Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು


Team Udayavani, Jun 4, 2024, 10:30 PM IST

9-kasaragodu

ವಂಚನೆ ಪ್ರಕರಣ: 21 ಪವನ್‌ ಚಿನ್ನ ಪತ್ತೆ

ಮುಳ್ಳೇರಿಯ: ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೆàರ್‌ ಕೋ-ಆಪರೇಟಿವ್‌ ಸೊಸೈಟಿಯಿಂದ 4.76 ಕೋಟಿ ರೂ. ವಂಚನೆ ನಡೆಸಿದ ಪ್ರಕರಣದ ಮುಖ್ಯ ಆರೋಪಿ ಕರ್ಮಂತೋಡಿ ಬಾಳಕಂಡದ ರತೀಶನ್‌ ತಲೆಮರೆಸಿಕೊಂಡಿದ್ದು, ಜಿಲ್ಲಾ ಕ್ರೈಂಬ್ರಾಂಚ್‌ ಡಿವೈಎಸ್‌ಪಿ ಶಿಬು ಪಾಪಚ್ಚನ್‌ ಹಾಗು ಬೇಕಲ ಡಿವೈಎಸ್‌ಪಿ ಜಯನ್‌ ಡೊಮಿನಿಕ್‌ ನೇತೃತ್ವದಲ್ಲಿ ವ್ಯಾಪಕ ಶೋಧ ನಡೆಯುತ್ತಿದೆ.

ವಂಚನೆ ನಡೆಸಿದ ಚಿನ್ನದ ಪೈಕಿ 21 ಪವನ್‌ ಚಿನ್ನವನ್ನು ಪತ್ತೆಹಚ್ಚಲಾಗಿದೆ. ಕೇರಳ ಬ್ಯಾಂಕ್‌ನ ಪೆರಿಯ ಶಾಖೆಯಲ್ಲಿ ಅಡವಿರಿಸಿದ 7.34 ಲಕ್ಷ ರೂ. ಯ 21 ಪವನ್‌ ಚಿನ್ನವನ್ನು ವಶಪಡಿಸಿಕೊಂಡಿದೆ. ಈ ಚಿನ್ನವನ್ನು ರಿಮಾಂಡ್‌ನ‌ಲ್ಲಿರುವ ಆರೋಪಿ ಕಾಂಞಂಗಾಡ್‌ ನೆಲ್ಲಿಕ್ಕಾಡ್‌ನ‌ ಅನಿಲ್‌ ಕುಮಾರ್‌ನ ಸಂಬಂಧಿಕನ ಹೆಸರಿನಲ್ಲಿ ಅಡವಿರಿಸಿದ ಚಿನ್ನ ಇದಾಗಿದೆ.

ಇದರೊಂದಿಗೆ ಒಟ್ಟು 1.6 ಕಿಲೋ ಚಿನ್ನವನ್ನು ತನಿಖಾ ತಂಡ ವಶಪಡಿಸಿಕೊಂಡಂತಾಗಿದೆ.

—————————————————————————————

ದೇವಸ್ಥಾನದಿಂದ ಕಳವು

ಕಾಸರಗೋಡು: ಪಿಲಿಕ್ಕೋಡು ಕರಕ್ಕಡವು ಭಗವತೀ ದೇವಸ್ಥಾನದ ಕಾಣಿಕೆ ಹುಂಡಿಯಿಂದ ಅದರಲ್ಲಿದ್ದ ಹಣವನ್ನು ಕಳವು ಮಾಡಲಾಗಿದೆ. ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ಒಡೆಯಲು ಯತ್ನಿಸಿದ್ದಾರೆ. ಈ ಬಗ್ಗೆ ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

———————————————————————————–

ವಾಹನ ಅಪಘಾತ: ನಾಲ್ವರಿಗೆ ಗಾಯ

ಕಾಸರಗೋಡು: ತೆಕ್ಕಿಲ್‌ ರಾಷ್ಟ್ರೀಯ ಹೆದ್ದಾರಿಯ ಸೇತುವೆಯಲ್ಲಿ ಆಟೋ ರಿಕ್ಷಾ ಮತ್ತು ಕಾರು ಢಿಕ್ಕಿ ಹೊಡೆದು ಆಟೋ ಪ್ರಯಾಣಿಕರಾದ ಚೆಂಬರಿಕದ ಸಿ.ಇ.ಫಾತಿಮ್ಮ(23), ಆಮಿನ(25) ಗಾಯಗೊಂಡಿದ್ದಾರೆ.

ಈ ಬಗ್ಗೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೆರಿಯಾ ಮೊಳೆಯೋಳಂನ ಸೌಪರ್ಣಿಕಾ ಕ್ಲಬ್‌ ಪರಿಸರದಲ್ಲಿ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಸ್ಕೂಟರ್‌ ಸವಾರ ತನ್ನಿತೋಟದ ಕೆ.ಅಶೋಕನ್‌(50) ಮತ್ತು ಅವರ ಪುತ್ರ ಅಶ್ವಿ‌ನ್‌(15) ಗಾಯಗೊಂಡಿದ್ದಾರೆ.

