Chitradurga: ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ


Team Udayavani, Jun 12, 2024, 2:08 PM IST

4-chitradurga

ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಖಂಡಿಸಿ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ಪ್ರತಿಭಟನಾ‌ ಮೆರವಣಿಗೆಯಲ್ಲಿ ಆಗಮಿಸಿದ ನೂರಾರು ಜನ ನಟ ದರ್ಶನ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೊಲೆಗಡುಕ ದರ್ಶನ್, ಖಳನಾಯಕ ದರ್ಶನ್ ಗೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಮೌನಾಚರಣೆ ಆಚರಿಸಿದರು.

ಬಜರಂಗದಳ, ರೈತ ಸಂಘಟನೆಗಳು, ವೀರಶೈವ ಸಮಾಜ, ಜಂಗಮ ಸಮಾಜ, ಕರವೇ, ಕರುನಾಡ ರಕ್ಷಣಾ ವೇದಿಕೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕ್ಷುಲ್ಲಕ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಅಜ್ಞಾತ ಪ್ರದೇಶದಲ್ಲಿ ಒಂದು ದಿನವಿಡೀ ಚಿತ್ರಹಿಂಸೆ ಕೊಟ್ಟು ಪ್ರಾಣ ತೆಗೆದಿರುವುದು ಖಂಡನೀಯ ಎಂದರು.

ಸ್ಟಾರ್ ಪಟ್ಟಕ್ಕೆ ಏರಿದವರು ಕಾನೂನು ಕೈಗೆ ತೆಗೆದುಕೊಳ್ಳಬಹುದು, ದುಡ್ಡಿದೆ, ಏನು ಬೇಕಾದರು ಮಾಡಬಹುದು ಎನ್ನುವ ದುರಾಹಂಕಾರ ಮೆಟ್ಟಲು ಈ ಹೋರಾಟ ಎಂದು ಹೇಳಿದರು.

ಪೊಲೀಸರು, ಗೃಹ ಮಂತ್ರಿಗಳು ಅವರನ್ನು ಉಳಿಸುವ ಪ್ರಯತ್ನ ‌ಮಾಡಿದರೆ ನಮ್ಮ ಹೋರಾಟ ತೀವ್ರವಾಗುತ್ತದೆ. ಸರ್ಕಾರ ಸಾವಿಗೆ ನ್ಯಾಯ ಕೊಡಿಸಬೇಕು. ದರ್ಶನ್ ಅಭಿಮಾನಿ ಸಂಘವನ್ನ ಇವತ್ತೇ ವಿಸರ್ಜನೆ ಮಾಡಿ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದರ್ಶನ್ ಸಿನಿಮಾಗಳಲ್ಲಿ ಮಾತ್ರ ಆದರ್ಶ ವ್ಯಕ್ತಿ.‌ ಆದರೆ,‌ ನಿಜ ಜೀವನದಲ್ಲಿ‌ ಭಿನ್ನವಾದ ವ್ಯಕ್ತಿ. ತಂದೆ ತಾಯಿಗಳು ಮುಪ್ಪಿನ ಕಾಲದಲ್ಲಿರುವವರ ಮಗನ ಕೊಲೆ ಮಾಡಿಸಿರುವುದು ನಿಜಕ್ಕೂ ಬೇಸರ ಎಂದರು.

ರಾಜ್ಯದಲ್ಲಿ ಇಂತಹ ಅನೇಕ ಘಟನೆಗಳು ನಡೆದಿದ್ದು,‌ನಿರ್ವಹಣೆ ಮಾಡುವಲ್ಲಿ ಸರಕಾರ ವಿಫಲವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರಂಭದಲ್ಲಿ ಎ1 ಆಗಿದ್ದ ವ್ಯಕ್ತಿ, ಎ2 ಆಗಿದ್ದಾರೆ. ಗೃಹಮಂತ್ರಿ ದರ್ಶನ್ ಪಾತ್ರದ ಬಗ್ಗೆ ಇನ್ನೂ ತಿಳಿದುಕೊಳ್ಳಬೇಕು ಎಂದು ಅಸಮಧಾನ ವ್ಯಕ್ತಪಡಿಸಿದರು.

ನಟ ದರ್ಶನ್ ಹಾಗೂ ಈ ಕೊಲೆ ಪ್ರಕರಣದಲ್ಲಿ ಭಾಗಿಯಾದವರಿಗೆ ಭಾರತದ ಕಾನೂನಿನ‌ ಅನ್ವಯ ಕಠಿಣ ಶಿಕ್ಷೆ ಆಗಲೇಬೇಕು. ದರ್ಶನ್ ಮೇಲ್ನೋಟಕ್ಕೆ ನೇರವಾಗಿ ಸಿಕ್ಕಿ ಬಿದ್ದಿದ್ದಾರೆ. ಅವರಿಗೆ ಜೀವಾವಧಿ ಶಿಕ್ಷೆ ಆಗಬೇಕು ಎಂದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ಚಿತ್ರದುರ್ಗದ ಎಲ್ಲ ಸಮುದಾಯಗಳ ಜನತೆ ಸೇರಿ ಪ್ರತಿಭಟನೆ ನಡೆಸುತ್ತಿರುವುದು ಮಾನವೀಯತೆಗೆ ಹಿಡಿದ ಕನ್ನಡಿ. ದರ್ಶನ್ ಅಭಿಮಾನಿಗಳಿಗೆ ಇಂದು ಅವರ ವಿಕೃತಿ ಗೊತ್ತಾಗಿದೆ. ಅಂದಾಭಿಮಾನ ಬಿಟ್ಟು ವಾಸ್ತವ ಅರ್ಥ ಮಾಡಿಕೊಂಡು ಅವರ ವಿರುದ್ಧ ಪ್ರತಿಭಟಿಸಿ‌ ಕೊಲೆಯಾದವರ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಹೇಳಿದರು.

