New parliament ಹೇಮಾ ಮಾಲಿನಿ, ಕಂಗನಾ…;ಸಂಸದರಾದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ

ಬಿಜೆಪಿ ರಾಮ ಜನ್ಮಭೂಮಿಯಲ್ಲಿ ಗೆಲ್ಲದೇ ಹೋದರೂ ರಾಮನ ಪಾತ್ರಧಾರಿಗೆ ಜಯ

Team Udayavani, Jun 5, 2024, 4:27 PM IST

kangana

ಹೊಸದಿಲ್ಲಿ: ಮತದಾರರು ಈ ಚುನಾವಣೆಯಲ್ಲಿ ಅನೇಕ ಸೆಲೆಬ್ರಿಟಿಗಳು ಮತ್ತು ಹೊಸತನಕ್ಕೆ ಒಲವು ತೋರಿದ್ದಾರೆ. ಮೊದಲ ಬಾರಿಗೆ ಸಂಸದೆಯಾದ ಕಂಗನಾ ರಣಾವತ್ ಮತ್ತು “ರಾಮಾಯಣ” ಸ್ಟಾರ್ ಅರುಣ್ ಗೋವಿಲ್ ಅವರು 18 ನೇ ಲೋಕಸಭೆ ಪ್ರವೇಶಿಸಿದ್ದಾರೆ.

ಚಿತ್ರರಂಗದ ಸ್ಟಾರ್-ರಾಜಕಾರಣಿಯ ಹೇಮಾ ಮಾಲಿನಿ ಮತ್ತು ಮನೋಜ್ ತಿವಾರಿ ಮತ್ತೆ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಂಗನಾ ತವರು ರಾಜ್ಯ ಹಿಮಾಚಲ ಪ್ರದೇಶದ ಮಂಡಿಯಿಂದ ಮೊದಲ ಚುನಾವಣೆಯಲ್ಲಿ ಆರು ಬಾರಿ ಮುಖ್ಯಮಂತ್ರಿಯಾಗಿದ್ದ ವೀರಭದ್ರ ಸಿಂಗ್ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಿಜೆಪಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಗೆಲ್ಲದೇ ಹೋದರೂ ರಾಮನ ಪಾತ್ರಧಾರಿಗೆ ಜಯ ಸಿಕ್ಕಿರುವುದು ಗಮನಾರ್ಹವಾಗಿದೆ.

ಅರುಣ್  ಗೋವಿಲ್ ಬಿಜೆಪಿಯಿಂದ ಕಣಕ್ಕಿಳಿದ ಮತ್ತೊಬ್ಬ ಸೆಲೆಬ್ರಿಟಿ. ಉತ್ತರ ಪ್ರದೇಶದ ಮೀರತ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಸುನೀತಾ ಯಾದವ್ ಅವರೊಂದಿಗಿನ ಜಿದ್ದಾಜಿದ್ದಿನ ಹೋರಾಟದಲ್ಲಿ ಕೇವಲ 10,585 ಮತಗಳಿಂದ ಗೆದ್ದರು.

ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಹೇಮಾ ಮಾಲಿನಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮುಖೇಶ್ ಧಂಗರ್ ವಿರುದ್ಧ ಮಥುರಾದಿಂದ ಲೋಕಸಭೆಗೆ ನೇರ ಮೂರನೇ ಅವಧಿಗೆ ಆಯ್ಕೆಯಾಗಿದ್ದಾರೆ. ಮೂರನೇ ಗೆಲುವು ಕೃಷ್ಣ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟ ದೇವಸ್ಥಾನದ ಪಟ್ಟಣವಾದ ಮಥುರಾದಲ್ಲಿ ಬಿಜೆಪಿ ಹಿಡಿತವನ್ನು ತೋರಿಸಿದೆ.

ಈಶಾನ್ಯ ದೆಹಲಿಯ ಬಿಜೆಪಿ ಅಭ್ಯರ್ಥಿ, ಭೋಜ್‌ಪುರಿ ಸಿನಿಮಾ ನಟ -ಗಾಯಕ ಮನೋಜ್ ತಿವಾರಿ ಜನಪ್ರಿಯ ಯುವ ನಾಯಕ ಕಾಂಗ್ರೆಸ್‌ನ ಪ್ರತಿಸ್ಪರ್ಧಿ ಕನ್ಹಯ್ಯಾ ಕುಮಾರ್‌ಗೆ ಸೋಲುಣಿಸಿದರು. ಇದು ತಿವಾರಿ ಅವರ ಸತತ ಮೂರನೇ ಗೆಲುವು.

