![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 6, 2024, 1:30 PM IST
ಮನುಷ್ಯ ಎಷ್ಟೇ ಬುದ್ಧಿವಂತ, ಕೀರ್ತಿವಂತ, ವಿದ್ಯಾವಂತ ಹಾಗೂ ಹಣವಂತನಾದರೂ ಅವನ ಯಶಸ್ಸು ಭಾವನೆಯ ಸುಳಿಯೊಳಗಿನಿ ಸುರುಳಿಯ ಸುಳಿಯ ಹಾಗೆ ಸುಳಿಯುತ್ತಿರುತ್ತವುದು ಸತ್ಯ. ಈ ಬದುಕಿನ ಓಟದ ಬಂಡಿಯಲ್ಲಿ ಎಲ್ಲವೂ ಕ್ಷಣಿಕ, ಇದರ ಮದ್ಯ ನಡೆಯುವ ಸಾಧ್ಯ ಮತ್ತು ಅಸಾಧ್ಯಗಳ ನಡುವೆ ನಡೆಯುವ ಬದುಕಿನ ಯುದ್ಧ ಈ ಯುದ್ಧದಲ್ಲಿ ಬಾವನೆಗಳು ಸಹಜವಾಗಿ ಸ್ಮತಿಯ ಅಕ್ಷಿಪಟಲದ ಮುಂದೆ ಚಲನೆಯ ಪ್ರತಿರೂಪದ ಪ್ರತಿಕ್ಷಣದ ಪ್ರತಿಬಿಂಬಗಳಾಗಿವೆ.
ಸಾಧಿಸಲು ಮನುಷ್ಯನಿಗೆ ಸಹಸ್ರದಾರಿ ಆದರೆ ಭಾವನೆಗಳ ನಿಷ್ಠುರತೆಯಿಂದ ಏನು ಸಾಧಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಭಾವನೆಗಳ ಜಾಲದಲ್ಲಿ ಸಿಲುಕಿದರೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ನಡೆಯುವ ಸಂಭವ ಇರುತ್ತದೆ.ಅದನ್ನು ತಪಸ್ಸಿನ ರೀತಿಯಲ್ಲಿ ಕಾಯ್ದುಕೊಳ್ಳುವ ಯೋಗವನ್ನು ಪಡೆಯುವುದು ಹೇಗೆ ಎಂಬುದನ್ನು ಮನುಷ್ಯ ಅರಿತುಕೊಳ್ಳಬೇಕು. ಜೀವನದ ಏಳಿಗೆಗೆ ಭಾವನೆಗಳು ಪ್ರಮುಖ ಆದರೆ ಅವುಗಳನ್ನು ನಿಗ್ರಹ ಮಾಡುವ ಶಕ್ತಿಯನ್ನು ದೊರಕಿಸಿಕೊಳ್ಳಲು ಸದಾ ಪ್ರಯತ್ನಿಯಿಸುತ್ತಿರಬೇಕು.
ಭಾವನೆಗಳ ಹಿಡಿತ ಹಾಗೆಯೇ ಭಾವನೆಗಳನ್ನು ಹಿಡಿಯಲು ಮನಸ್ಸು ಗಟ್ಟಿ ಮಾಡಿಕೊಳ್ಳುವ ಯುಕ್ತಿಯನ್ನು ಪಡೆದುಕೊಳ್ಳುವ ಕಲೆಯನ್ನು ಕಲಿಯಬೇಕು. ಹೇಗೆ ಎಂಬುದಕ್ಕೆ ಹಲವಾರು ದಾರಿಗಳು ಸಿಗುತ್ತವೆ, ಭಾವನೆ ಮತ್ತು ಮನಸ್ಸು ಒಂದೇ ಮುಖದ ಎರಡು ನಾಣ್ಯಗಳು, ಅಸಾಧ್ಯವನ್ನು ಸಾಧ್ಯ ಮಾಡುವ ಮತ್ತು ಒಮ್ಮೊಮ್ಮೆ ಸಾಧ್ಯವೂ ಕೂಡ ಅಸಾಧ್ಯವಾಗಿ ಪರಿಣಮಿಸುವ ಇದಕ್ಕೆಲ್ಲಾ ಅವರ ಅವರ ಭಾವನೆಗಳೆ ಕಾರಣವಾಗಿರುತ್ತವೆ. ವ್ಯಕ್ತಿಗಳು ತಮ್ಮೊಳಗಿನ ಅಂತರ್ಯುದ್ಧದಲ್ಲಿ ಸಾಕಷ್ಟು ಹೋರಾಟ ನಡೆಸುವ ಮತ್ತು ನೋವು ನಲಿವುಗಳ ಸಾಂಗತ್ಯವನ್ನು ತಿಳಿದಿರುತ್ತಾನೆ.
ಭಾವನೆಗಳನ್ನು ಕೆದಕುವ ಪ್ರಸಂಗಗಳು ಸದಾ ನಡೆಯುತ್ತಿರುತ್ತವೆ ಆ ಸಂದರ್ಭವನ್ನು ಅರಿತು ಸಮಾಧಾನದಿಂದ ಇದ್ದು ತಿಳಿಗೊಳಿಸುವ ಮನಸ್ಸು ನಮ್ಮದಾಗಿರಬೇಕಾಗುತ್ತದೆ. ಮನಸ್ಸಿನ ಆಗರದಲ್ಲಿ ಘಟಿಸುವ ಘಟನೆಗಳ ಮೇಲೆ ಮನಸ್ಸಿನ ತೊಳಲಾಟಗಳು ನಡೆಯುತ್ತಿರುತ್ತವೆ. ಭಾವನೆಗಳು ಮತ್ತು ಭಾರತೀಯರು ಒಂದು ಅವಿನಾಭಾವ ಸಂಬಂಧವನ್ನು ಹೊಂದಿದೆ, ಭಾರತೀಯರ ಪರಂಪರೆ ಒಳಗಡೆ ಸಾಕಷ್ಟು ಬೆಸೆದುಕೊಂಡಿರುವುದು ಮಾತ್ರ ವಿಪರ್ಯಾಸವೇ ಸರಿ. ಭಾವನೆಗಳನ್ನು ಗಟ್ಟಿಗೊಳಿಸುವ ಪ್ರಯತ್ನ ಎಲ್ಲರದಾಗಲಿ.
-ಸುನಿಲ್ ತೆಗೂರ್,
ಕೆಯುಡಿ ಧಾರವಾಡ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.