Chitradurga: ದೆವ್ವ ಬಿಡಿಸುವ ನೆಪದಲ್ಲಿ ಬಾಲಕಿ ಮೇಲೆ ಮೌಲ್ವಿ ಅತ್ಯಾಚಾರ
Team Udayavani, Jun 4, 2024, 6:30 AM IST
ಚಿತ್ರದುರ್ಗ: ಕುರಾನ್ ಪಠಿಸಲು ಮಸೀದಿಗೆ ಬರುತ್ತಿದ್ದ ಬಾಲಕಿಗೆ ದೆವ್ವ ಹಿಡಿದಿದೆ ಎಂದು ನಂಬಿಸಿ, ಆಕೆಗೆ ಲೈಂಗಿಕ ಕಿರುಕುಳ ನೀಡಿದ ನಗರದ ಮಸೀದಿಯೊಂದರ ಮೌಲ್ವಿ ಹಾಗೂ ಬಾಲಕಿಯ ಸಹೋದರನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶ ಮೂಲದ ಮೌಲ್ವಿ ಅಬ್ದುಲ್ ರೆಹಮಾನ್ ಹಾಗೂ ಬಾಲಕಿಯ ಅಣ್ಣ ಬಂ ಧಿತರು. 17 ವರ್ಷದ ಬಾಲಕಿ ಮೂರು ವರ್ಷಗಳಿಂದ ಕುರಾನ್ ಪಠಿಸಲು ಮಸೀದಿಗೆ ಹೋಗುತ್ತಿದ್ದಳು. ಒಂದು ವರ್ಷದ ಹಿಂದೆ ಈ ಬಾಲಕಿಗೆ ಗಾಳಿ ಸೋಕಿದೆ, ನಿಮ್ಮ ಮನೆಯಲ್ಲಿ ದೈವಕಾರ್ಯ ಮಾಡಿಸಬೇಕು ಎಂದು ಬಾಲಕಿಯ ತಾಯಿಯನ್ನು ಮೌಲ್ವಿ ನಂಬಿಸಿದ್ದ. ಅದರಂತೆ ಪ್ರತಿ ವಾರ ಮನೆಗೆ ಹೋಗಿ ಧಾರ್ಮಿಕ ಕ್ರಿಯೆ ಮಾಡುವಾಗ ಬಾಲಕಿಯ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎಂದು ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಅಲ್ಲದೆ, ಆರು ತಿಂಗಳ ಹಿಂದೆ ಬಾಲಕಿಯ ಅಣ್ಣ ಹಾಗೂ ಮೌಲ್ವಿಯು ಬಾಲಕಿಯನ್ನು ಕೊಠಡಿಗೆ ಕರೆದೊಯ್ದು, ತಾಯಿಯನ್ನು ಹೊರಗೆ ಕಳುಹಿಸಿದ್ದರು. ದೆವ್ವಕ್ಕೆ ದೈಹಿಕ ಸುಖ ಕೊಟ್ಟರೆ ಶಾಂತಿಯಾಗಲಿದೆ ಎಂದು ಬಾಲಕಿಯ ಅಣ್ಣನನ್ನೂ ನಂಬಿಸಿ ಆತನಿಂದಲೇ ಅತ್ಯಾಚಾರ ಮಾಡಿಸಿದ್ದ ಮೌಲ್ವಿ, ಅದನ್ನು ವೀಡಿಯೋ ಚಿತ್ರೀಕರಿಸಿಕೊಂಡಿದ್ದ. ಅನಂತರ ತಾನೂ ಅತ್ಯಾಚಾರ ಎಸಗಿದ್ದ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಮೇ 30ರಂದು ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಗರ್ಭಪಾತವಾಗಿದೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಗರದ ಮಹಿಳಾ ಠಾಣೆ ಪೊಲೀಸರು ಇಬ್ಬರನ್ನೂ ಪೋಕೊÕà ಮತ್ತಿತರ ಕಾಯ್ದೆಗಳಡಿ ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಾವು ದರ್ಶನ್‌ರಿಂದ 10 ಪೈಸೆಯೂ ಪಡೆದಿಲ್ಲ..: ರೇಣುಕಾಸ್ವಾಮಿ ತಂದೆ ಸ್ಪಷ್ಟನೆ
Siddaramaiah ಸರ್ಕಾರದಿಂದ ಜನತೆಗೆ ಆತ್ಮಹತ್ಯೆ ಭಾಗ್ಯ: ಕಾರಜೋಳ
ತೋಟದ ಮನೆಗಳಿಗೆ ಹಗಲು ತ್ರಿಫೇಸ್, ರಾತ್ರಿ ಸಿಂಗಲ್ ಫೇಸ್ ವಿದ್ಯುತ್: ಸಚಿವ ಜಾರ್ಜ್
ನಾನು ಗಣಪತಿ ಕೇಸ್ ನಲ್ಲಿ ರಾಜೀನಾಮೆ ನೀಡಿದ್ದೆ…: ಬಿಜೆಪಿ ವಿರುದ್ಧ ಸಚಿವ ಜಾರ್ಜ್ ಕಿಡಿ
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.