Desi Swara: ಕರ್ನಾಟಕ ಸಂಘ ದುಬೈ-ಜನಮನ ಸೆಳೆದ ಆಕರ್ಷಕ ಡ್ಯಾನ್ಸ್‌ ಕಪ್‌ ಸ್ಪರ್ಧೆ


Team Udayavani, Jun 8, 2024, 1:26 PM IST

Desi Swara: ಕರ್ನಾಟಕ ಸಂಘ ದುಬೈ-ಜನಮನ ಸೆಳೆದ ಆಕರ್ಷಕ ಡ್ಯಾನ್ಸ್‌ ಕಪ್‌ ಸ್ಪರ್ಧೆ

ದುಬೈ: ಕರ್ನಾಟಕ ಸಂಘ ದುಬೈಯ ವರ್ಷದ ನೃತ್ಯ ಸಂಭ್ರಮ ಕಾರ್ಯಕ್ರಮ ಯುಎಇ ಮಟ್ಟದ ದುಬೈ ಡ್ಯಾನ್ಸ್‌ ಕಪ್‌-2024 ಸ್ಪರ್ಧೆಯನ್ನು, 2024 ಮೇ 26ರಂದು ಇಂಡಿಯನ್‌ ಅಕಾಡೆಮಿ ಸ್ಕೂಲ್‌ ದುಬೈ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ದುಬೈ ಡ್ಯಾನ್ಸ್‌ ಕಪ್‌ 2024ರ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಡಾ| ಸಂಜಯ್‌ ಶಾಂತಾರಾಮ್, ಶಿಲ್ಪಾ ನಾಯರ್‌, ಯತೀಶ್‌ ಅಮೀನ್‌ ಮತ್ತು ದೇವಾಂಶಿ ನೃತ್ಯ, ಡ್ರಾಯಿಂಗ್‌ ಮತ್ತು ರಂಗೋಲಿ ತೀರ್ಪುಗಾರರಾಗಿ ಗಣೇಶ್‌ ರೈ, ಸುಸ್ಮಿತಾ ಧ್ರುವ , ಏಕವ್ಯಕ್ತಿ ನಟನೆಗೆ ವಿಶ್ವನಾಥ ಶೆಟ್ಟಿ, ಪಿಂಕಿ ರಾಣಿ, ಕಾರ್ಯಕ್ರಮದ ಟ್ರೇಡ್‌ಮಾರ್ಕ್‌ ಎಂದು ಬಿಂಬಿಸಲಾದ ವಿಶೇಷವಾದ ಲಿಮೋಸಿನ್ನಲ್ಲಿ ಪ್ರಭಾವಶಾಲಿ ತೀರ್ಪುಗಾರರನ್ನು ಸ್ಥಳಕ್ಕೆ ಕರೆತರಲಾಯಿತು.‌

ದುಬೈ ಡ್ಯಾನ್ಸ್‌ ಕಪ್‌ನ್ನು ಖ್ಯಾತ ತೀರ್ಪುಗಾರ ಡಾ| ಸಂಜಯ್‌ ಶಾಂತಾರಾಮ್‌ ಮತ್ತು ಅವರ ಶಿಷ್ಯ ಕೌಶಿಕ್‌ ಗಂಗಾಧರ್‌ ಉದ್ಘಾಟಿಸಿದರು, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್‌ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್‌, ಪ್ರಧಾನ ಕಾರ್ಯದರ್ಶಿ ಮನೋಹರ್‌ ಹೆಗ್ಡೆ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಕೋಶಾಧಿಕಾರಿ ನಾಗರಾಜ್‌ ರಾವ್‌, ಪೋಷಕ ರೊನಾಲ್ಡ್‌ ಮಾರ್ಟಿಸ್‌, ಸಲಹೆಗಾರ ಜಯಂತ್‌ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಒಟ್ಟು ಏಳು ತೀರ್ಪುಗಾರರು ಅತ್ಯುತ್ತಮ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥಾಪಕ ಸದಸ್ಯ ಸುಧಾಕರ ರಾವ್‌ ಪೇಜಾವರ ಅವರು ಕರ್ನಾಟಕ ಸಂಘ ದುಬೈಯ ಸಂಸ್ಥಾಪನ ದಿನಗಳು ಮತ್ತು 39 ವರ್ಷಗಳ ಸಂಘ ಪರಂಪರೆಯ ಸಂಕ್ಷಿಪ್ತ ಪರಿಚಯವನ್ನು ನೀಡಿದರು.

