![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-415x219.jpg)
Padubidri: ಬೈಕ್ನಿಂದ ಬಿದ್ದು ಗಾಯಗೊಂಡ ಮಹಿಳೆ ಸಾವು
Team Udayavani, Jun 13, 2024, 12:03 AM IST
![Padubidri: ಬೈಕ್ನಿಂದ ಬಿದ್ದು ಗಾಯಗೊಂಡ ಮಹಿಳೆ ಸಾವು](https://www.udayavani.com/wp-content/uploads/2024/06/Padubidri-Police-1-620x350.jpg)
ಪಡುಬಿದ್ರಿ: ತನ್ನ ಪತಿ ಗಣೇಶ್ ಶೆಟ್ಟಿ ಚಲಾಯಿಸುತ್ತಿದ್ದ ಬೈಕ್ನಲ್ಲಿ ಸಹ ಸವಾರೆಯಾಗಿದ್ದ ಹೆಜಮಾಡಿ ಗ್ರಾಮದ ಅವರಾಲು ನಡಿಮನೆಯ ನಿವಾಸಿ ರಮಾ ಶೆಟ್ಟಿ(49) ಬುಧವಾರ ಮಧ್ಯಾಹ್ನ ಬೈಕ್ನಿಂದ ಬಿದ್ದು ಮುಖಕ್ಕೆ ತೀವ್ರತರ ಗಾಯಗೊಂಡವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯುತ್ತಿರುವಾಗಲೇ ಮೃತಪಟ್ಟ ಘಟನೆ ಪಡುಬಿದ್ರಿ ಪೊಲೀಸ್ ಠಾಣೆಯಿಂದ ವರದಿಯಾಗಿದೆ.
ಮನೆಯಿಂದ ಹೊರಟು ಅಡ್ವೆಗೆ ತೆರಳಲು ನಂದಿಕೂರು ಮಾರ್ಗವಾಗಿ ಪಲಿಮಾರು ಜಂಕ್ಷನ್ಗೆ ಬಂದಾಗ ಗಣೇಶ್ ಶೆಟ್ಟಿ ಅವರು ಬೈಕ್ನ ಬ್ರೇಕ್ ಹಾಕಿದಾಗ ಈ ಘಟನೆಯು ಸಂಭವಿಸಿದೆ. ಗಣೇಶ್ ಶೆಟ್ಟಿ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-415x219.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.