Rabkavi Banhatti ಒಂದೂವರೆ ಶತಮಾನದ ಶಾಲೆಯಲ್ಲಿ 147 ವಿದ್ಯಾರ್ಥಿಗಳು..!
147 ವರ್ಷದ ಶಾಲೆಗೆ ಕೇವಲ 147 ವಿದ್ಯಾರ್ಥಿಗಳು..!
Team Udayavani, Jun 3, 2024, 5:57 PM IST
ರಬಕವಿ-ಬನಹಟ್ಟಿ : ಒಂದೂವರೆ ಶತಮಾನದ ಹೊಸ್ತಿಲಲ್ಲಿರುವ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಗೊಂಡ ಬನಹಟ್ಟಿಯ ಹೃದಯ ಭಾಗದಲ್ಲಿರುವ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ ನಂ.1 ಇದೀಗ ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುತ್ತಿದೆ.
ಈ ಶಾಲೆಯು ಯಾವುದೋ ಕುಗ್ರಾಮದಲ್ಲಿಲ್ಲ, ಬದಲಿಗೆ ತಾಲೂಕಿನ ಬನಹಟ್ಟಿಯ ಹೃದಯ ಭಾಗದಲ್ಲಿದೆ. ಅದರಲ್ಲಿಯೂ ದಿನಂಪ್ರತಿ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯ ಪಕ್ಕದಲ್ಲಿಯೇ ಇತರೆ ಶಾಲೆಗಳಿಗೆ ತೆರಳುತ್ತಾರೆ. ಇಷ್ಟಾದರೂ ಈ ಶಾಲೆಗೆ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಕೊರತೆ ಎದ್ದು ಕಾಣುತ್ತಿದೆ.
ಮೊದಲ ಶಾಲೆ: ರಬಕವಿ-ಬನಹಟ್ಟಿ ತಾಲೂಕಿನಲ್ಲಿಯೇ ಮೊದಲ ಶಾಲೆಯಾಗಿ ಸ್ಥಾಪನೆಗೊಂಡ ಈ ಸರ್ಕಾರಿ ಶಾಲೆಯು 1877 ರಲ್ಲಿ ನಿರ್ಮಿಸಲಾಯಿತು. ಅಂದಿನ ಮರಾಠಿಮಯ ಪ್ರದೇಶವಾಗಿದ್ದ ಕಾಲದಲ್ಲಿ 1 ರಿಂದ 7 ನೇ ತರಗತಿಯ ಕನ್ನಡ ಶಾಲೆ ಪ್ರಾರಂಭವಾಗಿದ್ದೇ ವಿಶೇಷ. ಅಲ್ಲದೇ ಇಡೀ ಪಟ್ಟಣಕ್ಕೆ ಇದೊಂದೇ ಶಾಲೆಯಾಗಿತ್ತು. ಈಗಲೂ ವಯೋವೃದ್ಧರು ಈ ಶಾಲೆಯ ಗತವೈಭವವನ್ನು ನೆನಪಿಸಿಕೊಳ್ಳುತ್ತಾರೆ. ಮೊದಲು ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆ ಬೇರೆ ಬೇರೆಯಾಗಿತ್ತು. ಮಕ್ಕಳ ಸಂಖ್ಯೆ ಕಡಿಮೆಯಾದ ಹಿನ್ನಲೆಯಲ್ಲಿ ಇದೀಗ ಎರಡು ಶಾಲೆ ಕೂಡಿ ನಡೆಯುತ್ತಿದೆ.
ಕೋವಿಡ್ ಪರಿಣಾಮ: ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸರ್ಕಾರಿ ಶಾಲೆಗೆ ಕೋವಿಡ್ ನಂತರದಲ್ಲಿ ಹಂತ ಹಂತವಾಗಿ 1400ವರೆಗೆ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸಕ್ತ ವರ್ಷ147 ಕ್ಕೆ ಕುಸಿಯುವಂತಾಗಿದೆ.
ಸೌಕರ್ಯಗಳಿಗೆ ಕೊರತೆಯಿಲ್ಲ: ಶಿಕ್ಷಕರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಲಾಗಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ.
