ಚಿತ್ರದುರ್ಗ: ಮಾನಸಿಕ ಕಾಯಿಲೆ ನಿವಾರಣೆ ಸಾಧ್ಯ- ಡಾ| ಮಂಜುನಾಥ
ಸಮಾಜದಲ್ಲಿ ಕಳಂಕ ಮತ್ತು ತಾರತಮ್ಯದಿಂದ ಕಾಣಬಾರದು
Team Udayavani, Jun 3, 2024, 5:42 PM IST
■ ಉದಯವಾಣಿ ಸಮಾಚಾರ
ಚಿತ್ರದುರ್ಗ: ಸಂಶೋಧನೆಗಳ ಪ್ರಕಾರ ದೇಶದಲ್ಲಿ ಶೇ. 13.4ರಷ್ಟು ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಸ್ಕಿಜೋಫ್ರೇನಿಯಾ ಶೇ. 1ರಷ್ಟು ಜನರಲ್ಲಿ ಕಂಡುಬಂದಿದೆ. ಮಾನಸಿಕ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ ಎಂದು ಮನೋವೈದ್ಯ ಡಾ| ಆರ್. ಮಂಜುನಾಥ ಹೇಳಿದರು.
ನಗರದ ಕಬೀರಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಕಿಜೋಫ್ರೇನಿಯಾ ತೀವ್ರತರವಾದ ಮಾನಸಿಕ ಕಾಯಿಲೆಯಾಗಿದ್ದು ಇದರಲ್ಲಿ ರೋಗಿಯು ನೈಜ ಜಗತ್ತಿನ ಜೊತೆಗೆ ಸಂಪರ್ಕದಲ್ಲಿ ಇರುವುದಿಲ್ಲ. ಯೋಚನೆ ಮಾಡುವ ರೀತಿ, ಮಾತನಾಡುವ ರೀತಿಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಸ್ಕಿಜೋಫ್ರೇನಿಯಾದಿಂದ ಬಳಲುವರು ದೈನಂದಿನ ಕಾರ್ಯ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ವಿಫಲರಾಗುತ್ತಾರೆ. ಸ್ಕಿಜೋಫ್ರೇನಿಯಾ ಕಾಯಿಲೆಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾದ ಚಿಕಿತ್ಸೆ ದೊರೆಯುತ್ತದೆ.
ಉತ್ತಮ ಸಮಾಲೋಚನೆ ಮೂಲಕ ಸಂಪೂರ್ಣವಾಗಿ ಗುಣಮುಖರಾಗಬಹುದು. ನಂತರ ಸಾಮಾನ್ಯರಂತೆ ಜೀವಿಸಬಹುದು. ಈ
ಕಾಯಿಲೆ ಇರುವ ವ್ಯಕ್ತಿಗಳನ್ನು ಸಮಾಜದಲ್ಲಿ ಕಳಂಕ ಮತ್ತು ತಾರತಮ್ಯದಿಂದ ಕಾಣಬಾರದು. ಇವರ ಬಗ್ಗೆ ಹೆಚ್ಚಿನ ಸಹಾನೂಭೂತಿ ತೋರಬೇಕು.
ಮಾನಸಿಕವಾಗಿ ಸದೃಢರನ್ನಾಗಿ ಮಾಡಬೇಕು ಎಂದರು. ಸ್ಪಿಟ್ ಪರ್ಸನಾಲಿಟಿ ಮತ್ತು ಸ್ಕಿಜೋಫ್ರೇನಿಯಾ ಬೇರೆ ಬೇರೆ. ಮೆದುಳಿನಲ್ಲಿ ರಾಸಾಯನಿಕ ಬದಲಾವಣೆಗಳಿಂದ ಒಂದು ನಿರ್ದಿಷ್ಟವಾದ ವಯಸ್ಸಿನಲ್ಲಿ ವ್ಯಕ್ತಿಗೆ ಸ್ಕಿಜೋಫ್ರೇನಿಯಾ ಕಾಯಿಲೆ ಶುರುವಾಗುತ್ತದೆ. ವಿಶೇಷವಾಗಿ ಹದಿಹರೆಯದವರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಅವಳಿ ಜವಳಿ ಮಕ್ಕಳಲ್ಲಿ ಒಂದು ಮಗು ಸ್ಕಿಜೋಫ್ರೇನಿಯಾಗೆ ತುತ್ತಾದರೆ ಇನ್ನೊಂದು ಮಗುವು ರೋಗಕ್ಕೆ ಒಳಗಾಗುವ ಸಂಭವ ಇರುತ್ತದೆ. ಸರ್ಕಾರದಿಂದ ಮಾನಸಿಕ
ಕಾಯಿಲೆಯಿಂದ ಬಳಲುವವರಿಗಾಗಿ ಟೆಲಿ ಮಾನಸ ಉಚಿತ ಸಹಾಯವಾಣಿ ಸಂಖ್ಯೆ 14416 ಆರಂಭಿಸಲಾಗಿದೆ. ಈ ಸಂಖ್ಯೆಗೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆಯಬಹುದು ಎಂದು ತಿಳಿಸಿದರು.
