ಇಂದಿನಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಆರಂಭ :2.23 ಲಕ್ಷ ವಿದ್ಯಾರ್ಥಿಗಳಿಂದ ನೋಂದಣಿ
Team Udayavani, Jun 14, 2024, 3:55 AM IST
ಬೆಂಗಳೂರು: ಕಳೆದ ಮಾರ್ಚ್/ಏಪ್ರಿಲ್ನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ಮತ್ತು ಫಲಿತಾಂಶ ಸಮಾಧಾನ ತಾರದೆ ಅಂಕಗಳನ್ನು ಹೆಚ್ಚಿಸಲು ಬಯಸುವ ಅಭ್ಯರ್ಥಿಗಳಿಗೆ ಇಂದಿನಿಂದ (ಜೂ.14) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಅನ್ನು ನಡೆಸುತ್ತಿದೆ. ಶುಕ್ರವಾರ ಪ್ರಥಮ ಭಾಷೆ ಕನ್ನಡ ಪರೀಕ್ಷೆ ನಡೆಯಲಿದೆ. ಎಲ್ಲ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿವೆ.
ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳ 1,44,160 ವಿದ್ಯಾರ್ಥಿಗಳು ಹಾಗೂ 79,148 ವಿದ್ಯಾರ್ಥಿನಿಯರು ಸೇರಿ 2,23,308 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. 13,085 ವಿದ್ಯಾರ್ಥಿಗಳು ಫಲಿತಾಂಶ ವೃದ್ಧಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. 724 ಕೇಂದ್ರಗಳಲ್ಲಿ ಜೂನ್ 22ರವರೆಗೆ ಪರೀಕ್ಷೆ-2 ನಡೆಯಲಿದೆ.
ಪ್ರತಿ ಕೇಂದ್ರದಲ್ಲಿಯೂ ಸಿಸಿ ಕ್ಯಾಮರಾಗಳ ಮೂಲಕ ಪರೀಕ್ಷಾ ಅವ್ಯವಹಾರಗಳ ಬಗ್ಗೆ ನಿಗಾ ವಹಿಸಲಾಗುತ್ತದೆ. ಉಳಿದಂತೆ ವಿಚಕ್ಷಣ ತಂಡ ಮತ್ತು ಜಾಗೃತ ತಂಡಗಳು ನಕಲು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಸಲಿವೆ ಎಂದು ಮಂಡಳಿ ನಿರ್ದೇಶಕರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byndoor; ರಾಜಕಾರಣ ನಿಂತ ನೀರಲ್ಲ, ಧೃತಿಗೆಡದೆ ಪಕ್ಷ ಸಂಘಟಿಸಿ: ಲಕ್ಷ್ಮೀ ಹೆಬ್ಬಾಳಕರ್
CM ಬದಲಾವಣೆ ವಿಷಯ ಮುಗಿದು ಹೋದ ಅಧ್ಯಾಯ: ಸತೀಶ್ ಜಾರಕಿಹೊಳಿ
Valmiki Corporation case: ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಪ್ರಹ್ಲಾದ ಜೋಶಿ
Mudigere: ಹೇಮಾವತಿ ನದಿಗೆ ಬಿದ್ದ ಮತ್ತೊಂದು ಕಾರು… ನಾಲ್ವರಿಗೆ ಸಣ್ಣ ಪುಟ್ಟ ಗಾಯ
Chikkamagaluru: ಮಹಾಮಾರಿ ಡೆಂಗ್ಯೂಗೆ ಬಾಲಕಿ ಬಲಿ, ಸರ್ಕಾರಕ್ಕೆ ಛೀಮಾರಿ ಹಾಕಿದ ಪೋಷಕರು
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಪ್ರತಿಭಾ ಪಲಾಯನ ತಡೆಯಬೇಕಿದೆ: ನಿರಂಜನ
Excise Policy Case: ಅರವಿಂದ್ ಕೇಜ್ರಿವಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನ : ಕೋರ್ಟ್
Operation Azm-i-Istehkam; ಅಮೆರಿಕದ ಬಳಿ ಸಣ್ಣ ಶಸ್ತ್ರಾಸ್ತ್ರಗಳನ್ನು ಕೇಳಿದ ಪಾಕಿಸ್ಥಾನ
Actors: ಪಾಕಿಸ್ತಾನದ ಸಿನಿಮಾರಂಗದಲ್ಲೂ ಬಣ್ಣ ಹಚ್ಚಿ ಮಿಂಚಿರುವ ಭಾರತೀಯ ಕಲಾವಿದರಿವರು..
Sandalwood; ಟ್ರೇಲರ್ನಲ್ಲಿ ‘ತಾಜ್’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.