Lok Sabha ಫ‌ಲಿತಾಂಶ ಕಾಂಗ್ರೆಸ್‌ ನಾಯಕರಿಗೆ ಸಿಹಿ-ಕಹಿಯ ಮಿಶ್ರಣ

ಕೆಲವರಿಗೆ ಮೇಲುಗೈ, ಕೆಲವರಿಗೆ ಹಿನ್ನಡೆ; ನೇಪಥ್ಯಕ್ಕೆ ಸರಿಯುತ್ತಿದ್ದವರಿಗೆ ಫ‌ಲಿತಾಂಶ ಮಂಗಳಕರ

Team Udayavani, Jun 5, 2024, 7:15 AM IST

ಫ‌ಲಿತಾಂಶ ಕಾಂಗ್ರೆಸ್‌ ನಾಯಕರಿಗೆ ಸಿಹಿ-ಕಹಿಯ ಮಿಶ್ರಣ

ಬೆಂಗಳೂರು: ಲೋಕಸಭಾ ಚುನಾವಣೆ ಫ‌ಲಿತಾಂಶವು ರಾಜ್ಯದ ನಾಯಕರ ಮಟ್ಟಿಗೆ ಸಿಹಿ-ಕಹಿಯ ಮಿಶ್ರಣ. ಒಂದೇ ಪಕ್ಷದಲ್ಲಿ ಕೆಲವರಿಗೆ ಮೇಲುಗೈ ಆಗಿದ್ದರೆ, ಕೆಲವರಿಗೆ ಹಿನ್ನಡೆ ಉಂಟಾಗಿದೆ. ಅಲುಗಾಡುತ್ತಿದ್ದ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡರೆ, ನಿಶ್ಚಿಂತವಾಗಿದ್ದ ಇನ್ನು ಹಲವರ ಬುಡ ಅಲುಗಾಡುವಂತೆ ಮಾಡಿದೆ. ನೇಪಥ್ಯಕ್ಕೆ ಸರಿಯುತ್ತಿದ್ದವರು ಛಂಗನೇ ಜಿಗಿದು ನಿಲ್ಲುವಂತೆ ಮಾಡಿದ್ದು ಅಂತಹವರಿಗೆ ಮಂಗಳವಾರದ ಫ‌ಲಿತಾಂಶ ಮಂಗಳಕರವಾಗಿದೆ.

ಸಿದ್ದರಾಮಯ್ಯ- ತವರು ಕ್ಷೇತ್ರದಲ್ಲಿ ಸೋಲನುಭವಿಸಿದರೂ ಹಲವು ಕಾರಣಗಳಿಂದ ಮುಖ್ಯಮಂತ್ರಿ ಈ ಫ‌ಲಿತಾಂಶದಿಂದ ತಕ್ಕಮಟ್ಟಿಗೆ ತೃಪ್ತರಾಗಿದ್ದಾರೆ. ಯಾಕೆಂದರೆ, ತಮ್ಮ ಬಣದಲ್ಲಿ ಗುರುತಿಸಿಕೊಂಡಿದ್ದ ಬಹುತೇಕ ಅಭ್ಯರ್ಥಿಗಳನ್ನು ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಫ‌ಲಿತಾಂಶ ಹೊರಬೀಳುವ ಕೇವಲ ಎರಡು ದಿನಗಳ ಹಿಂದಷ್ಟೇ ತಮ್ಮ ಪುತ್ರನನ್ನು ಮೇಲ್ಮನೆ ಪ್ರವೇಶ ಖಚಿತಗೊಂಡಿದೆ. ಇದಕ್ಕೆ ಪ್ರತಿಯಾಗಿ ತಮ್ಮ ಎದುರಾಳಿ ಬಣಕ್ಕೆ ಹಿನ್ನಡೆಯಾಗಿದೆ. ಈ ಮೂಲಕ ಸಹಜವಾಗಿ ಮೇಲುಗೈ ಸಾಧಿಸಿದಂತಾಗಿದೆ.

