ಕಾರ್ಕಳ: ಕುದುರೆಮುಖ ಘಾಟಿಯಲ್ಲಿ ಚಾಲನೆ-ಇರಲಿ ಜಾಗ್ರತೆ


Team Udayavani, Jun 12, 2024, 2:15 PM IST

ಕಾರ್ಕಳ: ಕುದುರೆಮುಖ ಘಾಟಿಯಲ್ಲಿ ಚಾಲನೆ-ಇರಲಿ ಜಾಗ್ರತೆ

ಕಾರ್ಕಳ: ಮಳೆಗಾಲ ಕುದುರೆಮುಖ- ಮಾಳ ರಾಷ್ಟ್ರೀಯ ಹೆದ್ದಾರಿ ಘಾಟಿಯಲ್ಲಿ ಸಂಚರಿಸುವುದೆಂದರೆ ಹೆದರಿಕೆ. ಇಲ್ಲಿ ತೆರಳುವಾಗ ಹೆಜ್ಜೆ ಹೆಜ್ಜೆಗೂ ಎಚ್ಚರ ವಹಿಸಬೇಕು. ತುಸು ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಯೂ ಈ ಭಾಗದಲ್ಲಿ ಹೆಚ್ಚಿರುತ್ತದೆ. ಹೆದ್ದಾರಿ ತಿರುವು ಮುರುವಿನಿಂದ ಕೂಡಿದೆ. ಘಾಟಿಯಲ್ಲಿ ವಾಹನಗಳು ಹತ್ತಿಳಿಯುವಾಗ ಅಪಘಾತಗಳು
ಸಂಭವಿಸುತ್ತವೆ. ಕಳೆದ ಮಳೆಗಾಲದಲ್ಲಿ ಅನೇಕ ಅವಘಡಗಳು ಸಂಭವಿಸಿತ್ತು. ಜೀವಹಾನಿಯೂ ಆಗಿತ್ತು.

ಕಾರ್ಕಳ ತಾ|ನ ಗಡಿಭಾಗದಲ್ಲಿರುವ ಎಸ್‌ಕೆ ಬಾರ್ಡರ್‌ನಿಂದ ಮೇಲೆ ಹೋಗುವ ಈ ರಸ್ತೆ ಬಲು ಅಪಾಯಕಾರಿ, ಕಡಿದಾದ ರಸ್ತೆಯುದ್ದಕ್ಕೂ ಹೇರ್‌ ಪಿನ್‌ ರೀತಿಯ ತಿರುವುಗಳಿವೆ. ಮಣ್ಣು ಸವಕಳಿಯಿಂದ ಮಳೆಗೆ ಗುಡ್ಡ ಕುಸಿತ, ರಸ್ತೆ ಮೇಲೆ ಮರ, ಕೊಂಬೆ ಉರುಳಿ ಬೀಳುವುದು ನಿರಂತರವಾಗಿ ನಡೆಯುತ್ತಿರುತ್ತದೆ. ಇಳಿದು ಬರುವ ವಾಹನ ಸವಾರರು ಬ್ರೇಕ್‌ ಅನ್ನು ಹತೋಟಿಯಲ್ಲಿ ಇಟ್ಟುಕೊಂಡೇ ಸಾಗಬೇಕು. ವೇಗದಲ್ಲೂ ನಿಯಂತ್ರಣ ಅಗತ್ಯ. ಬ್ರೇಕ್‌ ವೈಫ‌ಲ್ಯ ಆದಲ್ಲಿ ಏನೂ ಮಾಡಲಾಗದ ಸ್ಥಿತಿಯಿದೆ.

ವಾಹನ ದಟ್ಟಣೆ ಹೆಚ್ಚಿರುವ ಹೆದ್ದಾರಿ
ಘಾಟಿ ರಸ್ತೆಯಲ್ಲಿ ಅತೀ ಹೆಚ್ಚು ಪ್ರವಾಸಿಗರು ಓಡಾಡುತ್ತಿರುತ್ತಾರೆ. ಧರ್ಮಸ್ಥಳ, ಸುಬ್ರಹ್ಮಣ್ಯ, ಹೊರನಾಡು, ಕೊಲ್ಲೂರಿಗೆ ತೆರಳುವ ಯಾತ್ರಾರ್ಥಿಗಳು ಮಾಳ ಮುಳ್ಳೂರು ಘಾಟಿ ರಸ್ತೆಯಾಗಿ ಬೆಳ್ತಂಗಡಿಗೆ ತೆರಳುತ್ತಾರೆ. ಕಳಸ, ಕುದುರೆ ಮುಖ, ಶೃಂಗೇರಿ ಮತ್ತು ಕೊಪ್ಪ ಕಡೆಯಿಂದ ಅಧಿಕ ಸಂಖ್ಯೆಯ ಪ್ರವಾಸಿಗರು ಕರಾವಳಿ ಭಾಗಕ್ಕೆ ಘಟ್ಟದ ಮೇಲಿಂದ ಬರುತ್ತಾರೆ.

