Election Result: ಟ್ರೆಂಡ್ ಗೊತ್ತಾದರೂ ಫಲಿತಾಂಶ ಘೋಷಣೆ ವಿಳಂಬ ಸಾಧ್ಯತೆ
ಪ್ರತಿ ವಿಧಾನಸಭಾ ಕ್ಷೇತ್ರದ 5 ಬೂತ್‌ಗಳ ವಿವಿ ಪ್ಯಾಟ್ ಸ್ಲಿಪ್ ಎಣಿಕೆ ಕಡ್ಡಾಯ
Team Udayavani, Jun 3, 2024, 7:15 AM IST
ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಒಟ್ಟು 29 ಮತ ಎಣಿಕೆ ಕೇಂದ್ರಗಳಲ್ಲಿ ಮಂಗಳವಾರ ನಡೆಯಲಿದ್ದು, ಮತ ಎಣಿಕೆಗೆ ಅಗತ್ಯ ಸಿದ್ಧತೆಗಳನ್ನು ಚುನಾವಣ ಆಯೋಗ ಕೈಗೊಂಡಿದೆ. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂದು ಬೇಗನೆ ಗೊತ್ತಾದರೂ ಅಧಿಕೃತ ಫಲಿತಾಂಶ ಹೊರಬೀಳುವುದು ಮಾತ್ರ ತಡವಾಗಲಿದೆ. ಇದಕ್ಕೆ ಕಾರಣ ಸುಪ್ರೀಂಕೋರ್ಟ್ ಆದೇಶ.
ಮತ ಎಣಿಕೆ ಪ್ರಕ್ರಿಯೆ ಮಧ್ಯಾಹ್ನ ಒಂದು ಗಂಟೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದರೂ ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಕೇಂದ್ರಗಳ ವಿವಿ ಪ್ಯಾಟ್ ಪೇಪರ್ ಸ್ಲಿಪ್‌ಗ್ಳ ಜತೆ ಇವಿಎಂ ಮತಗಳ ಪರಿಶೀಲನೆ ಮಾಡಿದ ಬಳಿಕವೇ ಅಧಿಕೃತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಪ್ರಕ್ರಿಯೆಗೆ ಕನಿಷ್ಠ 3ರಿಂದ 4 ತಾಸು ಹಿಡಿಯುವ ಸಾಧ್ಯತೆಯಿದ್ದು, ಸಂಜೆಯ ಹೊತ್ತಿಗೆ ಅಧಿಕೃತ ಫಲಿತಾಂಶ ಘೋಷಣೆ ಆಗುವ ಸಾಧ್ಯತೆಯಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂಚೆ ಮತಗಳ ಎಣಿಕೆ ಪ್ರತ್ಯೇಕ ಹಾಲ್‌ನಲ್ಲಿ ನಡೆಯಲಿದೆ. ಏಕಕಾಲದಲ್ಲೇ ಉಳಿದ ಹಾಲ್‌ಗಳಲ್ಲಿ ಮತಯಂತ್ರಗಳಲ್ಲಿರುವ ಮತಗಳ ಲೆಕ್ಕ ನಡೆಯಲಿದೆ. ಬೆಳಗ್ಗೆ 9 ಗಂಟೆಯ ಹೊತ್ತಿಗೆ ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶ ಹೊರಬೀಳಬಹುದು.
ಪ್ರತಿ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ನಿಗದಿಪಡಿಸಿರುವ ಟೇಬಲ್‌ಗಳ ಎಣಿಕೆ ಮುಗಿದ ಬಳಿಕ ಮಧ್ಯಾಹ್ನದ ವೇಳೆಗೆ ಸೋಲು-ಗೆಲುವಿನ ಚಿತ್ರಣ ಸ್ಪಷ್ಟವಾಗಲಿದೆ. ಆದರೆ, ಚುನಾವಣ ಆಯೋಗದಿಂದ ಅಧಿಕೃತ ಫಲಿತಾಂಶ ಪ್ರಕಟಿಸಲು ಸಂಜೆ ಆಗಬಹುದು. ಯಾಕೆಂದರೆ, ಒಟ್ಟಾರೆ ಮತ ಎಣಿಕೆ ಮುಗಿದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದ ತಲಾ 5ರಂತೆ ಪ್ರತಿ ಲೋಕಸಭಾ ಕ್ಷೇತ್ರದ 40 ಮತಗಟ್ಟೆಗಳ ಇವಿಎಂಗಳಲ್ಲಿ ಬಿದ್ದ ಮತಗಳನ್ನು ವಿವಿಪ್ಯಾಟ್‌ನ ಮುದ್ರಿತ ಚೀಟಿಗಳನ್ನು ತಾಳೆ ಹಾಕಬೇಕಾಗುತ್ತದೆ. ಅದರ ಬಳಿಕವಷ್ಟೇ ಚುನಾವಣ ಆಯೋಗ ಫಲಿತಾಂಶ ಘೋಷಿಸುತ್ತದೆ.