ಖಾಸಗಿ ಶಾಲೆ ಆರ್ಭಟ: ಇತ್ತೀಚಿನ ದಿನಗಳಲ್ಲಿ ಆಂಗ್ಲ ಮಾಧ್ಯಮ, ಸಿಬಿಎಸ್ಇ ಸೇರಿದಂತೆ ಖಾಸಗಿ ಶಾಲೆಗಳ ಭರಾಟೆ ಹೆಚ್ಚಾಗಿರುವುದರಿಂದ ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವವರೇ ಹೆಚ್ಚು. 2004 ರಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿದ ಈ ಸರ್ಕಾರಿ ಶಾಲೆಯಲ್ಲೀಗ 147 ಕ್ಕೆ ಇಳಿಕೆ ಕಂಡಿರುವುದೇ ವಿಚಿತ್ರ.
ಕಾಯಕಲ್ಪವಾಗಬೇಕು: ಪಟ್ಟಣದ ಮಧ್ಯಭಾಗದಲ್ಲಿರುವ ಈ ಶಾಲೆಯ ಸುತ್ತ ಕಾಂಪೌಂಡ್ ಇಲ್ಲದ ಕಾರಣ ಶಾಲಾ ರಜೆ ದಿನಗಳಲ್ಲಿ ಅನೈತಿಕ ಚಟುವಟಿಕೆಗಳಿಗೆ ಅವಕಾಶವಾಗಿದೆ. ಶಾಲಾ ಆವರಣದ ಹೊರಗಡೆ ಬೀದಿ ವ್ಯಾಪಾರಿಗಳಿಂದ ತೊಂದರೆ ಅನುಭವಿಸುವಂತಾಗಿದೆ. ಇವೆಲ್ಲದರ ಬಗ್ಗೆ ಗಮನಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಶಿಕ್ಷಕರು ಹಾಗು ಶಾಲಾ ಸುಧಾರಣಾ ಸಮಿತಿ ಹೆಚ್ಚಿನ ಗಮನ ಹರಿಸಬೇಕಿದೆ.
ಈ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದೆ. ಮನೆ ಮನೆಗೆ ತೆರಳಿ ಶಾಲೆ ಬಗ್ಗೆ ತಿಳಿಹೇಳಲಾಗಿದೆ. ಪಾಲಕರ ಸ್ವಚ್ಛೆಯಿಂದ ಮಗುವನ್ನು ಸರ್ಕಾರಿ ಶಾಲೆಗೆ ಕಳಿಸುವಂತಾಗಬೇಕು’.
-ಅಶೋಕ ಬಸನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ, ಜಮಖಂಡಿ.
ಮೂಲಭೂತ ಸೌಕರ್ಯ ಒದಗಿಸಿ, ಪೂರ್ಣ ಪ್ರಮಾಣದಲ್ಲಿ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಇತರೆ ಚಟುವಟಿಕೆಗಳಿಂದ ಕಾರ್ಯಪ್ರವೃತರಾಗುವಲ್ಲಿ ಕಾಳಜಿ ವಹಿಸುತ್ತೇವೆ.’
-ಎಸ್.ಪಿ. ಬುರ್ಲಿ, ಶಿಕ್ಷಣ ಸಂಯೋಜಕರು, ರಬಕವಿ ಬನಹಟ್ಟಿ.
-ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
India: ಒಂದು ದೇಶ ಒಂದು ಚುನಾವಣೆ ಜಾರಿ ಆಗಲಿ: ಪೇಜಾವರ ಸ್ವಾಮೀಜಿ
Rabkavi Banahatti: ಲೋಕ ಅದಾಲತ್ ನಲ್ಲಿ ಒಂದಾದ ದಂಪತಿಗಳು
ವಿಳಾಸ ಕೇಳುವ ನೆಪದಲ್ಲಿ ವ್ಯಕ್ತಿಯ ಕೊರಳಲ್ಲಿದ್ದ ಚಿನ್ನದ ಚೈನ್ ಕದ್ದ ಅಪರಿಚಿತ ವ್ಯಕ್ತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
Human Error: ಮಾನವ ಲೋಪದಿಂದಲೇ CDS ರಾವತ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ: ವರದಿ
Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Burhan Wani; ಬುರ್ಹಾನ್ ವಾನಿ ಅನುಚರ ಸೇರಿ 5 ಉಗ್ರರ ಎನ್ಕೌಂಟರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.