ಉತ್ತರ ಪ್ರದೇಶದ ಗೋರಖ್‌ಪುರದಿಂದ ಮತ್ತೊಬ್ಬ ಜನಪ್ರಿಯ ಭೋಜ್‌ಪುರಿ ಸಿನಿಮಾ ತಾರೆ ರವಿ ಕಿಶನ್ ಸತತ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಅವರು ಸಮಾಜವಾದಿ ಪಕ್ಷದಿಂದ ಕಾಜಲ್ ನಿಶಾದ್ ಅವರನ್ನು ಸೋಲಿಸಿ ತಮ್ಮ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಈ ಕ್ಷೇತ್ರ ಸಿಎಂ ಯೋಗಿ ಆದಿತ್ಯನಾಥ್ ಅವರಿಗೂ ಪ್ರತಿಷ್ಠೆಯ ಕಣವಾಗಿತ್ತು.

ಬಿಜೆಪಿಯ ಮತ್ತೊಬ್ಬ ಅಭ್ಯರ್ಥಿ ಖ್ಯಾತ ಮಲಯಾಳಂ ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ವಿ.ಎಸ್. ಸುನೀಲ್‌ಕುಮಾರ್ ಅವರನ್ನು ಸೋಲಿಸಿ ರಾಜ್ಯದ ಮೊದಲ ಬಿಜೆಪಿ ಸಂಸದ ಎನಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಎಸ್‌ಎಸ್ ಅಹ್ಲುವಾಲಿಯಾ ಅವರನ್ನು ಸೋಲಿಸಿ ಮತ್ತೆ ಸಂಸತ್ ಪ್ರವೇಶಿಸುತ್ತಿದ್ದಾರೆ.

ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಬಿಜೆಪಿಯ ಅಗ್ನಿಮಿತ್ರ ಪಾಲ್ ಅವರನ್ನು ಸೋಲಿಸುವ ಮೂಲಕ ಬಂಗಾಳಿ ನಟಿ -ಟಿಎಂಸಿಯ ಜೂನ್ ಮಲಿಯಾ ಅವರು ಕಠಿನ ಹೋರಾಟದಲ್ಲಿ ಗೆದ್ದಿದ್ದಾರೆ. 2021 ರಲ್ಲಿ, ಮಲಿಯಾ ಅವರು ಮೇದಿನಿಪುರದಿಂದ ಪಶ್ಚಿಮ ಬಂಗಾಳದ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.

ಪಶ್ಚಿಮ ಬಂಗಾಳದ ಬಿರ್ಭೂಮ್‌ನಲ್ಲಿ ಟಿಎಂಸಿಯ ಮೂರು ಅವಧಿಯ ಸಂಸದ ಮತ್ತು ನಟ ಶತಾಬ್ದಿ ರಾಯ್ ಅವರು ಬಿಜೆಪಿಯ ದೇಬ್ತಾನು ಭಟ್ಟಾಚಾರ್ಯ ವಿರುದ್ಧ ಭರ್ಜರಿ ಜಯ ಸಾಧಿಸಿದ್ದಾರೆ.

ರಾಜ್ಯದ ಹೂಗ್ಲಿ ಮತ್ತು ಘಟಾಲ್ ಕ್ಷೇತ್ರಗಳಲ್ಲಿ ಟಿಎಂಸಿ ಮತ್ತು ಬಿಜೆಪಿಯ ಸೆಲೆಬ್ರಿಟಿ ಮುಖಗಳ ನಡುವೆ ಹಣಾಹಣಿ ಏರ್ಪಟ್ಟಿತ್ತು. ಆದರೆ ಎರಡರಲ್ಲೂ ಟಿಎಂಸಿ ಮೇಲುಗೈ ಸಾಧಿಸಿದೆ.

ನಟಿ ಮತ್ತು ಟಿಎಂಸಿ ಅಭ್ಯರ್ಥಿ ರಚನಾ ಬ್ಯಾನರ್ಜಿ ಅವರು ಹೂಗ್ಲಿಯಿಂದ ಬಿಜೆಪಿಯ ನಟ ಲಾಕೆಟ್ ಚಟರ್ಜಿ ವಿರುದ್ಧ ಗೆದ್ದಿದ್ದಾರೆ. ಇದು ರಾಜಕಾರಣಿಯಾಗಿ ಬ್ಯಾನರ್ಜಿಯವರ ಮೊದಲ ಪ್ರವೇಶವಾಗಿದೆ.