ಒಟ್ಟು 13,173 ಸಿಬಂದಿಗೆ ಮತ ಎಣಿಕೆಯ ತರಬೇತಿ ನೀಡಲಾಗಿದ್ದು, ಅವರನ್ನು ನಿಗದಿತ ಮತ ಎಣಿಕೆ ಕೇಂದ್ರದಲ್ಲಿ ನಿಯೋಜಿಸಲಾಗಿದೆ. ಉಳಿದಂತೆ 3,000 ಸಿಬಂದಿಗೆ ತರಬೇತಿ ನೀಡಿ ಅವರನ್ನು ಕಾದಿರಿಸಿಕೊಳ್ಳಲಾಗಿದೆ ಎಂದು ಚುನಾವಣ ಆಯೋಗ ಹೇಳಿದೆ.
ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಎರಡು ಕೇಂದ್ರ (ತುಮಕೂರು ಯೂನಿವರ್ಸಿಟಿ ಸೈನ್ಸ್ ಕಾಲೇಜ್, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್)ಗಳಲ್ಲಿ ನಡೆಯಲಿದೆ. ಉಳಿದಂತೆ ಎಲ್ಲ ಕ್ಷೇತ್ರಗಳ ಮತ ಎಣಿಕೆ ಒಂದೇ ಕೇಂದ್ರದಲ್ಲಿ ನಡೆಯಲಿದೆ.
ಒಟ್ಟು 3,500 ಮತ ಎಣಿಕೆ ಟೇಬಲ್ ಇರಲಿದ್ದು, ಪ್ರತಿ ಟೇಬಲ್‌ಗೆ ಮತ ಎಣಿಕೆ ಸಹಾಯಕ, ಮತ ಎಣಿಕೆ ಮೇಲ್ವಿಚಾರಕ ಮತ್ತು ಒಬ್ಬ ಮೈಕ್ರೋ ಅಬ್ಸರ್ವರ್ ಇರಲಿದ್ದಾರೆ. ಸಹಾಯಕ ಚುನಾವಣಾಧಿಕಾರಿ ಮತ ಎಣಿಕೆ ಟೇಬಲ್ ಮೇಲೆ ನಿಗಾ ಇಡಲಿದ್ದಾರೆ.
ಈ ಹಿಂದೆ ಸುತ್ತು ಆಧಾರದಲ್ಲಿ ಮತದ ದತ್ತಾಂಶವನ್ನು ಅಪ್‌ಡೇಟ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮೊದಲ ಬಾರಿಗೆ ಟೇಬಲ್ ವೈಸ್ ಮತದ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಪ್ರತಿ ಟೇಬಲ್‌ನ ಮೇಲೆ ಸಿಸಿಟಿವಿ ಕೆಮರಾವೊಂದು ಕಣ್ಗಾವಲು ಇಡಲಿದೆ.
ಈ ಮಧ್ಯೆ ಸುರಪುರ ವಿಧಾನ ಸಭಾ ಕ್ಷೇತ್ರಕ್ಕೆ ನಡೆದಿರುವ ಉಪಚುನಾವಣೆಯ ಫಲಿತಾಂಶವೂ ಮಂಗಳವಾರವೇ ಪ್ರಕಟಗೊಳ್ಳಲಿದೆ.
ಇವಿಎಂ-ವಿವಿಪ್ಯಾಟ್ ತಾಳೆ ಹೇಗೆ?
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 224 ವಿಧಾನಸಭಾ ಕ್ಷೇತ್ರಗಳಿದ್ದು, 58,834 ಮತಗಟ್ಟೆಗಳಲ್ಲಿ ಮತದಾನ ನಡೆದಿದೆ. ಈ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5ರಂತೆ 28 ಕ್ಷೇತ್ರಗಳಲ್ಲಿ ತಲಾ 40ರಂತೆ ಒಟ್ಟು 1,120 ಮತಗಟ್ಟೆಗಳಲ್ಲಿ ಇವಿಎಂ-ವಿವಿಪ್ಯಾಟ್ ಮತ ತಾಳೆ ಮಾಡಬೇಕಾಗಿದೆ. ಇದಕ್ಕಾಗಿ ಹೆಚ್ಚುವರಿ 5 ಸಾವಿರ ಸಿಬಂದಿ ಮತ್ತು 3 ತಾಸು ಹೆಚ್ಚುವರಿ ಸಮಯ ಬೇಕಾಗುತ್ತದೆ. ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ 40 ಮತಗಟ್ಟೆಗಳ ಇವಿಎಂ-ವಿವಿಪ್ಯಾಟ್ ತಾಳೆ ಹಾಕಬೇಕಾಗುತ್ತದೆ. ಒಂದು ಇವಿಎಂ-ವಿವಿಪ್ಯಾಟ್ ತಾಳೆ ಹಾಕಲು ಕನಿಷ್ಠ 45 ನಿಮಿಷ ಬೇಕಾಗುತ್ತದೆ. ಅದರಂತೆ ಎಲ್ಲ 5 ಮತಗಟ್ಟೆಗಳ ಇವಿಎಂ-ವಿವಿಪ್ಯಾಟ್ ತಾಳೆ ಹಾಕಲು ಕನಿಷ್ಠ 3ರಿಂದ 4 ತಾಸು ಸಮಯ ಹಿಡಿಯುತ್ತದೆ.
ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ. ಸಿಬಂದಿಗೆ ಮತ ಎಣಿಕೆಯ ತರಬೇತಿ ನೀಡಿ ಮತ ಎಣಿಕೆ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.
– ಮನೋಜ್ ಕುಮಾರ್ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.