Old Memories: ಬರಿದಾಯಿತೆ ನೆನಪಿನ ಕೊಂಡಿ


Team Udayavani, Jun 5, 2024, 7:00 PM IST

18

ಭಾರತವು ಈಗಿನ ತಂತ್ರಜ್ಞಾನ ಯುಗದಲ್ಲಿ ಹಲವು ರೀತಿಯ ಅನ್ವೇಷಣೆಗಳನ್ನು ಮಾಡುತ್ತಾ ಬರುತ್ತಿದೆ. ಈಗ ದೇಶ – ವಿದೇಶದಲ್ಲಿ ಹಲವು ಪ್ರಜಾತಿಯನ್ನು ಮಾನವನು ಕೂಡ ನಿರ್ಮಿಸುತ್ತಿರುವ ವಿಷಯ ನಮಗೆಲ್ಲರಿಗೂ ತಿಳಿದಿದೆ. ಕೆಲವೊಂದು ವೈಜ್ಞಾನಿಕ ತಳಹದಿಯ ಕುರಿತಾಗಿ ಮತ್ತು ಇನ್ನೂ ಕೆಲವು ಆಹಾರದ ದೃಷ್ಟಿಕೋನದಿಂದ ಅನ್ವೇಷಿಸಲಾಗಿದೆ.

ಅದರೊಂದಿಗೆ ರೈತರು ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ  ಹೆಚ್ಚು ಲಾಭ ಪಡೆಯಬಹುದಾದ ಸಸ್ಯವರ್ಗವನ್ನು ಬೆಳೆಸಿಕೊಂಡು ತನ್ನ  ಜೀವನ ನಡೆಸುವವರನ್ನು ಕಾಣಬಹುದು. ಒಂದು ಗಿಡದ ಮೂಲಕ  ಹಲವು ಹಣ್ಣುಗಳನ್ನು ತನ್ನದಾಗಿಸಿಕೊಳ್ಳಬಹುದು.

ಒಂದು ಗಿಡಕ್ಕೆ ನಾನಾ ಬಗೆಯ ಗಿಡಗಳ ಕಸಿಯನ್ನು ಕಟ್ಟಿ ಬೆಳೆಸಬಹುದು.ಕಾಲ ಕಳೆದಂತೆ ಈ ಗಿಡಗಳ ಬೇಡಿಕೆ ಹೆಚ್ಚಾಗಬಹುದು. ಯಾಕೆಂದರೆ ಆದಾಯ ಗಳಿಸುವ ಮಾರ್ಗದಲ್ಲಿ ಇದೊಂದು ಸುಲಭದ ಮಾರ್ಗವೂ ಹೌದು.

ಅದರಲ್ಲಿಯೂ ಸಹ ಯಾವುದೇ ಅನ್ವೇಷಣೆಗೆ ಒಳಗಾಗದೆ ಇಡೀ ದೇಶದಲ್ಲಿ ಕೆಲವೇ ಕೆಲವು ಜನರಿಗೆ ತಿಳಿದಿರುವ ವಿಷಯ ನಮ್ಮ ನಾಡಿನಲ್ಲಿದೆ. ನಮ್ಮ  ನಾಡು ತುಳುನಾಡು  ಎಂದು ಗುರುತಿಸಬಹುದಾಗಿದೆ.

ಕೆಲವು ವರ್ಷಗಳ ಹಿಂದೆ ಹಾಗೂ ಈಗಲೂ ಕೆಲವೊಂದು ಕಡೆಗಳ ಕಾಡಿನಲ್ಲಿ ಮಾರ್ಚ್‌ ನಿಂದ ಜುಲೈ ವರೆಗೆ ಎತ್ತರದ ಮರದಲ್ಲಿ ಸಿಹಿಯನ್ನು ತುಂಬಿಕೊಂಡ ಹಣ್ಣೆಂದರೆ ಅದು ಕಾಡಿನ ಮಾವು. ಅದನ್ನು ತುಳು ಭಾಷೆಯಲ್ಲಿ ಕಾಟುಕುಕ್ಕು ಎಂದೇ ಕರೆಯುತ್ತಾರೆ.

