Bandipur ಸಫಾರಿ ಜೋನ್ ನಲ್ಲೇ ಮರಿಗೆ ಜನ್ಮ ನೀಡಿದ ಕಾಡಾನೆ: ವಿಡಿಯೋ ವೈರಲ್
Team Udayavani, Jun 2, 2024, 8:15 PM IST
ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಅಭಯಾರಣ್ಯದ ಸಫಾರಿ ಜೋನ್ ನಲ್ಲಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಬಂಡೀಪುರದ ಸಫಾರಿ ಜೋನ್ ರಸ್ತೆಯಲ್ಲಿ ಪ್ರವಾಸಿಗರು ಸಫಾರಿ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಕಾಡಾನೆಯೊಂದು ಒಂದು ಸುತ್ತು ಹಾಕಿ ಮರಿಗೆ ಜನ್ಮ ಕೊಟ್ಟಿದೆ. ಇದನ್ನು ಪ್ರವಾಸಿಗರು ಕಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಮೂರು ದಿನಗಳ ಹಿಂದೆ ಬಂಡೀಪುರ ಸಫಾರಿ ಜೋನ್ನಲ್ಲಿ ತಾಯಿ ಹುಲಿ ಜತೆ ಮೂರು ಹುಲಿ ಮರಿ ಕಾಣಿಸಿಕೊಂಡಿದ್ದವು. ಈಗ ಸಫಾರಿ ಜೋನ್ನಲ್ಲಿ ಆನೆಯೊಂದು ಮರಿಗೆ ಜನ್ಮನೀಡಿರುವ ಘಟನೆ ನಡೆದಿದ್ದು, ಪ್ರವಾಸಿಗರು ಗಜ ಪ್ರಸವ ಕಂಡು ವಿಸ್ಮಯಗೊಂಡಿದ್ದಾರೆ.
ಬಂಡೀಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನವೀನ್ ಪ್ರತಿಕ್ರಿಯೆ ನೀಡಿ, ಬಂಡೀಪುರ ಸಫಾರಿ ಜೋನ್ ನಲ್ಲಿ ಕಾಡಾನೆಯೊಂದು ಮರಿಗೆ ಜನ್ಮ ನೀಡುವ ದೃಶ್ಯವನ್ನು ಪ್ರವಾಸಿಗರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಕಾಡಾನೆ ಹಾಗೂ ಮರಿ ಮೇಲೆ ನಿಗಾ ವಹಿಸಲಾಗಿದ್ದು, ಎರಡೂ ಆರೋಗ್ಯವಾಗಿವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
BBK11: ಬಿಗ್ ಬಾಸ್ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.