MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

ದ.ಕ.: ತಲಾ ಶೇ. 75.71, ಶೇ. 72.87 ಮತದಾನ; ಉಡುಪಿ: ತಲಾ ಶೇ. 75.38 ಶೇ. 80.72 ಮತದಾನ

Team Udayavani, Jun 4, 2024, 12:18 AM IST

MLC Elections; ನೈಋತ್ಯ ಪದವೀಧರರ, ಶಿಕ್ಷಕರ ಕ್ಷೇತ್ರದ ಚುನಾವಣೆ

ಮಂಗಳೂರು: ಸೋಮವಾರ ದ.ಕ. ಜಿಲ್ಲೆಯಲ್ಲಿ ನಡೆದ ವಿಧಾನ ಪರಿಷತ್‌ ನೈಋತ್ಯ ಪದವೀಧರ ಕ್ಷೇತ್ರಕ್ಕೆ ಶೇ. 72.87 ಮತ್ತು ಶಿಕ್ಷಕ ಕ್ಷೇತ್ರದಲ್ಲಿ ಶೇ. 75.71 ಮತದಾನವಾಗಿದೆ.

ವಿವಿಧ ಕೆಲಸ ಕಾರ್ಯಗಳಿಗೆ ತೆರಳುವ ಪದವೀಧರರು ಹಾಗೂ ಶಿಕ್ಷಕರು ಬೆಳಗ್ಗೆಯೇ ಮತಗಟ್ಟೆಗಳತ್ತ ತೆರಳಿ ಮತ ಚಲಾಯಿಸಿದರು. ಹೊತ್ತೇರುತ್ತಿದ್ದಂತೆ ಮತದಾರರ ಸಂಖ್ಯೆ ವಿರಳವಾಯಿತು.

ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ದ.ಕ. ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರದಲ್ಲಿ ಶೇ. 51.33 ಹಾಗೂ ಶಿಕ್ಷಕ ಕ್ಷೇತ್ರದಲ್ಲಿ 51.81 ಮತದಾನವಾಗಿತ್ತು. ಜಿಲ್ಲೆಯ ಕೆಲವು ಮತಗಟ್ಟೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತದಾನವಾಗಿರಲಿಲ್ಲ.

ಜಿಲ್ಲಾಧಿಕಾರಿ ಭೇಟಿ
ಮತಗಟ್ಟೆ ಪ್ರದೇಶಕ್ಕೆ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಲ್ಲಲ್ಲಿ ಅಭ್ಯರ್ಥಿಗಳ ಪರ ಬೂತ್‌ಗಳು:
ವಿವಿಧ ಅಭ್ಯರ್ಥಿಗಳ ಪರ ಚುನಾವಣಾ ಮತಗಟ್ಟೆಗಳ ಸಮೀಪ ಬೂತ್‌ಗಳನ್ನು ಸ್ಥಾಪಿಸಿ ಅಭ್ಯರ್ಥಿಗಳ ಮಾಹಿತಿ ಮತದಾರರಿಗೆ ನೀಡುವ ಕೆಲಸ ನಡೆಯಿತು.

ಕೆಲವರಿಗೆ ಶಾಮಿಯಾನದ ವ್ಯವಸ್ಥೆ ಇದ್ದರೆ, ಇನ್ನು ಕೆಲವರು ಮರಗಳ ನೆರಳಲ್ಲಿ ಹಾಗೂ ಕೆಲವರು ಬಿಸಿಲಲ್ಲೇ ಇದ್ದರು. ಮಂಗಳೂರಿನಲ್ಲಿ ಬೆಳಗ್ಗೆ ಮತದಾನಕ್ಕೆ ಆಗಮಿಸಿದವರಿಗೆ ಮಳೆಯ ಸಿಂಚನವಾಯಿತು. ಅನಂತರ ಬಿಸಿಲು ಕಾಣಿಸಿತ್ತು.