———————————————————————–

ಕಾನೂನು ಉಲ್ಲಂಘನೆ: ಬಂಧನ

ಕುಂಬಳೆ: ಕಾಪಾ ಪ್ರಕರಣದಲ್ಲಿ ಬಂಧಿತನಾಗಿ ಕಾನೂನು ಉಲ್ಲಂಘಿಸಿದ ಆರೋಪಿ ಉಪ್ಪಳ ಹಿದಾಯತ್‌ನಗರ ನಿವಾಸಿ ಮುಹಮ್ಮದ್‌ ಆರಿಫ್‌(31)ನನ್ನು ಪೊಲೀಸರು ಬಂಧಿಸಿದ್ದಾರೆ. ಡಿಐಜಿಯ ಆದೇಶ ಪ್ರಕಾರ ಕಾಪಾ ಕಾನೂನು ಪ್ರಕಾರ ಕಳೆದ ಎಪ್ರಿಲ್‌ 21 ರಿಂದ ಆರು ತಿಂಗಳಿಗೆ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವುದಕ್ಕೆ ಆರಿಫ್‌ಗೆ ನಿಷೇಧ ಹೇರಲಾಗಿತ್ತು. ಆದರೆ ಈ ಆದೇಶವನ್ನು ಉಲ್ಲಂಘಿಸಿ ಮೀಂಜ ಮಜಿಬೈಲಿನ ಭಗವತಿ ಕ್ಷೇತ್ರ ರಸ್ತೆಯಲ್ಲಿರುವ ಮನೆಗೆ ತಲುಪಿದಾಗ ಮುಹಮ್ಮದ್‌ ಆರಿಫ್‌ನನ್ನು ಬಂಧಿಸಲಾಯಿತು.

——————————————————————–

ಕೊಲೆ ಪ್ರಕರಣ: ಸಹೋದರರು ಸಹಿತ ನಾಲ್ವರಿಗೆ ಕಠಿಣ ಸಜೆ, ದಂಡ

ಕಾಸರಗೋಡು: ಕೊಳವೆ ಬಾವಿ ನಿರ್ಮಾಣದ ವಿಷಯದಲ್ಲಿ ಉಂಟಾದ ಘರ್ಷಣೆಯಲ್ಲಿ ಹಿತ್ತಿಲ ಮಾಲಕನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಸಹೋದರರೂ ಸಹಿತ ಒಟ್ಟು ನಾಲ್ಕು ಮಂದಿಗೆ ಕಾಸರಗೋಡು ಜಿಲ್ಲಾ ಸೆಶನ್ಸ್‌ ನ್ಯಾಯಾಲಯ (ಪ್ರಥಮ) ಒಟ್ಟು 18 ವರ್ಷ ಕಠಿಣ ಸಜೆ ಮತ್ತು 7.55 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಚಿತ್ತಾರಿಕಲ್‌ ಗ್ರಾಮದ ರಾವಣೇಶ್ವರ ಪಾಡಿಕಾನಂದ ನಿವಾಸಿ ಪಿ.ಎ.ಕುಮಾರನ್‌(57) ಅವರನ್ನು ಕೊಲೆಗೈದು ಅವರ ಪತ್ನಿ ವತ್ಸಲ (52) ಪುತ್ರ ಪ್ರಸಾದ್‌(25) ಅವರ ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಕೊಲೆಯಾದ ಕುಮಾರನ್‌ ಅವರ ಸಹೋದರರೂ ಆಗಿರುವ ರಾವಣೇಶ್ವರ ಪಾಡಿಕಾನಂ ನಿವಾಸಿಗಳಾದ ಶ್ರೀಧರನ್‌ ಪಿ.ಎ(56), ನಾರಾಯಣನ್‌ ಪಿ.ಎ(48) ಮತ್ತು ಪದ್ಮನಾಭನ್‌ (63), ನಾರಾಯಣನ್‌ ಅವರ ಪುತ್ರ ಸಂದೀಪ್‌ ಪಿ.ಎ(33) ಗೆ ಈ ಸಜೆ ವಿಧಿಸಿದೆ. 2016 ಡಿ.31 ರಂದು ಕೊಲೆ ಪ್ರಕರಣ ನಡೆದಿತ್ತು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

6

Arrested: ಪತ್ನಿಯ ಕೊ*ಲೆಗೆ ಯತ್ನ; ಪತಿಯ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Kasargod: ಕೊ*ಲೆ ಯತ್ನ: ನಾಲ್ವರ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Arrested: ಹಲವು ಪ್ರಕರಣಗಳ ಆರೋಪಿ ಬಂಧನ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

Kasargod: ವಿದ್ಯಾರ್ಥಿಗೆ ಹಲ್ಲೆ: ಇಬ್ಬರಿಗೆ ಸಜೆ, ದಂಡ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.