ಘಟಾಲ್ ಕ್ಷೇತ್ರದಲ್ಲಿ ನಟ, ನಿರ್ಮಾಪಕ, ಗಾಯಕ ಮತ್ತು ಚಿತ್ರಕಥೆಗಾರ ಅಧಿಕಾರಿ ದೀಪಕ್ (ದೇವ್)ಜಯ ಸಾಧಿಸಿ ಮೂರನೇ ಅವಧಿಗೆ ಸಂಸತ್ ಪ್ರವೇಶಿಸಿದ್ದಾರೆ.

ಪಶ್ಚಿಮ ಬಂಗಾಳದ ಬಹರಂಪುರದಿಂದ ಟಿಎಂಸಿಯಿಂದ ಕಣಕ್ಕಿಳಿದಿದ್ದ ಮಾಜಿ ಕ್ರಿಕೆಟಿಗ ಯುಸೂಫ್ ಪಠಾಣ್ ಅವರು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಸೋಲಿಸಿ ಸಂಸತ್ ಪ್ರವೇಶಿಸಿದ್ದಾರೆ.

ಇರಾನಿಗೆ ಸೋಲು
ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಮಾಜಿ ನಟಿ ಮತ್ತು ಬಿಜೆಪಿ ಸಂಸದೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್‌ನ ಕಿಶೋರಿಲಾಲ್ ಶರ್ಮ ವಿರುದ್ಧ ಸೋಲು ಅನುಭವಿಸಿದ್ದಾರೆ.

ಬಿಜೆಪಿಯಿಂದ ಈ ಬಾರಿ ಕಣಕ್ಕಿಳಿದಿದ್ದ ಸಂಸದೆಯಾಗಿದ್ದ ನಟಿ ನವನೀತ್ ಕೌರ್ ರಾಣಾ ಅವರು ಅಮರಾವತಿಯ ಕಾಂಗ್ರೆಸ್ ಅಭ್ಯರ್ಥಿ ಬಲವಂತ್ ವಾಂಖೆಡೆ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದಾರೆ.

ನಟ-ಬಿಜೆಪಿ ಅಭ್ಯರ್ಥಿ ನಿರಾಹುವಾ ಎಂಬ ಹೆಸರಿನಿಂದ ಚಿರಪರಿಚಿತರಾಗಿರುವ ದಿನೇಶ್ ಲಾಲ್ ಯಾದವ್ ಉತ್ತರ ಪ್ರದೇಶದ ಅಜಂಗಢ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಧರ್ಮೇಂದ್ರ ಯಾದವ್ ಅವರ ಎದುರು ಸೋಲು ಅನುಭವಿಸಿದ್ದಾರೆ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Recipe; ಈ ಸ್ನಾಕ್ಸ್ ಒಂದು ಸಲ ಮಾಡಿದ್ರೆ ಸಾಕು ಪದೇ ಪದೇ ಮಾಡ್ತೀರಾ ಏನ್ ರುಚಿ ಗೊತ್ತಾ!

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

Sheetal Devi: ಕೈಗಳಿಲ್ಲದ ಹುಡುಗಿ ಬಿಲ್ಗಾರಿಕೆಯಲ್ಲಿ ನಿಪುಣೆ; ಇದು ಸ್ಪೂರ್ತಿಯ ಕಥೆ

1-asaasas

Haryana ಗೆಲ್ಲಲು ಕೈ ಕಸರತ್ತು: ರಾಹುಲ್ ಭೇಟಿಯಾದ ವಿನೇಶ್, ಬಜರಂಗ್ !

6-WLD

Weight Loss Drinks: ತೂಕ, ಕೊಬ್ಬು ಕಡಿಮೆ ಮಾಡಿಕೊಳ್ಳಲು ಈ ಪಾನೀಯಗಳನ್ನು ಸೇವಿಸಿ

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

Death Penalty: ಸ್ವಾತಂತ್ರ್ಯ ನಂತರ ಭಾರತದಲ್ಲಿ ಗಲ್ಲಿಗೇರಿಸಲ್ಪಟ್ಟ ಮೊದಲ ಮಹಿಳಾ ಕೈದಿ ಈಕೆ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.