ಹೆದ್ದಾರಿಯುದ್ದಕ್ಕೂ ಸಿಗುವ ಪ್ರಾಕೃತಿಕ ರಮಣೀಯತೆ ವೀಕ್ಷಿಸಲೆಂದು ಬರುವವರು ಅಧಿಕ ಪ್ರಮಾಣದಲ್ಲಿ ಇರುತ್ತಾರೆ. ದಟ್ಟ ಕಾಡಿನಲ್ಲಿ ಹಾದು ಹೋಗಿರುವ ಹೆದ್ದಾರಿ ಯುದ್ದಕ್ಕೂ ನೆಟ್‌ವರ್ಕ್‌ ಸಿಗುವುದಿಲ್ಲ. ಅವಘಡ ನಡೆದಾಗ ತತ್‌ ಕ್ಷಣಕ್ಕೆ ಸಂಪರ್ಕ ಸಿಗುವುದಿಲ್ಲ. ತುರ್ತು ಚಿಕಿತ್ಸೆಗೆ ಮಾರ್ಗ ಮಧ್ಯೆ ಆಸ್ಪತ್ರೆಗಳಿಲ್ಲ. ಅಪಘಾತ ನಡೆದು ಗಾಯಗಳಾದಲ್ಲಿ ಅವರನ್ನು ಕಾರ್ಕಳ, ಮಣಿಪಾಲ, ಉಡುಪಿ, ಮಂಗಳೂರಿಗೆ ಕರೆದೊಯ್ಯಬೇಕು. ಶೃಂಗೇರಿ ತಾಲೂಕಿನಲ್ಲೂ ಸೂಕ್ತ ಆಸ್ಪತ್ತೆ ಇಲ್ಲ. ಅಪಘಾತ ಸಂದರ್ಭ ಇತರ ವಾಹನದವರು ಗೇಟ್‌ ತಪಾಸಣೆ ಸಿಬಂದಿಗೆ ಮಾಹಿತಿ ನೀಡಿ ಅವರು ಸಂಬಂಧಿಕರನ್ನು ಸಂಪರ್ಕಿಸಿ ತಿಳಿಸಬೇಕಾದ ಸ್ಥಿತಿಯಿದೆ. ರಾತ್ರಿ ವೇಳೆ ಅಪಘಾತವಾದಲ್ಲಿ ನರಳುತ್ತಲೇ ನಡು ರಸ್ತೆಯಲ್ಲಿ ಇರುಳು ಕಳೆಯಬೇಕು.

ವಿಶೇಷ ಗಸ್ತು ವಾಹನ ನಿಯೋಜನೆ ಅಗತ್ಯ
ತನಿಕೋಡು ಅರಣ್ಯ ತಪಾಸಣ ಕೇಂದ್ರದಿಂದ ಮಾಳ ಅರಣ್ಯ ತಪಾಸಣ ಕೇಂದ್ರದವರೆಗೆ ಒಟ್ಟು 39 ಕಿ.ಮೀ. ವ್ಯಾಪ್ತಿಯಲ್ಲಿ ಸಂವಹನಕ್ಕೆ ಸಂಬಂಧಿಸಿ ವಯರ್‌ ಲೆಸ್‌ ಮೊಬೈಲ್‌ ಸಂಪರ್ಕ ವ್ಯವಸ್ಥೆಗಳು ಸಮರ್ಪಕವಿಲ್ಲ. ಮಾಳ ಅರಣ್ಯ ಇಲಾಖೆಯ ತಪಾಸಣ ಗೇಟ್‌, ಎಸ್‌ಕೆ ಬಾರ್ಡರ್‌ ದಾಟಿ ಮುಂದಕ್ಕೆ ಕಳಸ, ಶೃಂಗೇರಿ ಹಾಗೂ ಇನ್ನಿತರ ಸ್ಥಳಗಳಿಗೆ ಸಾಗುವ ದಾರಿ ಮಧ್ಯೆ ಮಾಳ ತಪಾಸಣೆ ಗೇಟ್‌ನಿಂದ ಕುದುರೆಮುಖ ಹಾಗೂ ಶೃಂಗೇರಿಗೆ ಕವಲೊಡೆಯುವ ಜಂಕ್ಷನ್‌ ತನಕದ ನಡುವಿನ ಪ್ರದೇಶದಲ್ಲಿ ಸಂಪರ್ಕ ಸಮಸ್ಯೆಯಿರುವುದು. ವಿಶೇಷವಾಗಿ ಮಳೆಗಾಲದಲ್ಲಿ ತುರ್ತು ವ್ಯವಸ್ಥೆಗಾಗಿ ರಾತ್ರಿ, ಹಗಲು ಗಸ್ತಿನ ವಾಹನದ ಆವಶ್ಯಕತೆ ಈ ಘಾಟಿ ರಸ್ತೆಗಿದೆ.

