![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 12, 2024, 11:24 PM IST
ನಾರ್ತ್ ಸೌಂಡ್: ನಮೀಬಿಯಾವನ್ನು ಪವರ್ ಪ್ಲೇ ಒಳಗಾಗಿ ಮಣಿಸಿದ ಆಸ್ಟ್ರೇಲಿಯ “ಬಿ’ ವಿಭಾಗದಿಂದ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್-8 ಹಂತಕ್ಕೆ ನೆಗೆದಿದೆ.
ಇಲ್ಲಿನ “ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ’ನಲ್ಲಿ ನಡೆದ ಏಕಪಕ್ಷೀಯ ಪಂದ್ಯದಲ್ಲಿ ಆಸ್ಟ್ರೇಲಿಯ 9 ವಿಕೆಟ್‌ಗಳ ಜಯ ಸಾಧಿಸಿತು. ನಮೀಬಿಯಾ 17 ಓವರ್‌ಗಳಲ್ಲಿ 72 ರನ್ನಿಗೆ ಕುಸಿದರೆ, ಮಿಚೆಲ್ ಮಾರ್ಷ್ ಬಳಗ ಕೇವಲ 5.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 74 ರನ್ ಬಾರಿಸಿತು.
ಇದರೊಂದಿಗೆ ಆಸ್ಟ್ರೇಲಿಯ ಎಲ್ಲ 3 ಪಂದ್ಯಗಳನ್ನು ಜಯಿಸಿತು. ನಮೀಬಿಯಾ ಕೂಟದಿಂದ ಹೊರಬಿತ್ತು. “ಬಿ’ ವಿಭಾಗದಿಂದ ಈಗಾಗಲೇ ಒಮಾನ್ ಹೊರಬಿದ್ದಿದೆ. ಮುಂದಿನ ಸುತ್ತಿಗೇರುವ ಮತ್ತೂಂದು ತಂಡಕ್ಕಾಗಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ಸ್ಪರ್ಧೆ ಇದೆ. ಇಲ್ಲಿ 3 ಪಂದ್ಯ ಗಳಿಂದ 5 ಅಂಕ ಗಳಿಸಿರುವ ಸ್ಕಾಟ್ಲೆಂಡ್‌ಗೆ ಅವಕಾಶ ಹೆಚ್ಚು. ಇಂಗ್ಲೆಂಡ್ 2 ಪಂದ್ಯಗಳಿಂದ ಕೇವಲ ಒಂದಂಕ ಹೊಂದಿದೆ.
ಆಸ್ಟ್ರೇಲಿಯವಿನ್ನು ಶನಿವಾರ ಸ್ಕಾಟ್ಲೆಂಡ್ ವಿರುದ್ಧ ಗ್ರಾಸ್ ಐಲೆಟ್‌ನಲ್ಲಿ ತನ್ನ ಕೊನೆಯ ಲೀಗ್ ಪಂದ್ಯ ಆಡಲಿದೆ.
ಝಂಪ 100 ವಿಕೆಟ್ ಸಾಧನೆ
ಲೆಗ್‌ಸ್ಪಿನ್ನರ್ ಆ್ಯಡಂ ಝಂಪ ನಮೀಬಿಯಾಕ್ಕೆ ಜಬರ್ದಸ್ತ್ ಆಘಾತವಿಕ್ಕಿದರು. ಇವರ ಸಾಧನೆ 12 ರನ್ನಿಗೆ 4 ವಿಕೆಟ್. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್ ಉಡಾಯಿಸಿದ ಆಸ್ಟ್ರೇಲಿಯದ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಸಂಕ್ಷಿಪ್ತ ಸ್ಕೋರ್: ನಮೀಬಿಯಾ-17 ಓವರ್‌ಗಳಲ್ಲಿ 72 (ಎರಾಸ್ಮಸ್ 36, ವಾನ್ ಲಿಂಜೆನ್ 10, ಝಂಪ 12ಕ್ಕೆ 4, ಸ್ಟೋಯಿನಿಸ್ 9ಕ್ಕೆ 2, ಹೇಝಲ್‌ವುಡ್ 18ಕ್ಕೆ 2). ಆಸ್ಟ್ರೇಲಿಯ-5.4 ಓವರ್‌ಗಳಲ್ಲಿ ಒಂದು ವಿಕೆಟಿಗೆ 74 (ವಾರ್ನರ್ 20, ಹೆಡ್ ಔಟಾಗದೆ 34, ಮಾರ್ಷ್ ಔಟಾಗದೆ 18, ವೀಸ್ 15ಕ್ಕೆ 1). ಪಂದ್ಯಶ್ರೇಷ್ಠ: ಆ್ಯಡಂ ಝಂಪ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.