ಇದು ಹೆಚ್ಚಾಗಿ ಕಾಡಿನ ಪ್ರದೇಶದಲ್ಲಿ ಸಿಗುವ ಕಾರಣದಿಂದ ಇದನ್ನು ಕಾಟುಕುಕ್ಕು ಕರೆಯುತ್ತಾರೆ ಎಂಬುದು ನನ್ನ ಊಹೆಯಾಗಿದೆ. ಇದು ಕೆಲವೊಂದು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಕಾಣಬಹುದಾಗಿದೆ.  ಈ ಹಣ್ಣು ಎಲ್ಲ ರೀತಿಯ ಮಾವಿನ ಹಣ್ಣಿಗಿಂತ ಬೇರೆಯದೆ ಸಿಹಿಯಾದ ರುಚಿಯನ್ನು ಹೊಂದಿದೆ.

ಇದು ನಮ್ಮ ಶಾಲಾ ವಾರ್ಷಿಕ ರಜಾ ದಿನದ ಸವಿ ನೆನಪುಗಳಲ್ಲಿ ಒಂದು ಕೂಡ. ಇದು ಮಳೆ ಅಥವಾ ಜೋರು ಗಾಳಿಯು ಬಂದು ಹೋದ ಅನಂತರ ಕಾಡಿನಿಂದ  ಅವುಗಳನ್ನು ಗೆಳೆಯರೊಂದಿಗೆ ಅಥವಾ ಅಣ್ಣ ಅಕ್ಕಂದಿರೊಂದಿಗೆ ಜತೆಗೂಡಿ ಇದನ್ನು ಹೆಕ್ಕುವ ಖುಷಿಯೇ ಬೇರೆ. ಅದೆಷ್ಟೋ ದಿವಸ ಬುಟ್ಟಿ, ಚೀಲವನ್ನು ಹಿಡಿದುಕೊಂಡು ಗಾಳಿ ಮಳೆ ಬಂದಾಗ ಮರದಡಿಯಲ್ಲಿಯೇ ಕುಳಿತು ಎಷ್ಟು ಮಾವಿನಕಾಯಿ ಸಿಕ್ಕಿದೆ ಎನ್ನುವ ವಿಷಯ ಈ ಕಾಲದ ಸಮಯದಲ್ಲಿ ಕಾಣುತ್ತಿಲ್ಲ.

ಅದರ ಬದಲಿಗೆ ತಮ್ಮ ತಮ್ಮ ಮೊಬೈಲ್‌ನಲ್ಲಿ ಎಷ್ಟು ಡೇಟಾ ಮುಗಿದಿದೆ ಎನ್ನುವುದು ಲೆಕ್ಕ ಹಾಕುವುದರಲ್ಲಿ ಮುಳುಗಿರುವುದು  ಬೇಸರದ ಸಂಗತಿಯಾಗಿದೆ. ನಮ್ಮ ಹಿರಿಯರು ಈ ಕಾಟು ಮಾವಿನಕಾಯಿ ಎಂದರೆ ಅದರಲ್ಲಿ ಮಾಡಬಹುದಾದಂತಹ ಖಾದ್ಯಗಳನ್ನು ಮಾಡಿ ಬಿಡುತ್ತಿದ್ದರು.

ಅವುಗಳೆಂದರೆ ಇದರ ಮಿಡಿಯಿಂದ ಉಪ್ಪಿನಕಾಯಿ ಮತ್ತು ಹಣ್ಣಿನಿಂದ ಚಂಡ್ರುಪುಳಿಯನ್ನು ಮಾಡುತ್ತಿದ್ದರು. ಕೆಲವೊಂದು ಸಂದರ್ಭದಲ್ಲಿ ಇದುವೇ ರಾತ್ರಿಯ ಪದಾರ್ಥವು ಆಗಿರುತ್ತಿತ್ತು.ಒಂದಷ್ಟು ಹಿಂದಿನ ದಿನದತ್ತ ಕಣ್ಣಾಯಿಸಿದರೆ ನಾವು ಎಷ್ಟೋ ವಿಷಯಗಳಿಂದ ಹೊರ ಉಳಿದಿದ್ದೇವೆ ಎನ್ನುವುದು ಭಾಸವಾಗುತ್ತದೆ.

