Kollywood: ʼಕಾಂಚನಾ-4ʼ ಗೆ ʼಸೀತಾ ರಾಮಂʼ ಮೃಣಾಲ್?: ವದಂತಿಗೆ ಸ್ಪಷ್ಟನೆ ನೀಡಿದ ಲಾರೆನ್ಸ್
Team Udayavani, Jun 9, 2024, 3:40 PM IST
ಚೆನ್ನೈ: ರಾಘವ ಲಾರೆನ್ಸ್ ಕಾಲಿವುಡ್‌ನ ಬೇಡಿಕೆಯ ನಟರಲ್ಲಿ ಒಬ್ಬರು. ಇತ್ತೀಚೆಗಷ್ಟೇ ಅವರ ʼ ಕಾಂಚನಾ 4ʼ ಸಿನಿಮಾ ಅನೌನ್ಸ್ ಆಗಿದೆ. ಕಾಲಿವುಡ್ ನಲ್ಲಿ ಇದುವರೆಗೆ ಬಂದ ʼಕಾಂಚನಾʼ ಸರಣಿಗಳು ಹಿಟ್ ಆಗಿವೆ.
‘ಮುನ್ನಿʼ ಸಿರೀಸ್ ನಲ್ಲಿ ಬಂದ ʼಕಾಂಚನಾʼ ಇದುವರೆಗೆ ಮೂರು ಭಾಗಗಳಾಗಿ ತೆರೆಕಂಡಿದೆ. ಹಾರಾರ್ ಕಾಮಿಡಿ ಕಥಾಹಂದರದ ʼಕಾಂಚನಾʼ ಕ್ಕೆ ಪ್ರತ್ಯೇಕ ನೋಡುಗರ ವರ್ಗವೇ ಇದೆ. ರಾಘವ ಲಾರೆನ್ಸ್ ʼಕಾಂಚನಾʼದಲ್ಲಿ ಪ್ರಧಾನ ಪಾತ್ರದ ಜೊತೆ ನಿರ್ದೇಶಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಇದೀಗ ಲಾರೆನ್ಸ್ ʼಕಾಂಚನಾ-4ʼ ಅನೌನ್ಸ್ ಮಾಡಿದ್ದಾರೆ. ಅನೌನ್ಸ್ ಬಳಿಕ ಸಿನಿಮಾದಲ್ಲಿ ಯಾರು ನಾಯಕಿಯಾಗಿ ಆಗಲಿದ್ದಾರೆ ಎನ್ನುವ ಬಗ್ಗೆ ಕಾಲಿವುಡ್ ರೀತಿ ನಾನಾ ರೀತಿಯ ಗಾಸಿಪ್ ಹರಿದಾಡಿದೆ.
ಈಗಾಗಲೇ ತನ್ನ ನಟನೆಯಿಂದ ಸೌತ್ ಚಿತ್ರರಂಗದಲ್ಲಿ ಗಮನ ಸೆಳೆದಿರುವ ಮೃಣಾಲ್ ಠಾಕೂರ್ ಅವರ ಹೆಸರು ʼಕಾಂಚನಾ-4ʼ ಗಾಗಿ ಕೇಳಿ ಬರುತ್ತಿದೆ. ಮೃಣಾಲ್ ತೆಲುಗಿನ ʼಸೀತಾ ರಾಮಂʼ ಮತ್ತು ‘ಹಾಯ್ ನಾನ್ನ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ʼಕಾಂಚನಾ-4ʼ ಮೂಲಕ ಕಾಲಿವುಡ್ ಗೆ ಕಾಲಿಡಲಿದ್ದಾರೆ ಎನ್ನುವ ಮಾತುಗಳು ಹರಿದಾಡಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಇದುವರೆಗೆ ಮಾಹಿತಿ ನೀಡಿಲ್ಲ.
ನಿರ್ದೇಶಕ, ನಟ ರಾಘವ ಲಾರೆನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಗಾಸಿಪ್ ಗೆ ಸ್ಪಷ್ಟನೆ ನೀಡಿದ್ದಾರೆ.
ʼʼಕಾಂಚನಾ 4 ಕಾಸ್ಟಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಎಲ್ಲಾ ಮಾಹಿತಿಗಳು ಕೇವಲ ವದಂತಿಗಳಷ್ಟೇ. ಏನೇಯಿದ್ದರೂ ಶೀಘ್ರದಲ್ಲಿ ರಾಘವೇಂದ್ರ ಪ್ರೊಡಕ್ಷನ್ ಮೂಲಕ ಅಧಿಕೃತ ಘೋಷಣೆಯಾಗಲಿದೆ” ಎಂದು ಲಾರೆನ್ಸ್ ಬರೆದುಕೊಂಡಿದ್ದಾರೆ.
Hi friends and fans,
All the information regarding Kanchana 4 and casting that are circulating around social media are just rumors. Official announcement will be made through Ragavendra Production. Coming soon! pic.twitter.com/T46gcYyjAN— Raghava Lawrence (@offl_Lawrence) June 9, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
ಪೊಂಗಲ್ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್ ಆಗಲಿರುವ ಚಿತ್ರಗಳ ಪಟ್ಟಿ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನು ಮಂಜೂರು
Marco: ಕೋಟಿ ಕೋಟಿ ಗಳಿಕೆ ಕಾಣುತ್ತಿರುವ ʼಮಾರ್ಕೊʼಗೆ ಪೈರಸಿ ಕಾಟ; ಹೆಚ್ ಡಿ ಪ್ರಿಂಟ್ ಲೀಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.