ವಿಸ್ತರಣೆಗೆ ಕೂಡಿ ಬರದ ಕಾಲ
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕೂಗು ದಶಕಗಳ ಬೇಡಿಕೆ ಈಡೇರಿಲ್ಲ. ಹೆದ್ದಾರಿಯ ಎರಡೂ ಬದಿ ಕುದುರೆಮುಖ ಉದ್ಯಾನ ವನ ವ್ಯಾಪ್ತಿಗೆ ಬರುತ್ತದೆ. ವಿಸ್ತರಣೆಗೆ ಕಾನೂನಿನ ತೊಡಕಿದೆ. ಹೆಚ್ಚುತ್ತಿರುವ ವಾಹನ ದಟ್ಟನೆಯಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಮಳೆಗಾಲದ ಪೂರ್ವದಲ್ಲಿ ರಸ್ತೆ ಬದಿ ಟ್ರೀ ಕಟ್ಟಿಂಗ್‌ ನಡೆಸಲಾಗಿದ್ದರೂ ಹೆದ್ದಾರಿಯುದ್ದಕ್ಕೂ ಎಚ್ಚರಿಕೆಯ ಸೂಚನಾ ಫ‌ಲಕ. ಮುನ್ನೆಚ್ಚರಿಕೆಗೆ ಸಂಬಂಧಿಸಿ ವಿಶೇಷ ಕ್ರಮಗಳು ಕಾಣಿಸುತಿಲ್ಲ. ಇದ್ದ ಕೆಲವೆಡೆ ನಾಮಫ‌ಲಕದ ಬಣ್ಣ ಮಾಸಿದೆ.

ಹೈವೇ ಪೆಟ್ರೋಲ್‌ ವಾಹನ ನಿಯೋಜನೆ
ಘಾಟಿಯಲ್ಲಿ ಅಪಘಾತದಂತಹ ಸಂದರ್ಭ ತುರ್ತು ಸೇವೆಗೆ ಅನುಕೂಲವಾಗಲೆಂದು ಗೇಟ್‌ ಬಳಿ ಹೈವೇ ಪೆಟ್ರೋಲ್‌ ಅನ್ನು ಹೆಚ್ಚು ಸಮಯ ಇರುವಂತೆ ನಿಯೋಜಿಸಲಾಗುವುದು. ಕಳೆದ ವರ್ಷ ಈ ವ್ಯವಸ್ಥೆ ಇರಲಿಲ್ಲ. ಈ ಬಾರಿ ಇದನ್ನು ಮಾಡಲಾಗುತ್ತಿದೆ. ಗೇಟ್‌ ಬಳಿ ಇರುವಂತೆ ಸೂಚಿಸಲಾಗುವುದು. ಘಾಟಿ ಕಡೆ ಹೆಚ್ಚು ಗಮನ ಹರಿಸಲು ಕ್ರಮವಹಿಸುತ್ತೇವೆ.
*ಅರವಿಂದ ಕಲಗುಜ್ಜಿ , ಡಿವೈಎಸ್ಪಿ ಕಾರ್ಕಳ ವಿಭಾಗ

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

655

Fraud: ಹಳೆ ಬ್ಯಾಟರಿ ನೀಡುವುದಾಗಿ ವಂಚನೆ

02554

Padubidri: 10 ವರ್ಷಗಳ ಹಿಂದೆ ಕಾಣೆಯಾಗಿದ್ದ ಮಹಿಳೆಯ ಪತ್ತೆ

002

Karkala: ಎದೆ ನೋವಿನಿಂದ ಕೃಷಿಕ ಸಾವು

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

Gurudath Kamath: ಖ್ಯಾತ ಫೋಟೋಗ್ರಾಫರ್ ಗುರುದತ್ ಕಾಮತ್ ನಿಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.