ಪಕ್ಷದ ಸೋಲಿಗೆ ಕಾರ್ಯಕರ್ತರು ಧೃತಿಗೆಡಬೇಕಾಗಿಲ್ಲ: ಕಿಮ್ಮನೆ ರತ್ನಾಕರ್
Team Udayavani, Jun 8, 2024, 8:47 PM IST
ತೀರ್ಥಹಳ್ಳಿ: ಸಂಸತ್ ಭವನದ ಮುಂಭಾಗದಲ್ಲಿ ಅವರ ಮುಖಂಡರೇ ಸಂವಿಧಾನದ ಪುಸ್ತಕ ಸುಟ್ಟು ಹಾಕಿದ್ದರು. ಈಗ ಅದೇ ಪುಸ್ತಕಕ್ಕೆ ಮೋದಿ ನಮಸ್ಕಾರ ಮಾಡುತ್ತಿದ್ದಾರೆ. ಚುನಾವಣೆಗೆ ಮೊದಲು ಸಂವಿಧಾನವನ್ನು ಹೊಸದಾಗಿ ಬರೆಯುತ್ತೇವೆ ಎಂದು ಹೇಳಿದ್ದರು. ತಾಳಿ ಸರದ ಬಗ್ಗೆ ಮಾತನಾಡಿದ್ದರು. ಪ್ರಧಾನಮಂತ್ರಿಗಳ ಇಂತಹ ಹೇಳಿಕೆಯಿಂದ ಈ ಬಾರಿ ಬದಲಾವಣೆ ಆಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗೆಲುವು ಆಶ್ಚರ್ಯ ಏನಿಲ್ಲ. ಇದು ನಮ್ಮ ಮುಖಂಡರು ಅಥವಾ ಕಾರ್ಯಕರ್ತರ ಸೋಲಲ್ಲ. ಹಣಕ್ಕಾಗಿ ಮಾರಿಕೊಳ್ಳುವ ಒಂದಿಷ್ಟು ಮತಗಳು ಇವೆ. ಅದನ್ನೇ ಅವರು ನಂಬಿಕೊಂಡಿದ್ದಾರೆ. ಅಂತಹ ಹಿಡನ್ ಅಜೆಂಡಾ ವಿರುದ್ಧ ಕಾಂಗ್ರೆಸ್ ಹೋರಾಟ ಮಾಡುತ್ತದೆ. ಪ್ರಧಾನಮಂತ್ರಿ ಕುಳಿತಿರುವ ಕುರ್ಚಿ ಒಂದೇ. ಆದರೆ ಅದರ ನಾಲ್ಕು ಕಾಲುಗಳು ಬೇರೆಯವರ ಕೈಯಲ್ಲಿವೆ ಎಂದರು.
ಪ್ರತಿ ಕ್ಷೇತ್ರದಲ್ಲಿ 12 ರಿಂದ 13 ಕೋಟಿ ಹಣ ಕೊಟ್ಟಿದ್ದಾರೆ. ಮರಳು, ಬಂಡೆಯವರು ಶಾಲು ಹಾಕಿಕೊಂಡು ಇರುವುದು ನೋಡಿದರೆ ಜ್ಞಾನೇಂದ್ರ ಅವರೇ ಮರಳು ನೀಡಿರುವುದು ಎಂಬಂತಿದೆ. ಎಲ್ಲರನ್ನು ಹೆದರಿಸಿ ಇಟ್ಟಿದ್ದಾರೆ. ಹಣಕ್ಕಾಗಿ ಕೊಡುವ ಮತವನ್ನು ಪರಿವರ್ತನೆ ಮಾಡುವ ಕೆಲಸ ಇನ್ನು ಮುಂದೆ ಮಾಡಲಿದ್ದೇನೆ. ಬಡತನ ಕುಟುಂಬದಿಂದ ಬಂದ ಆರಗ ಮೊದಲ ಬಾರಿ ಶಾಸಕರಾದ ಮೇಲೆ 20,800 ರೂ. ಹಣ ಬರುತ್ತಿತ್ತು. ಅದರಲ್ಲೇ ಜೀವನ ಸಾಗಿಸುತ್ತಿದ್ದಾರಾ? ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಬರಲು ನಾನು ಸಿದ್ಧನಿದ್ದೇನೆ ಎಂದು ಸವಾಲೆಸೆದರು.
ಈಗಿನ ಚುನಾವಣೆಯಲ್ಲಿ ಹಣಬಲದಿಂದ ಗೆದ್ದಿದ್ದಾರೆ ಹೊರತು ವಿಷಯ, ವಿಚಾರದಿಂದ ಅಲ್ಲ. ಸುಳ್ಳು ಪ್ರಚಾರ ಮಾಡಿ ಗೆದ್ದಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದರು. ಆದರೆ ಅಲ್ಲಿನ ಚುನಾವಣೆಯಲ್ಲಿ ಏನಾಯಿತು? ಕೋಮುವಾದ ಇಟ್ಟುಕೊಂಡು ಪ್ರಚಾರ ಮಾಡುತ್ತಾರೆ. ಇಂದಲ್ಲ ಮುಂದೊಂದು ದಿನ ಕಾಂಗ್ರೆಸ್ ಆಡಳಿತಕ್ಕೆ ಬಂದೇ ಬರುತ್ತದೆ ಎಂದರು.
ಮುಡುಬಾ ರಾಘವೇಂದ್ರ, ಅಮರನಾಥ್ ಶೆಟ್ಟಿ ವಿಶ್ವನಾಥ್ ಶೆಟ್ಟಿ, ಗೀತಾ ರಮೇಶ್, ಸುಶೀಲ ಶೆಟ್ಟಿ, ಮಂಜುಳಾ ನಾಗೇಂದ್ರ, ಶಬನಂ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Hosanagara: ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಸುದ್ದಿ ಕೇಳಿ ಆತ್ಮಹತ್ಯೆಗೆ ಶರಣಾದ ಪತ್ನಿ
Thirthahalli: ಅದ್ಧೂರಿಯಾಗಿ ನಡೆದ ಎಳ್ಳಮಾವಾಸ್ಯೆ ರಥೋತ್ಸವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.