ಚುನಾವಣೆ ಪೂರ್ವದಲ್ಲಿ ಚರ್ಚೆಯೊಂದು ಮುನ್ನೆಲೆಯಲ್ಲಿತ್ತು. ಒಂದು ವೇಳೆ ನಿರೀಕ್ಷಿತ ಫ‌ಲಿತಾಂಶ ಬಾರದಿದ್ದರೆ, ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದು ಕಷ್ಟ. ಸಿದ್ದರಾಮಯ್ಯ ಮುಂದುವರಿಯಬೇಕಾದರೆ, ಹೆಚ್ಚು ಸೀಟುಗಳನ್ನು ಗೆಲ್ಲಿಸಿ ಕೊಡಬೇಕು ಅಂತ ಶಾಸಕರು ವಿವಿಧ ವೇದಿಕೆಗಳಲ್ಲಿ ಹೇಳಿದ್ದೂ ಉಂಟು. ಆದರೆ, ಈ ಫ‌ಲಿತಾಂಶದಿಂದ ಕುರ್ಚಿ ಗಟ್ಟಿಯಾಗಿದ್ದು, ಈಗಾಗಲೇ ಆದ ಮಾತುಕತೆ ಪ್ರಕಾರ ಎರಡೂವರೆ ವರ್ಷ ತಮ್ಮ ಅಧಿಕಾರಾವಧಿಗೆ ಅಡತಡೆ ಇಲ್ಲದಂತಾಗಿದೆ.

ಡಿ.ಕೆ. ಶಿವಕುಮಾರ್‌- ಪಕ್ಷದಮಟ್ಟಿಗೆ ಫ‌ಲಿತಾಂಶ ಸಮಾಧಾನಕರವಾಗಿದ್ದರೂ ವೈಯಕ್ತಿಕ ಪ್ರದರ್ಶನ ವಿಚಾರದಲ್ಲಿ ಉಪಮುಖ್ಯಮಂತ್ರಿಗೆ ತುಸು ಹಿನ್ನಡೆಯಾಗಿದೆ ಎಂದೇ ಹೇಳಬೇಕಾಗುತ್ತದೆ. ಇದಕ್ಕೆ ಕಾರಣಗಳೂ ಇವೆ. ಮುಖ್ಯವಾಗಿ ತಮ್ಮ ಸಹೋದರ ಡಿ.ಕೆ. ಸುರೇಶ್‌, ಆಪ್ತರಾಗಿದ್ದ ವೆಂಕಟರಮಣೇಗೌಡ (ಸ್ಟಾರ್‌ಚಂದ್ರು) ಸೇರಿ ಬಣದಲ್ಲಿ ಗುರುತಿಸಿಕೊಂಡವರನ್ನೇ ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ, ಒಂಬತ್ತು ಸ್ಥಾನಗಳನ್ನು ಗೆದ್ದಿದ್ದರೂ ಅದು ತಮ್ಮ ಯಶಸ್ಸಿನ ಫ‌ಲ ಎಂದು ಸಂಪೂರ್ಣವಾಗಿ “ಕ್ಲೈಮ್‌’ ಮಾಡಿಕೊಳ್ಳಲು ಆಗುವುದಿಲ್ಲ.
ಎಂಟು ಜನ ಒಕ್ಕಲಿಗರಿಗೆ ಟಿಕೆಟ್‌ ಕೊಡಿಸಿದ್ದಾಗಿ ಸ್ವತಃ ಡಿಸಿಎಂ ಹೇಳಿಕೊಂಡಿದ್ದರು. ಆದರೆ, ಅದರಲ್ಲಿ ಒಬ್ಬರು ಮಾತ್ರ ಗೆದ್ದಿದ್ದಾರೆ. ಇದರ ನಡುವೆ ಅಧಿಕಾರಕ್ಕೆ ಬರುತ್ತಿದ್ದಂತೆ ಒಕ್ಕಲಿಗ ಸಮುದಾಯದ ನಾಯಕನನ್ನಾಗಿ ಬಿಂಬಿಸಿಕೊಳ್ಳಲು ಯತ್ನಿಸಿದ್ದರು. ಅದರಲ್ಲಿ ಭಾಗಶಃ ಯಶಸ್ವಿಯೂ ಆಗಿದ್ದರು ಎನ್ನಲಾಗಿತ್ತು. ಆದರೆ, ಫ‌ಲಿತಾಂಶ ಆ ಲೆಕ್ಕಾಚಾರವನ್ನು ತಿರುವು ಮುರುವುಗೊಳಿಸಿತು. ಇದಕ್ಕೆ ಪೂರಕವಾಗಿ ಸ್ವತಃ ಡಿ.ಕೆ. ಶಿವಕುಮಾರ್‌, “ಈ ಫ‌ಲಿತಾಂಶದ ಮೂಲಕ ಜನ ನನಗೆ ಸಂದೇಶ ನೀಡಿದ್ದಾರೆ. ಅದನ್ನು ಅರ್ಥಮಾಡಿಕೊಳ್ಳುತ್ತೇನೆ. ಎಲ್ಲೆಲ್ಲಿ ತಪ್ಪಾಗಿದೆ ಎಂಬುದನ್ನು ಪರಿಶೀಲಿಸಿ, ಸರಿಪಡಿಸಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಇನ್ನು ಈ ಹಿನ್ನಡೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವಂತೆ ಒತ್ತಡ ಹೆಚ್ಚಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಅಧ್ಯಕ್ಷಗಿರಿ ಬಿಟ್ಟುಕೊಡುವ ಲೆಕ್ಕಾಚಾರದಲ್ಲಿ ಶಿವಕುಮಾರ್‌ ಇದ್ದರು.

