RBI; ಬಡ್ಡಿ ದರದಲ್ಲಿ ಯಥಾಸ್ಥಿತಿ: ಜಿಡಿಪಿ ಅಂದಾಜು ಹೆಚ್ಚಳ
Team Udayavani, Jun 8, 2024, 12:41 AM IST
ಹೊಸದಿಲ್ಲಿ: ಸತತ 8ನೇ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ಬಿಐ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ರೆಪೋ ದರದಲ್ಲಿ ಬದಲಾವಣೆ ಮಾಡದೇ ಇರಲು ನಿರ್ಧರಿಸಲಾಗಿದೆ. ಹೀಗಾಗಿ ದರ ಶೇ.6.50ರಲ್ಲೇ ಮುಂದುವರಿದಿದೆ.
ಇದೇ ವೇಳೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿ ದರವನ್ನು ಆರ್ಬಿಐ ಶೇ.7.2 ಎಂದು ಅಂದಾಜಿಸಿದೆ. ಈ ಹಿಂದೆ ಅದನ್ನು ಶೇ.7 ಎಂದು ಅಂದಾಜಿಸಲಾಗಿತ್ತು. ಹಣದುಬ್ಬರದ ಅಂದಾಜನ್ನು ಶೇ.4.5 ರಲ್ಲೇ ಮುಂದುವರಿಸಲಾಗಿದೆ.
ಠೇವಣಿ ಮಿತಿ ಹೆಚ್ಚಳ: ದೊಡ್ಡ ಮಟ್ಟದ ನಿಗದಿತ ಠೇವಣಿಯ ಮಿತಿಯನ್ನು ಈಗಿರುವ 2 ಕೋಟಿ ರೂ.ಗಳಿಂದ 3 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ.
ವಂಚನೆ ತಡೆಗೆ ಪ್ಲಾಟ್ಫಾರಂ
ಆನ್ಲೈನ್ ವಂಚನೆ ತಡೆಯುವ ನಿಟ್ಟಿನಲ್ಲಿ ಹೊಸ “ಡಿಜಿಟಲ್ ಪಾವತಿ ಗುಪ್ತಚರ ವೇದಿಕೆ’ ರೂಪಿಸಲು ಆರ್ಬಿಐ ಚಿಂತನೆ ನಡೆಸಿದೆ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಇದು ಹೊಂದಿರಲಿದ್ದು, ಅದರ ಮೂಲಕ ಆನ್ಲೈನ್ ವಂಚನೆ ತಡೆಯಲಾಗುತ್ತದೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.