ದರ್ಶನ್ ಕಾಂಗ್ರೆಸ್ ಪಕ್ಷದ ಪ್ರಚಾರಕ, ಅವರ ಬಳಿ ಹಣ ಇದೆ, ಜನ ಇದ್ದಾರೆ. ಈ ಪ್ರಕರಣದಲ್ಲಿ ತಪ್ಪಿಸಿಕೊಳ್ಳಲು ಬಿಡಬಾರದು. ಪೊಲೀಸರು ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ತಪ್ಪಿತಸ್ಥ ಸೆಲೆಬ್ರೆಟಿ ಆಗಿದ್ದರೂ ತಪ್ಪಿಸಿಕೊಳ್ಳಲು ಬಿಡಬಾರದು ಎಂದರು.

ಕರವೇ ಜಿಲ್ಲಾಧ್ಯಕ್ಷ ರಮೇಶ್, ನ್ಯಾಯವಾದಿಗಳಾದ ಕೆ.ಎನ್.ವಿಶ್ವನಾಥಯ್ಯ ಉಮೇಶ್, ಗುರು, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಕೆ.ಎಂ.ವೀರೇಶ್, ಪಟೇಲ್ ಶಿವಕುಮಾರ್, ಶ್ರೀ ಬಸವನಾಗೀದೇವ ಸ್ವಾಮೀಜಿ, ಬಜರಂಗದಳ ರಾಜ್ಯ ಸಂಯೋಜಕ ಪ್ರಭಂಜನ್, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Swamijis should talk to High command about CM change: Chaluvarayaswamy

CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ‌

10

ಸ್ತನ ಕ್ಯಾನ್ಸರ್‌ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

Hubballi Dharwad Municipal corporation: ಮೇಯರ್ ಆಗಿ ಬಿಜೆಪಿಯ ರಾಮಪ್ಪ ಬಡಿಗೇರ ಆಯ್ಕೆ

Hubballi Dharwad Municipal corporation: ಮೇಯರ್ ಆಗಿ ಬಿಜೆಪಿಯ ರಾಮಪ್ಪ ಬಡಿಗೇರ ಆಯ್ಕೆ

Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ

Ayodhya: ರಾಮಪಥದ ಕಳಪೆ ಕಾಮಗಾರಿ-6 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

Mandya; ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಸಾರಿಗೆ ಬಸ್; ಹಲವರಿಗೆ ಗಾಯ

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿ ಪೋಷಕರು, ಕಣ್ಣೀರಿಟ್ಟ ದಂಪತಿ

CM ಸಿದ್ದರಾಮಯ್ಯರನ್ನ ಭೇಟಿಯಾದ ರೇಣುಕಾಸ್ವಾಮಿ ಪೋಷಕರು, ಕಣ್ಣೀರಿಟ್ಟ ದಂಪತಿ

Hajj; Pilgrim from Chitradurga passed away due to sunstroke in Mecca

Hajj Pilgrimage; ಮೆಕ್ಕಾದಲ್ಲಿ ಬಿಸಿಲಿನ ಝಳಕ್ಕೆ ಚಿತ್ರದುರ್ಗ ಮೂಲದ ಯಾತ್ರಾರ್ಥಿ ಸಾವು

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನವೇಕೆ?

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಉದಾಸೀನವೇಕೆ?

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

Renukaswamy ಪತ್ನಿಗೆ ನೌಕರಿ ಸಂಬಂಧ ಸಿಎಂ ಜತೆ ಚರ್ಚೆ: ಪರಮೇಶ್ವರ್‌

7-chitradurga

ಒತ್ತಡಕ್ಕೆ ಮಣಿಯದೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಾಗಲಿ; ಬಿ.ವೈ.ವಿಜಯೇಂದ್ರ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

No problem anyone comes in front of Martin…: Producer Uday Mehta

Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್‌ ಮೆಹ್ತಾ

Swamijis should talk to High command about CM change: Chaluvarayaswamy

CM ಬದಲಾವಣೆ ಬಗ್ಗೆ ಸ್ವಾಮೀಜಿಗಳು ಬೇಕಾದರೆ ವರಿಷ್ಠರ ಜತೆ ಮಾತನಾಡಲಿ: ಚಲುವರಾಯಸ್ವಾಮಿ‌

10

ಸ್ತನ ಕ್ಯಾನ್ಸರ್‌ ಕಾಡಿದ ಚಿತ್ರರಂಗದ ಸುಂದರಿಯರಿವರು.. ಕಾಯಿಲೆಯನ್ನೇ ಗೆದ್ದ ದಿಟ್ಟೆಯರು..

12-thekkatte

ಯಡಾಡಿ ಮತ್ಯಾಡಿ(ಗುಡ್ಡೆಅಂಗಡಿ)ಸರಕಾರಿ ಹಿ.ಪ್ರಾ.ಶಾಲೆ:ನೂತನ ಶಾಲಾ ವಾಹನ ಹಸ್ತಾಂತರ ಕಾರ್ಯಕ್ರಮ

BJP Protest; ರೈತರಿಗೆ ಬರೆ ಹಾಕುವ ಸರಕಾರದ ನೀತಿ ನಿರ್ಧಾರ ಬದಲಿಸಲಿ: ಎನ್.ರವಿಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.