ಮಲ್ಲಿಕಾರ್ಜುನ ಖರ್ಗೆ- ಈ ಹಿಂದಿನ ಚುನಾವಣೆಯಲ್ಲಿ ತಮ್ಮ ಸೋಲು ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲೇ ತೀವ್ರ ಹಿನ್ನಡೆ ಅನುಭವಿಸಿದ್ದ ಎಐಸಿಸಿ ಅಧ್ಯಕ್ಷರು, ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಬದಲಿಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರ ಜತೆಗೆ ಕಲ್ಯಾಣ ಕರ್ನಾಟಕದಲ್ಲಿ ಐದು ಕಡೆ (ಕಲಬುರಗಿ, ರಾಯಚೂರು, ಕೊಪ್ಪಳ, ಬೀದರ್‌, ಬಳ್ಳಾರಿ) ಗೆದ್ದಿದ್ದಾರೆ. ಒಟ್ಟಾರೆ 9ರ‌ಲ್ಲಿ ಅರ್ಧಕ್ಕಿಂತ ಹೆಚ್ಚು ಕಲ್ಯಾಣ ಕರ್ನಾಟಕದಿಂದಲೇ ಬಂದಿವೆ. ಇದರೊಂದಿಗೆ ಆ ಭಾಗದಲ್ಲಿ ಮತ್ತೆ ತಮ್ಮ ಹಿಡಿತ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲ, ಪಕ್ಷದಲ್ಲೂ ತಮ್ಮ ಪ್ರಭಾವ ಮತ್ತಷ್ಟು ವಿಸ್ತಾರಗೊಂಡಂತಾಗಿದೆ. ಮತ್ತೊಂದೆಡೆ ರಾಷ್ಟ್ರಮಟ್ಟದಲ್ಲೂ ತಮ್ಮ ಅಧ್ಯಕ್ಷತೆಯಲ್ಲಿ ಎದುರಿಸಿದ ಈ ಚುನಾವಣೆಯಲ್ಲಿ ಮೋದಿ ಅವರಿಗೆ ಜೋರಾಗಿ ಟಕ್ಕರ್‌ ನೀಡುವಲ್ಲಿ ಮಲ್ಲಿಕಾರ್ಜುನ ಖರ್ಗೆ ಯಶಸ್ವಿಯಾಗಿದ್ದಾರೆ. ಇದು ಕೂಡ ಅವರ ವರ್ಚಸ್ಸು ಹೆಚ್ಚುವಂತೆ ಮಾಡಿದೆ.