ಆದರೆ ಈಗಿನ ಯುವಜನತೆ ಅದರ ರುಚಿಯನ್ನು ಸವಿಯಲು ಸಾಧ್ಯವಾಗುತ್ತಿಲ್ಲ. ಜತೆಗೆ ಹಿರಿಯರಿಗೆ ಗೊತ್ತಿರುವ ಮರಗಳ ಹೆಸರಿನಲ್ಲಿ ನಮಗೆ ಅರ್ಧದಷ್ಟು ತಿಳಿದಿರಲು ಸಾಧ್ಯವಿಲ್ಲ. ಯಾಕೆಂದರೆ ಆಧುನಿಕ ಯುಗವೆನ್ನುತ್ತ ನಮ್ಮದೇ ಪ್ರಪಂಚವೆಂದು ಜಂಗಮವಾಣಿಯಲ್ಲಿ ಮುಳುಗಿ ಬಿಟ್ಟಿದ್ದೇವೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಣ ವಿಡಿಯೋಗಳೇ ಆಕರ್ಷಣೆಗಳು ಹೊರತು ನಮ್ಮ ಸುತ್ತ ಮುತ್ತಲಿನ ಹಸಿರಿನತ್ತ ಗಮನ ಹರಿಸುವಷ್ಟು ಆಸಕ್ತಿಯನ್ನು ನಮ್ಮ ಯುವಜನತೆಯಲ್ಲಿ ಕಾಣುತ್ತಿಲ್ಲ ಹಾಗಾಗಿ ಯಾವ ಮರ ಯಾವ ಹಣ್ಣು ನೀಡುತ್ತದೆ ಎನ್ನುವುದು ನಮಗೆ ತಿಳಿದಿಲ್ಲ.

ಅನೇಕ ರೀತಿಯ ಅಭಿವೃದ್ಧಿಯ ಹೆಸರಿನಲ್ಲೇ ಮತ್ತು ರಸ್ತೆ ಕಾಮಗಾರಿಯ ಸಂದರ್ಭದಲ್ಲಿ ಈ ಮರಗಳನ್ನು ಬುಡ ಸಮೇತ ನೆಲಕ್ಕುರುಳಿಸುತ್ತಿದ್ದಾರೆ.ಮತ್ತು ಇನ್ನೂ ಕೆಲವು ವ್ಯಾಪಾರದ ನೆಲೆಯಲ್ಲಿ ಮರಗಳ ಕೊಂಬೆಯನ್ನು ಕಡಿದು ಹಣ್ಣುಗಳನ್ನು  ಮಾರುತ್ತಿದ್ದಾರೆ.

ಇದರಿಂದ ದಾರಿಹೋಕರಿಗೆ ಮತ್ತು ಪ್ರಾಣಿ ಪಕ್ಷಿಗಳಿಗೆ ಆಶ್ರಯ ತಾಣ  ಹಾಗೂ ಆಹಾರವು ಕಡಿಮೆಯಾಗುತ್ತಿದೆ.ಕಾಲ ಕಳೆದಂತೆ ನಮ್ಮ ನಾಡ ಪ್ರಕೃತಿಯು ಬರಿದಾಗುತ್ತಿದೆ ಎಂಬುದೇ ನಿಜವಾದ ಸಂಗತಿ ಎನ್ನಬಹುದು.ಪ್ರಕೃತಿಯ ವಸ್ತು ಯಾವಾಗಲೂ ಪ್ರಕೃತಿಗೆ ಸೇರಬೇಕು.ನಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ತಪ್ಪು ಎಂಬುದು ನನ್ನ ಸಂದೇಶ.

- ಅಜಿತ್‌ ನೆಲ್ಯಾಡಿ

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.