ನೃತ್ಯ ಸ್ಪರ್ಧೆಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ದಿನಪೂರ್ತಿ ನಡೆದ ಕಾರ್ಯಕ್ರಮ ಎಲ್ಲ ವಯಸ್ಸಿನ ವಿಭಾಗಗಳಲ್ಲಿ ರೋಮಾಂಚಕಾರಿ ಪ್ರದರ್ಶನಗಳಿಂದ ತುಂಬಿತು. ಪ್ರತಿಷ್ಠಿತ ದುಬೈ ಡ್ಯಾನ್ಸ್‌ ಕಪ್‌ನ ಎಲ್ಲ ವಿಭಾಗಗಳಲ್ಲಿ ಒಟ್ಟು 20 ತಂಡಗಳು ಸ್ಪರ್ಧಿಸಿದ್ದು, 240ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡರು. ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯೂ ಬಿರುಸಿನಿಂದ ನಡೆದಿದ್ದು, 100ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಸಭಾಂಗಣದಲ್ಲಿ 1,300 ಕ್ಕೂ ಹೆಚ್ಚು ಜನರ ಉತ್ಸಾಹಭರಿತ ಪ್ರೇಕ್ಷಕರ ಸಮಾವೇಶಗೊಂಡಿದ್ದರು. ಎಲ್ಲ ಆಹ್ವಾನಿತರಿಗೆ ಕರ್ನಾಟಕ ಸಂಘ ದುಬೈ ವತಿಯಿಂದ ಉಚಿತ ಊಟವನ್ನು ವ್ಯವಸ್ಥೆ ಮಾಡಲಾಗಿತ್ತು ಮತ್ತು ವಿವಿಧ ಪ್ರದರ್ಶನಗಳ ಮಾರಾಟ ಮತ್ತು ಆಹಾರ ಮಳಿಗೆಗಳನ್ನು ತೆರೆಯಲಾಗಿತ್ತು.

ಈವೆಂಟ್‌ ಅನ್ನು ಅದರ ಶೀರ್ಷಿಕೆ ಪ್ರಾಯೋಜಕರು, ಬೆಂಗಳೂರಿನಲ್ಲಿರುವ ರಿಯಲ್‌ ಎಸ್ಟೇಟ್‌ ಡೆವಲಪರ್‌ ದಿ ಫ್ಯೂಚರ್‌ ಅರ್ಥ್ ಗ್ರೂಪ್‌ ಉತ್ತಮವಾಗಿ ಬೆಂಬಲಿಸಿದರು, ಮೋನಿಕಾ ಮಂದಣ್ಣ ಇನ್ನೋವರ್‌ ಪ್ಲಾಟಿನಂ ಪ್ರಾಯೋಜಕರಾದ ಪುರವಂಕರ ಅವರನ್ನು ಪ್ರತಿನಿಧಿಸಿದ್ದು ವಿಪಿ ಪವನ್‌ ಕುಮಾರ್‌ ಮತ್ತು ಅವರ ಸಲಹೆಗಾರರಾದ ನಾಗೇಶ್‌ ಉಡುಪಿ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಎಲ್ಲ ಪ್ರಾಯೋಜಕರುಗಳನ್ನು ಹಾಗೂ ಯುಎಇಯಲ್ಲಿರುವ ಎಲ್ಲ ಕರ್ನಾಟಕ ಪರ ಸಂಘಟನೆಗಳ ಪದಾಧಿಕಾರಿಗಳನ್ನು ವೇದಿಕೆಯಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕ ಸಂಘ ದುಬೈಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಧಿಕಾ ಸತೀಶ್‌, ಹರೀಶ್‌ ಕೋಡಿ, ಸಿದ್ದಲಿಂಗೇಶ್‌ ಬಿ. ಆರ್‌., ಯುವರಾಜ್‌ ದೇವಾಡಿಗ, ಸುನೀಲ್‌ ಗವಾಸ್ಕರ್‌, ಲಾರೆನ್ಸ್‌ ನಜರೆತ್‌, ವಿನುತ ಕೆ.ಎಸ್‌., ಬೃಂದಾ ಮಂಜುನಾಥ್‌, ಶ್ವೇತಾ ಹಾಗೂ ಕಾರ್ಯಕಾರಿ ಸದಸ್ಯರ ತಂಡದವರು ಪೂರ್ವಭಾವಿ ತಯಾರಿಯೊಂದಿಗೆ ಗಲ್ಫ್ ಗೆಳೆಯರು ಯಶಸ್ವಿಯಾಗಿ ಕಾರ್ಯಕ್ರಮ ನಡೆಸುವಲ್ಲಿ ಸಹಕರಿಸಿದರು.