ಟಾಪ್ ನ್ಯೂಸ್

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1-24-sunday

Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

Modi ಮುಂದೆ ಕರ ಸಮರ! ಪ್ರಧಾನಿ ಭೇಟಿ ಮಾಡಿದ ಸಿಎಂ, ಡಿಸಿಎಂ ನೇತೃತ್ವದ ನಿಯೋಗ

Modi ಮುಂದೆ ಕರ ಸಮರ! ಪ್ರಧಾನಿ ಭೇಟಿ ಮಾಡಿದ ಸಿಎಂ, ಡಿಸಿಎಂ ನೇತೃತ್ವದ ನಿಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

Train ವಂದೇ ಭಾರತ್‌ ಟಿಕೆಟ್‌ ದರ ಇಳಿಕೆ: ಸೋಮಣ್ಣ

Modi ಮುಂದೆ ಕರ ಸಮರ! ಪ್ರಧಾನಿ ಭೇಟಿ ಮಾಡಿದ ಸಿಎಂ, ಡಿಸಿಎಂ ನೇತೃತ್ವದ ನಿಯೋಗ

Modi ಮುಂದೆ ಕರ ಸಮರ! ಪ್ರಧಾನಿ ಭೇಟಿ ಮಾಡಿದ ಸಿಎಂ, ಡಿಸಿಎಂ ನೇತೃತ್ವದ ನಿಯೋಗ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

CM,DCM ಬಗ್ಗೆ ಪದೇ ಪದೆ ಹೇಳಿಕೆ ಬೇಡ ; ಮೀರಿದರೆ ಶಿಸ್ತು ಕ್ರಮ: ಡಿಕೆಶಿ

Pen Drive Case ಲೈಂಗಿಕ ದೌರ್ಜನ್ಯ: ಪ್ರಜ್ವಲ್‌ಗೆ ಮತ್ತೆ ನ್ಯಾಯಾಂಗ ಬಂಧನ

Pen Drive Case ಲೈಂಗಿಕ ದೌರ್ಜನ್ಯ: ಪ್ರಜ್ವಲ್‌ಗೆ ಮತ್ತೆ ನ್ಯಾಯಾಂಗ ಬಂಧನ

ವಾಲ್ಮೀಕಿ ನಿಗಮ ಹಗರಣ: ಜು. 3ಕ್ಕೆ ಸಿಎಂ ಮನೆ ಮುತ್ತಿಗೆ

Valmiki ನಿಗಮ ಹಗರಣ: ಜು. 3ಕ್ಕೆ ಸಿಎಂ ಮನೆ ಮುತ್ತಿಗೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

T20 World Cup; ವಿರಾಟ್ ದಾರಿಯಲ್ಲೇ ಸಾಗಿದ ರೋಹಿತ್; ಕಪ್ ಗೆದ್ದ ಬಳಿಕ ನಿವೃತ್ತಿ ಘೋಷಣೆ

2-kushtagi

Kushtagi: ಮನೆ ಮುಂದೆ ನಿಲ್ಲಿಸಿದ್ದ ದ್ವಿ ಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1-24-sunday

Daily Horoscope: ಶನಿ ಪ್ರಭಾವದಿಂದ ಕಾರ್ಯ ವಿಳಂಬವಾದರೂ ಕ್ರಿಯೆಗೆ ವಿರಾಮ ಇರದು

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Madikeri ಸೆ.15ರ ವರೆಗೆ “ಗಾಜಿನ ಸೇತುವೆ’ ವೀಕ್ಷಣೆ ಸ್ಥಗಿತ : ಜಿಲ್ಲಾಧಿಕಾರಿ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.