ಕಬೀರಾನಂದ ಮಠದ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಮಾತನಾಡಿ, ಋಷಿಗಳು ಹೇಳಿದಂತೆ ಮನಸ್ಸು ದೇಹದಲ್ಲಿ ಅತಿ ಮುಖ್ಯವಾದ ಭಾಗ. ತಾಯಿಬೇರಿನಂತೆ ಮನಸ್ಸು ಎಲ್ಲದಕ್ಕೂ ಮೂಲ. ಆಕಾಶ, ಗಾಳಿ ಸೇರಿ ಮನಸ್ಸು ಸೃಷ್ಟಿಯಾಗಿದೆ. ವಾಯುವಿನಂತೆ ಮನಸ್ಸು ಸಂಚರಿಸುತ್ತದೆ, ಆದರಿಂದ ಚಂಚಲವಾಗಿರುತ್ತದೆ. ಮಾನಸಿಕ ಕಾಯಿಲೆಯಿಂದ ಬಳಲುವವರು ಬಹಳಷ್ಟು ಜನರಿದ್ದು, ಕಾಯಿಲೆಯ ಪರಿಹಾರಕ್ಕೆ ಅನೇಕ ಚಿಕಿತ್ಸೆಗಳಿವೆ ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ| ಜಿ.ಒ. ನಾಗರಾಜ ಮಾತನಾಡಿ, ಸ್ಕಿಜೋಫ್ರೇನಿಯಾ ಎನ್ನುವುದನ್ನು ಕನ್ನಡದಲ್ಲಿ ಚಿತ್ತ ಚಂಚಲತೆ ಅಥವಾ ಚಿತ್ತ ವಿಕಲತೆ ಎಂದು ಕರೆಯುತ್ತೇವೆ. ಕಾಯಿಲೆ ಇರುವ ವ್ಯಕ್ತಿಗೆ ಕಾಯಿಲೆಯ ಬಗ್ಗೆ ಅರಿವು ಇರುವುದಿಲ್ಲ, ಭ್ರಮೆ ಮತ್ತು ಭ್ರಾಂತಿ ಇರುತ್ತವೆ. ಯಾರಿಗೂ ಕಾಣದ ವಸ್ತುಗಳು ದೃಶ್ಯವನ್ನು ಕಾಣುವುದು, ಯಾರಿಗೂ ಕೇಳಿಸದ ಧ್ವನಿಗಳು ಕೇಳುವುದು, ಅನುಮಾನ ಅಥವಾ ಸಂಶಯಪಡುವುದು, ವಿಚಿತ್ರವಾಗಿ ವರ್ತಿಸುವುದು ಮುಂತಾದ ಲಕ್ಷಣಗಳು ಕಂಡುಬರುತ್ತವೆ ಎಂದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಅಭಿನವ್ ಡಿ.ಎಂ., ತಾಲೂಕು ಆರೋಗ್ಯಾಧಿಕಾರಿ ಡಾ| ಬಿ.ವಿ. ಗಿರೀಶ್, ಪ್ರಾಂಶುಪಾಲರಾದ ಸಿ.ಎಲ್. ನಿರಂಜನಮೂರ್ತಿ, ಟಿ. ಗಿರೀಶ್, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಎಸ್. ವಿಶಾಲ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.