Stock Market: ಬಾಂಬೆ ಷೇರುಪೇಟೆ ಸೂಚ್ಯಂಕ 1,000 ಅಂಕ ಜಿಗಿತ, ನಿಫ್ಟಿಯೂ ಏರಿಕೆ
ನಿನ್ನೆ ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂಪಾಯಿ ನಷ್ಟವಾಗಿತ್ತು...
Team Udayavani, Jun 5, 2024, 11:18 AM IST
ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ (ಜೂನ್ 05) ಆರಂಭಿಕ ವಹಿವಾಟಿನಲ್ಲಿ ಬರೋಬ್ಬರಿ ಒಂದು ಸಾವಿರ ಅಂಕಗಳಷ್ಟು ಏರಿಕೆ ಕಂಡು, ವಹಿವಾಟು ಮುಂದುವರಿದಿದೆ.
ಇದನ್ನೂ ಓದಿ:Arrested: ಮೂವರು ಮೊಬೈಲ್ ಸುಲಿಗೆಕೋರರ ಬಂಧನ; 1.25 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳ ವಶ
ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಬಿಎಸ್ ಇ ಸೂಚ್ಯಂಕ 4,390 ಅಂಕಗಳಷ್ಟು ಪತನಗೊಂಡಿತ್ತು. ಇದು ನಾಲ್ಕು ವರ್ಷಗಳಲ್ಲಿ ಆದ ಅತೀ ದೊಡ್ಡ ಪತನವಾಗಿದೆ.
ನಿನ್ನೆ ಮಧ್ಯಂತರದ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆ ಸೂಚ್ಯಂಕ 6,234.35 ಅಂಕ ಕುಸಿತಗೊಂಡು, 70,234.41 ಅಂಕಗಳಷ್ಟು ಕುಸಿತ ಕಂಡಿತ್ತು. ದಿನಾಂತ್ಯಕ್ಕೆ ಚೇತರಿಕೆಯೊಂದಿಗೆ 4,390 ಅಂಕ ಕುಸಿದು, 72,079 ಅಂಕದಲ್ಲಿ ಮುಕ್ತಾಯ ಕಂಡಿತ್ತು.
ಬುಧವಾರ ಆರಂಭಿಕ ವಹಿವಾಟಿನಲ್ಲಿ ಬಾಂಬೆ ಷೇರುಪೇಟೆ ಸೂಚ್ಯಂಕ 1,031.36 ಅಂಕಗಳ ಜಿಗಿತದೊಂದಿಗೆ 73,110.41 ಅಂಕಗಳ ಗಡಿ ದಾಟಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 131.10 ಅಂಕಗಳ ಏರಿಕೆಯೊಂದಿಗೆ 22,015.60 ಅಂಕಗಳ ಮಟ್ಟದಲ್ಲಿ ವಹಿವಾಟು ಮುಂದುವರಿದಿದೆ.
ನಿನ್ನೆ ಹೂಡಿಕೆದಾರರಿಗೆ 31 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದ್ದು, ಇಂದು ಸೂಚ್ಯಂಕ, ನಿಫ್ಟಿ ಏರಿಕೆ ಕಂಡ ಪರಿಣಾಮ ಐಟಿ, ಫೈನಾಶ್ಶಿಯಲ್, ಆಟೋ ಸೆಕ್ಟರ್ ಷೇರುಗಳ ಖರೀದಿಗೆ ಮುಂದಾಗಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.