![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jun 10, 2024, 1:28 PM IST
ಚಾಮರಾಜನಗರ: ಮಹದೇಶ್ವರ ಬೆಟ್ಟದ ತಾಳಬೆಟ್ಟ ಸಮೀಪ ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಪ್ರಕರಣದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.
ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಅಪ್ರಾಪ್ತೆಯ ತಾಯಿ ಲೀಲಾವತಿ (41) ಮೃತಪಟ್ಟಿದ್ದಾರೆ. ಶನಿವಾರ ಲೀಲಾವತಿ ತಂದೆ ಮಹದೇವನಾಯಕ (65) ಅವರು ಸಾವನ್ನಪ್ಪಿದ್ದರು.
ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೋಕಿನ ಚಂದಗಾಲು ಗ್ರಾಮದ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿತ್ತು. ಮಹದೇವನಾಯಕರ ಅಪ್ರಾಪ್ತ ವಯಸ್ಸಿನ ಮೊಮ್ಮಗಳನ್ನು ಪ್ರೀತಿಸುತ್ತಿದ್ದ ಯುವಕ ಬ್ಲಾಕ್ ಮೇಲ್ ನಡೆಸಿದ್ದ. ಮೊಮ್ಮಗಳ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಮಾನಮರ್ಯಾದೆ ಅಂಜಿ ಕುಟುಂಬ ಮಹದೇಶ್ವರ ಬೆಟ್ಟದ ತಾಳಬೆಟ್ಟ ಸಮೀಪ ಆತ್ಮಹತ್ಯೆಗೆ ಯತ್ನಿಸಿತ್ತು.
ಅಸ್ವಸ್ಥರಾಗಿರುವ ಮಹದೇವನಾಯಕ ಪತ್ನಿ ಗೌರಮ್ಮ ಅವರಿಗೆ ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಹಾಗೂ ಮೊಮ್ಮಗಳಿಗೆ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
You seem to have an Ad Blocker on.
To continue reading, please turn it off or whitelist Udayavani.