ಕಾವ್ಯ ಯುವರಾಜ್‌ ಮತ್ತು ನವೀನ್‌ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ಚಿತ್ರಕಲಾ ಮತ್ತು ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯನ್ನು ರೂಪ ಶಶಿಧರ್‌, ಜ್ಯೋತಿ ಮಲ್ಲಿಕಾರ್ಜುನ್‌, ಶಿಲ್ಪಾ ಸಿದ್ದಲಿಂಗೇಶ್‌, ಮಮತಾ ರಜಾಕ್‌, ಕಾವ್ಯ ಜೋಗಿ, ಬಿಂದು ಮಹದೇವ್‌, ವಿನುತಾ ಸುರೇಶ್‌, ಚೇತನಾ ಗವಾಸ್ಕರ್‌ ಮತ್ತು ಸಂಧ್ಯಾ ಇವರ ಸಮ್ಮುಖದಲ್ಲಿ ವಿತರಣೆ ಮಾಡಲಾಯಿತು. ಕಲಾ ಪ್ರದರ್ಶನದಲ್ಲಿ ಭಾಗವಹಿಸಿದ ಕಲಾವಿದರಿಗೆ ಸ್ಮರಣಿಕೆ ನೀಡಲಾಯಿತು.

ಡಾ| ಸಂಜಯ್‌ ಶಾಂತರಾಂ ಮತ್ತು ಅವರ ಶಿಷ್ಯ ಕೌಶಿಕ್‌ ಅವರು ಜೋಡಿಯ ನೃತ್ಯ ಕಾರ್ಯಕ್ರಮ ನೀಡಿದರು. ಇವರನ್ನು ಸಮ್ಮಾನಿಸಿ ಗೌರವಿಸಲಾಯಿತು. ದಿನಪೂರ್ತಿ ನಡೆದ ವಿವಿಧ ಸ್ಪರ್ಧೆಗಳ ತೀರ್ಪುಗಾರರಿಗೆ ವೇದಿಕೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ವಿವಿಧ ವಿಭಾಗಗಳ ಜಾನಪದ ನೃತ್ಯ, ಸಿನೆಮ್ಯಾಟಿಕ್‌ ನೃತ್ಯ ಸ್ಪರ್ಧೆಗಳ ವಿಜೇತರಿಗೆ ಬಹುಮಾನವಾಗಿ ಟ್ರೋಫಿಯನ್ನು ನೀಡಲಾಯಿತು. ಹರ್ಷೋದ್ಘಾರಗಳೊಂದಿಗೆ ಕರ್ನಾಟಕ ಸಂಘ ದುಬೈಯ ಡ್ಯಾನ್ಸ್‌ ಕಪ್‌ ಮತ್ತು ಚಿತ್ರಕಲಾ ಹಾಗೂ ರಂಗೋಲಿ ಸ್ಪರ್ಧೆ ಯಶಸ್ವಿಯಾಯಿತು.

ವರದಿ: ಬಿ. ಕೆ. ಗಣೇಶ್‌ ರೈ, ದುಬೈ

ಟಾಪ್ ನ್ಯೂಸ್

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 WC; This is my luck…..: Coach Rahul Dravid

T20 WC; ಇದು ನನ್ನ ಅದೃಷ್ಟ…..: ಟ್ರೋಫಿಯೊಂದಿಗೆ ಟೀಂ ಇಂಡಿಯಾ ತೊರೆದ ಕೋಚ್ ದ್ರಾವಿಡ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

5-kushtagi

Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

4-btwl

Bantwala: ಮರ ಬಿದ್ದು ಕೋಳಿ ಫಾರಂ ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.