NEET ನಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಪ್ರಜ್ವಲ್ ಟಾಪರ್
ಕಾಲೇಜಿನ ಅಧ್ಯಕ್ಷರಿಂದ 10 ಲಕ್ಷ ರೂ. ಬಹುಮಾನ
Team Udayavani, Jun 6, 2024, 8:08 AM IST
ಬೆಳ್ತಂಗಡಿ: ರಾಷ್ಟ್ರೀಯ ವೈದ್ಯಕೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಾದ ನೀಟ್‌ನಲ್ಲಿ 720 ಅಂಕಗಳ ಪೈಕಿ 710 ಅಂಕ ಪಡೆದು ಸಾಧನೆ ಮಾಡಿದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಎಚ್.ಎಂ.ಗೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೇ ಸ್ವತಃ 10 ಲಕ್ಷ ರೂ. ಬಹುಮಾನ ನೀಡುವ ಮೂಲಕ ಸಾಧನೆಗೆ ವಿಶೇಷವಾಗಿ ಬೆನ್ನುತಟ್ಟಿದ್ದಾರೆ.
ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಜೂ.5ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಎಚ್.ಎಂ. ತಂದೆ ಮರಿಸ್ವಾಮಿ ಎಚ್.ಎಂ., ತಾಯಿ ಸೌಮ್ಯ ಅವರ ಸಮ್ಮುಖದಲ್ಲಿ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ 10 ಲಕ್ಷ ರೂಪಾಯಿ ಬಹುಮಾನದ ಜತೆಗೆ ಸಮ್ಮಾನಿಸಿ ಗೌರವಿಸಿದ್ದಾರೆ.
ಪ್ರಜ್ವಲ್ ಒಂದು ಪ್ರಶ್ನೆಗೆ ಉತ್ತರಿಸುವಲ್ಲಿ ಕೊಂಚ ಎಡವಿದ ಪರಿಣಾಮ 720 ರಲ್ಲಿ 720 ಅಂಕ ಗಳಿಸುವ ಸಾಧ್ಯತೆಯನ್ನು ಸ್ವಲ್ಪದರಲ್ಲೆ ಕೈಚೆಲ್ಲಿದ್ದಾರೆ. ಇಲ್ಲವಾದಲ್ಲಿ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಸಾಧನೆ ಮಾಡಿದಂತಾಗುತ್ತಿತ್ತು.
ಪ್ರಜ್ವಲ್ ಎಚ್.ಎಂ. ಸಾಧನೆಯನ್ನು ಗುರುತಿಸುವ ಸಲುವಾಗಿ ಕಾಲೇಜಿನ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳು ಕಾಲೇಜು ಆವರಣದಿಂದ ಬೆಳ್ತಂಗಡಿ ಬಸ್ ನಿಲ್ದಾಣದ ವರೆಗೆ ತೆರೆದ ವಾಹನದಲ್ಲಿ ಪೋಷಕರ ಸಮ್ಮುಖದಲ್ಲಿ ಮೆರವಣಿಗೆ ನಡೆಸಿದರು. ವಿವಿಧ ಸಂಘ ಸಂಸ್ಥೆಗಳು ಪ್ರಜ್ವಲ್ ಅವರನ್ನು ಗೌರವಿಸಿದ್ದಾರೆ.
ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್, ಪ್ರಾಂಶುಪಾಲ ಡಾ| ನವೀನ್ ಕುಮಾರ್ ಎಂ., ಆಡಳಿತ ಮಂಡಳಿಯ ಸಹನಾ ಜೈನ್, ಆಡಳಿತಾಧಿಕಾರಿ ಕೀರ್ತಿನಿಧಿ, ಶಾಂತಿರಾಜ್ ಜೈನ್, ಪ್ರಾಧ್ಯಾಪಕರಾದ ಶ್ರೀನಿಧಿ ರಾಜ್, ನಿಶಾ ಪೂಜಾರಿ, ವಿಲ್ಸನ್ ತಳ್ತೊಟ್ಟಿ, ಕೇಶವ್ ರಾವ್, ಡಾ| ಸತ್ಯನಾರಾಯಣ್ ಭಟ್, ಈಶ್ವರ್ ಶರ್ಮಾ, ಜೈಸ ಆಂಟನಿ, ಚಿಗುರು ಪ್ರಕಾಶ್, ಗ್ರಿಷಿನ್ ಡಿಸೋಜ, ಡಾ| ಆಸ್ಟಿನ್ ಡಿಸೋಜ, ಸಾರ್ವಜನಿಕ ಸಂಪರ್ಕಾಽಕಾರಿ ರಿಚರ್ಡ್ ಜೀವನ್ ಮೊರಾಸ್ ಮತ್ತಿತರ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.