Sampaje ಬ್ಯಾಂಕ್‌ನಲ್ಲಿ ಧರಣಿ ಕುಳಿತ ಗ್ರಾಹಕ
Team Udayavani, Jun 2, 2024, 12:29 AM IST
ಅರಂತೋಡು: ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿರುವ ಕೆನರಾ ಬ್ಯಾಂಕಿನಿಂದ ಪಡೆಯಲಾದ ಶೈಕ್ಷಣಿಕ ಸಾಲಕ್ಕೆ ಜಾಮೀನು ಹಾಕಿದ್ದ ಕೆ.ಪಿ.ಜಾನಿ ಅವರಿಗೆ ಬ್ಯಾಂಕಿನಿಂದ ಸೌಲಭ್ಯ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೆ.ಪಿ. ಜಾನಿಯವರು ಬ್ಯಾಂಕ್ ಒಳಗೆ ಧರಣಿ ಕುಳಿತ ಘಟನೆ ಶನಿವಾರ ನಡೆಯಿತು.
2016ರಲ್ಲಿ ಬಡ ಕುಟುಂಬದ ಹೆಣ್ಣು ಮಗಳೊಬ್ಬಳಿಗೆ ಶಿಕ್ಷಣ ಸಾಲಕ್ಕೆ ಸಂಬಂಧಿಸಿದಂತೆ ಕೆ.ಪಿ. ಜಾನಿ ಅವರು ಜಾಮೀನು ಹಾಕಿದ್ದರು. ಈಗ ಆಕೆಯ ವಿದ್ಯಾಭ್ಯಾಸ ಪೂರ್ಣಗೊಂಡಿದ್ದು , ಆದರೆ ಕೆನರಾ ಬ್ಯಾಂಕನಲ್ಲಿ ಮಾಡಿದ ಸಾಲವನ್ನು ಮನೆಯವರು ಕಟ್ಟಲು ಆಗದಿರುವುದರಿಂದ ಮೇಲಿಂದ ಮೇಲೆ ವಿದ್ಯಾರ್ಥಿನಿಯ ಮನೆಗೆ ನೋಟಿಸ್ ಬಂದಿತ್ತು. ಕೊನೆಗೆ ವನ್ ಟೈಮ್ ಸೆಟ್ಲ… ಮೆಂಟ್ ಅವಕಾಶದಲ್ಲಿ ಅವರು ರಿಯಾಯಿತಿ ದರದಲ್ಲಿ ಸಾಲ ಕಟ್ಟಿದ್ದರು.
ಈ ವಿಚಾರ ಜಾಮೀನು ನೀಡಿದ ಕೆ.ಪಿ ಜಾನಿ ಅವರಿಗೆ ಗೊತ್ತಿರಲಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಕೆಲಸದ ನಿಮಿತ್ತ ಕೆ.ಪಿ. ಜಾನಿಯವರು ಬ್ಯಾಂಕ್‌ಗೆ ಹೋದಾಗ ನೀವು ಈ ಸೌಲಭ್ಯಕ್ಕೆ ಅರ್ಹರಲ್ಲ. ನೀವು ಈ ಹಿಂದೆ ಅರವತ್ತು ಸಾವಿರ ರೂ. ಸಾಲಕ್ಕೆ ಜಾಮೀನು ಹಾಕಿದ್ದು, ಅದು ವನ್ ಟೈಮ್ ಸೆಟ್ಲ… ಮೆಂಟ್ ಆಗಿರುವುದರಿಂದ ನಿಮ್ಮ “ಸಿಬಿಲ್’ ಸ್ಕೋರ್‌ಡೌನ್ ಆಗಿದೆ. ನಿಮಗೆ ಬ್ಯಾಂಕ್‌ನಿಂದ ಕೇಳಿರುವ ಸೌಲಭ್ಯ ಸಿಗುವುದಿಲ್ಲ ಎಂದು ಉತ್ತರಿಸಿದರೆನ್ನಲಾಗಿದೆ.
ಹಾಗಾದರೆ ವನ್ ಟೈಮ್ ಸೆಟ್ಲ… ಮೆಂಟ್ ಮಾಡುವಾಗ ಜಾಮೀನು ದಾರನಾಗಿರುವ ನನ್ನನ್ನು ಏಕೆ ನೀವು ಕರೆಯಲಿಲ್ಲ ಎಂದು ಜಾನಿ ಪ್ರಶ್ನಿಸಿದ್ದು, ನಾನು ಮಾಡದ ತಪ್ಪಿಗೆ ಸಿಬಿಲ್ ಡೌನ್ ಆಗಿದೆ. ಇದಕ್ಕೆ ಕಾರಣ ಬ್ಯಾಂಕ್ ಸಿಬಂದಿ. ನೀವು ನನ್ನನ್ನು ವನ್ ಟೈಮ್ ಸೆಟ್ಲಮೆಂಟ್ ಗೆ ಕರೆದಿಲ್ಲ ಯಾಕೆ ಎಂದು ಲೆಟರ್‌ಕೊಡಿ ಎಂದು ಕೇಳಿದ್ದರು. ರಿಜಿಸ್ಟರ್‌ಲೆಟರ್‌ಮೂಲಕ ಕೂಡ ಮತ್ತೆ ಮನವಿ ಮಾಡಿದ್ದು, ಕಳೆದೊಂದು ತಿಂಗಳಿನಿಂದ ಕೇಳಿ ದರೂ ಇದುವರೆಗೂ ಬ್ಯಾಂಕ್ ನಿಂದ ಉತ್ತರ ಸಿಕ್ಕಿಲ್ಲ ಜಾನಿಯವರು ಬ್ಯಾಂಕಿನೊಳಗೆ ಧರಣಿ ಕುಳಿತರು.
ಆ ಬಳಿಕ ತಮ್ಮ ಕರ್ತವ್ಯಕ್ಕೆ ಜಾನಿಯವರು ಅಡ್ಡಿಪಡಿಸುತ್ತಿದ್ದಾರೆ ಎಂದು ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ಸಿಬಂದಿ ಕೆ.ಪಿ.ಜಾನಿ ಅವರ ಮನವೊಲಿಸಿ, ಧರಣಿ ಹಿಂಪಡೆದಿರುವುದಾಗಿ ತಿಳಿದು
ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.