೂರು ಜನ ಅತಿ ದಡ್ಡ ವಿದ್ಯಾರ್ಥಿಗಳು,ಶಿಕ್ಷಕರ ಪ್ರಕಾರ. ಅದರಲ್ಲೇ ನನ್ನ ಸ್ನೇಹಿತನು ಒಬ್ಬ, ನಮಗೆ ಶಿಕ್ಷಕರು ಹೇಳುತ್ತಿದ್ದರು.. ಎಲ್ಲರೂ ಶಿಕ್ಷಣ ಪಡೆದು ದೊಡ್ಡ

ದೊಡ್ಡ ಹುದ್ದೆಗೆ ಹೋದರೆ, ಕೂಲಿ ಕೆಲಸ ಮಾಡುವವರು ಯಾರು..? ಅದಕ್ಕೆ ಮುಂದೆ ನೀವೆಲ್ಲಾ ಉಪಯೋಗಕ್ಕೆ ಬರುವಿರಿ ಎನುತ್ತಿದರು, ಇಂಥ ಕೆಲವು ಅವಮಾನಗಳೇ… ನನ್ನ ಸ್ನೇಹಿತನಿಗೆ ಭವಿಷ್ಯದ ಬಗೆ ಕನಸು ಕಾಣಲು ಸಹಾಯಕವಾಗಿತೆಂದು ಭಾವಿಸುತ್ತೇನೆ, ಅವನು ಅಭ್ಯಾಸ ಮಾಡುತ್ತಾ ಮಾಡುತ್ತಾ..ಅವನ ವಿಚಾರಧಾರೆಗಳು ಹೆಚ್ಚಾಗುತ್ತಾ ಕನಸು ದೊಡ್ಡದಾಗುತ್ತಾ ಹೋಗಿತು.

ಅವನು ನಾನೊಂದಿಗೆ ಹೇಳಿಕೊಳ್ಳುತ್ತಿದ್ದಳು ಅವನ ಕನಸಿನ ಬಗೆ ಅದನು ನನಸಾಗಿಸಲು ಅವನ ಪ್ರಯತ್ನದ ಬಗೆ, ಅಂದು ದಡ್ಡ ವಿದ್ಯಾರ್ಥಿ ಇಂದು ದೊಡ್ಡ ಹುದ್ದೆಯಲ್ಲಿದ್ದಾನೆ ಇದಕ್ಕೆ ಕಾರಣ ಅವನು ಕಾಣುತ್ತಿದ್ದ ಕನಸು ಮತ್ತು ಅದನು ನನಸಾಗಿಸಲು ಮಾಡಿದ ಅವನು ಪ್ರಯತ್ನ.., ಕೆಲವೊಂದು ಸಾಧಕರನ್ನು ನೋಡಿದಾಗ ಅವರಲ್ಲಿ ಕಾಣುವ ಖುಷಿಗಿಂತ “ಪರಿಶ್ರಮವೇ ಜೀವನ” ಅನಿಸುತ್ತದೆ ನನಗೆ, ಅವರ ಸಾಧನೆಗೆ ಕಾರಣ ಅವರು ತಮ್ಮ ಸುಖ ನಿದ್ರೆಯನ್ನು ತ್ಯಜಿಸಿ, ನಿದ್ರೆ ಗೆಡಿಸುವಂತಹ ಕನಸು ಕಂಡಿದ್ದಕ್ಕೆ, ಮತ್ತೆ ಮತ್ತೆ ಹೇಳುತ್ತೇನೆ.. ನಮ್ಮ ಭವಿಷ್ಯದ ಕನಸು ದೊಡ್ಡದಾಗಿರಲಿ ಅದನು ನನಸಾಗಿಸುವ ಛಲ ಅಷ್ಟೇ ದೃಢವಾಗಿರಲಿ.

 -ಭರತ್‌ ವಾಸು ನಾಯ್ಕ

ಶಿರಸಿ

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.