ಉಡುಪಿ: ತಲಾ ಶೇ. 75.38 ಶೇ. 80.72 ಮತದಾನ
ಉಡುಪಿ: ನೈಋತ್ಯ ಪದವೀ ಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಜಿಲ್ಲಾದ್ಯಂತ ಶಾಂತಿಯುತವಾಗಿ ನಡೆದಿದೆ. ಈ ಬಾರಿ ಮತದಾರರು ಹೆಚ್ಚು ಉತ್ಸುಕತೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ಪದವೀಧರರ ಮತದಾನಕ್ಕೆ 19, ಶಿಕ್ಷಕರ ಕ್ಷೇತ್ರದ ಮತದಾನಕ್ಕೆ 10 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಪದವೀಧರರಿಗೆ ಸಂಬಂಧಿಸಿ 7,857 ಪುರುಷ, 9,176 ಮಹಿಳಾ ಮತದಾರರು ಸೇರಿದಂತೆ 17,033 ಮತದಾರರಲ್ಲಿ 6,220 ಪುರುಷರು, 6,619 ಮಹಿಳೆಯರು ಸೇರಿದಂತೆ 12,839 ಮತದಾರರು ಮತದಾನ ಮಾಡಿದ್ದಾರೆ. ಶೇ. 75.38ರಷ್ಟು ಮತದಾನವಾಗಿದೆ.

ಶಿಕ್ಷಕರ ಕ್ಷೇತ್ರದಲ್ಲಿ 1,717 ಪುರುಷ, 2350 ಮಹಿಳಾ ಮತದಾರರು ಸೇರಿ 4067 ಮತದಾರರಲ್ಲಿ 1475 ಪುರು ಷರು, 1808 ಮಹಿಳಾ ಮತದಾರರು ಸಹಿತವಾಗಿ 3283 ಮತದಾರರು ಮತದಾನ ಮಾಡಿದ್ದು ಶೇ. 80.72ರಷ್ಟು ಮತದಾನ ದಾಖಲಾಗಿದೆ.

ಕಳೆದ ಚುನಾವಣೆಗಳಿಗೆ ಹೋಲಿ ಸಿದರೆ ಈ ಬಾರಿ ಉತ್ತಮ ಮತದಾನ ವಾಗಿದೆ. ಮತದಾನದ ಅನಂತರದಲ್ಲಿ ಬಿಜೆಪಿಯಿಂದ ಟಿಕೆಟ್‌ ಸಿಗದೇ ಪಕ್ಷೇತರದ ನಿಂತಿದ್ದ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟೊಟ್ಟಿಗೆ ಉಭಯಕುಶಲೋಪರಿ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ.

ಮೊಬೈಲ್‌, ಬ್ಯಾಗ್‌
ಇರಿಸಲು ವ್ಯವಸ್ಥೆ
ಮತಗಟ್ಟೆಗೆ ಆಗಮಿಸುವವರಿಗೆ ಪ್ರತ್ಯೇಕ ಕೌಂಟರ್‌ಗಳಲ್ಲಿ ಮಾಹಿತಿ ನೀಡಿ ಬ್ಯಾಗ್‌, ಮೊಬೈಲ್‌ ಇರಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಟಾಪ್ ನ್ಯೂಸ್

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು..

BBK11: ಬಿಗ್‌ ಬಾಸ್‌ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು

IPL retention: IPL new rule gave good news to Chennai-Mumbai Franchise

IPL retention: ಚೆನ್ನೈ-ಮುಂಬೈಗೆ ಗುಡ್‌ ನ್ಯೂಸ್‌ ನೀಡಿದ ಐಪಿಎಲ್‌ ಹೊಸ ನಿಯಮ

1-HDK

Documents ಬಿಡುಗಡೆಯಾದರೆ 6-7 ಸಚಿವರು ರಾಜೀನಾಮೆ ನೀಡಬೇಕಾಗುತ್ತದೆ: ಎಚ್ ಡಿಕೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaa

Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ

Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು

Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು

ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Mangaluru: ಮುಕ್ತಿ ಕಾಣದ “ಬ್ಲ್ಯಾಕ್‌ಸ್ಪಾಟ್‌’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್‌ ನಜೀರ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

BBK11: ಮೂರನೇ ಸ್ಪರ್ಧಿಯಾಗಿ ಬಿಗ್‌ ಬಾಸ್‌ ಮನೆಗೆ ʼಫೈಯರ್‌ ಬ್ರ್ಯಾಂಡ್‌ʼ ಎಂಟ್ರಿ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

snemahamayi-Krishna

MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್‌ ಕೊಟ್ಟ ಸ್ನೇಹಮಯಿ ಕೃಷ್ಣ!

1-qweewq

Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ

1-frrr

Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.