Sandalwood: ಇದೇ ಶುಕ್ರವಾರ ದರ್ಶನ್ ಅಭಿನಯದ ಸೂಪರ್ ಹಿಟ್ ʼರಾಬರ್ಟ್ʼ ಮರು ಬಿಡುಗಡೆ
Team Udayavani, Jun 5, 2024, 3:01 PM IST
ಬೆಂಗಳೂರು: 2021 ರಲ್ಲಿ ತೆರೆಕಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼರಾಬರ್ಟ್ʼ ಚಿತ್ರ ಮತ್ತೊಮ್ಮೆ ಬಿಗ್ ಸ್ಕ್ರೀನ್ ನಲ್ಲಿ ಅಬ್ಬರಿಸಲು ರೆಡಿಯಾಗಿದೆ.
ಡಿಬಾಸ್ ದರ್ಶನ್ ಡಿಫ್ರೆಂಟ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದ ʼರಾಬರ್ಟ್ʼ ಪಕ್ಕಾ ಮಾಸ್ ಮಸಾಲ ಮೂವಿಯಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು. ದರ್ಶನ್ ಜೊತೆ ವಿನೋದ್ ಪ್ರಭಾಕರ್ ಅವರ ಪಾತ್ರ ಕೂಡ ಸದ್ದು ಮಾಡಿತ್ತು.
ಮಾರ್ಚ್ 11, 2021 ರಲ್ಲಿ ತೆರೆಕಂಡಿದ್ದ ʼರಾಬರ್ಟ್ʼ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. 100 ಕೋಟಿ ಗಳಿಕೆ ಕಂಡು ದರ್ಶನ್ ಅವರಿಗೆ ಬಿಗ್ ಹಿಟ್ ತಂದುಕೊಟ್ಟಿತು.
ಈ ಸಿನಿಮಾ ಹಿಟ್ ಬಳಿಕ ತರುಣ್ ಸುಧೀರ್ ದರ್ಶನ್ ಅವರೊಂದಿಗೆ ʼಕಾಟೇರʼ ಮಾಡಿದ್ದರು. ʼಕಾಟೇರʼ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಇದನ್ನೂ ಓದಿ: Kannada Movies: ಸ್ಯಾಂಡಲ್ ವುಡ್ಗೆ ಜೀವಕಳೆ; ಜೂ.14ಕ್ಕೆ ಒಂದೇ ದಿನ 4 ಸಿನಿಮಾ ರಿಲೀಸ್
ಇದೀಗ ʼರಾಬರ್ಟ್ʼ ಆಗಿ ದರ್ಶನ್ ಮತ್ತೆ ತೆರೆ ಮೇಲೆ ಅಬ್ಬರಿಸಲಿದ್ದಾರೆ. ಇದೇ ಶುಕ್ರವಾರ(ಜೂ.7 ರಂದು) ಮತ್ತೆ ಥಿಯೇಟರ್ನಲ್ಲಿ ʼರಾಬರ್ಟ್ʼ ರಿಲೀಸ್ ಆಗಲಿದೆ.
ಮಲ್ಟಿಫ್ಲೆಕ್ಸ್ ಸೇರಿದಂತೆ,ಸಿಂಗಲ್ ಥಿಯೇಟರ್ ನಲ್ಲಿ ʼರಾಬರ್ಟ್ʼ ರೀ ರಿಲೀಸ್ ಆಗಲಿದೆ. ಈ ಸುದ್ದಿ ಕೇಳಿ ಡಿಬಾಸ್ ಫ್ಯಾನ್ಸ್ ಗಳು ಸಖತ್ ಖುಷ್ ಆಗಿದ್ದಾರೆ.
ಚಿತ್ರದಲ್ಲಿ ದರ್ಶನ್ ಜೊತೆ ಆಶಾ ಭಟ್,ಸೋನಲ್ ಮೊಂಟೇರಿಯೋ,ವಿನೋದ್ ಪ್ರಭಾಕರ್, ಜಗಪತಿ ಬಾಬು,ದೇವರಾಜ್ ಮುಂತಾದವರು ನಟಿಸಿದ್ದರು.
ಸದ್ಯ ದರ್ಶನ್ ʼಡೆವಿಲ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಚಿತ್ರ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Moksha Kushal: ಹಾಟ್ ಫೋಟೋಶೂಟ್ನಲ್ಲಿ ಮೋಕ್ಷಾ ಮಿಂಚು
Bhairadevi; ಈ ಚಿತ್ನ ನನಗೆ ಆಪ್ತಮಿತ್ರ ನೆನಪಿಸಿತು…: ರಮೇಶ್ ಅರವಿಂದ್
Sandalwood; ‘ಮುಂದಿನ ಭಾಗದಲ್ಲಿ ನಿರೀಕ್ಷಿಸಿ..’ ಸ್ಯಾಂಡಲ್ವುಡ್ನ ಪಾರ್ಟ್-2 ಕ್ರೇಜ್
Upendra Movie: ರೀ ರಿಲೀಸ್ ನಲ್ಲೂ ʼಉಪೇಂದ್ರʼನಿಗೆ ಜೈ ಎಂದ ಪ್ರೇಕ್ಷಕ
Nite Road; ಇಂದು ತೆರೆಗೆ ಬರುತ್ತಿದೆ ಕ್ರೈಂ ಕಹಾನಿ ʼನೈಟ್ ರೋಡ್ʼ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.