T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ

Team Udayavani, Jun 14, 2024, 12:13 AM IST

1-wi

ಟರೂಬ: ಶೆರ್ಫಾನೆ ರುಥರ್‌ಫೋರ್ಡ್‌ ಮತ್ತು ಅಲ್ಜಾರಿ ಜೊಸೆಫ್ ಅವರ ಅಮೋಘ ಆಟದಿಂದಾಗಿ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವು ಗುರುವಾರದ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು 13 ರನ್ನುಗಳಿಂದ ಸೋಲಿಸಿ ಸೂಪರ್‌ 8 ಹಂತಕ್ಕೇರಿತು.

ರುಥರ್‌ಫೋರ್ಡ್‌ ಅವರ ಅವಿಸ್ಮರಣೀಯ ಆಟದಿಂದಾಗಿ ವೆಸ್ಟ್‌ಇಂಡೀಸ್‌ ತಂಡವು 9 ವಿಕೆಟಿಗೆ 149 ರನ್ನುಗಳ ಸವಾಲೆಸೆಯುವ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಇದಕ್ಕುತ್ತರವಾಗಿ ಅಲ್ಜಾರಿ ಜೊಸೆಫ್ ಅವರ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟಿಗೆ 136 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಈ ಕೂಟದಲ್ಲಿ ಸತತ ಮೂರನೇ ಗೆಲುವು ದಾಖ ಲಿಸಿದ ವೆಸ್ಟ್‌ಇಂಡೀಸ್‌ ಆರಂಕದೊಂದಿಗೆ ಸೂಪರ್‌ 8ಕ್ಕೇರಿತು. ಸತತ ಎರಡು ಪಂದ್ಯಗಳಲ್ಲಿ ಸೋತ ನ್ಯೂಜಿಲ್ಯಾಂಡ್‌ ಕೂಟದಿಂದ ಹೊರಬಿತ್ತು. ನ್ಯೂಜಿ ಲ್ಯಾಂಡ್‌ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೂ ನಾಲ್ಕಂಕ ಪಡೆಯಬಹುದು. ಅಷ್ಟೇ ಅಂಕವನ್ನು ಇದೀಗ ಅಫ್ಘಾನಿಸ್ಥಾನ ಹೊಂದಿದೆ. ಅಫ್ಘಾನಿಸ್ಥಾನಕ್ಕೂ ಇನ್ನೆರಡು ಪಂದ್ಯ ಆಡಲಿಕ್ಕಿದೆ ಮಾತ್ರವಲ್ಲದೇ ಈಗಾಗಲೇ ಪ್ಲಸ್‌ 5.225 ರನ್‌ಧಾರಣೆಯನ್ನು ಕೂಡ ಹೊಂದಿದೆ.

2021ರ ರನ್ನರ್‌ ಅಪ್‌ ತಂಡವಾಗಿದ್ದ ನ್ಯೂಜಿ ಲ್ಯಾಂಡ್‌ ವಿಶ್ವಕಪ್‌ ಕೂಟಗಳಲ್ಲಿ ಅತ್ಯಂತ ಸ್ಥಿರ ನಿರ್ವಹಣೆ ನೀಡಿದ ತಂಡಗಳಲ್ಲಿ ಒಂದಾಗಿತ್ತು. 2015, 2019 ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿದ್ದ ನ್ಯೂಜಿಲ್ಯಾಂಡ್‌ ತಂಡವು 2016, 2021 ಮತ್ತು 2022ರ ಟಿ20 ವಿಶ್ವಕಪ್‌ನಲ್ಲಿ ಕೂಡ ಅಂತಿಮ ನಾಲ್ಕರ ಹಂತ ತಲುಪಿತ್ತು. ಆದರೆ ಈ ಬಾರಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದೆ.

ಆರಂಭಿಕ ಕುಸಿತ
ವೆಸ್ಟ್‌ಇಂಡೀಸ್‌ನ ಆರಂಭ ಉತ್ತಮವಾಗಿರಲಿಲ್ಲ. ಟ್ರೆಂಟ್‌ ಬೌಲ್ಟ್, ಟಿಮ್‌ ಸೌಥಿ ದಾಳಿಗೆ ಕುಸಿದ ವೆಸ್ಟ್‌ ಇಂಡೀಸ್‌ 12.3 ಓವರ್‌ ಮುಗಿದಾಗ 7 ವಿಕೆಟಿಗೆ ಕೇವಲ 76 ರನ್‌ ಗಳಿಸಿ ಒದ್ದಾಡುತ್ತಿತ್ತು. ಆದರೆ ಶೆರ್ಫಾನೆ ರುಥರ್‌ಫೋರ್ಡ್‌ ಅವರ ಅದ್ಭುತ ಆಟದಿಂದಾಗಿ ತಂಡ ತಿರುಗೇಟು ನೀಡಿತಲ್ಲದೇ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಯಿತು. ನ್ಯೂಜಿಲ್ಯಾಂಡ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 39 ಎಸೆತ ಎದುರಿಸಿ 68 ರನ್‌ ಗಳಿಸಿ ಅಜೇಯರಾಗಿ ಉಳಿದರು. ಎರಡು ಬೌಂಡರಿ ಮತ್ತು ಆರು ಸಿಕ್ಸರ್‌ ಬಾರಿಸಿದರು. ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ವೆಸ್ಟ್‌ಇಂಡೀಸ್‌ 9 ವಿಕೆಟಿಗೆ 149 ರನ್‌ ಗಳಿಸುವಂತಾಯಿತು.

ಮಿಂಚಿದ ಜೊಸೆಫ್
ವಿಂಡೀಸ್‌ನಂತೆ ನ್ಯೂಜಿಲ್ಯಾಂಡ್‌ ಕೂಡ ರನ್‌ ಗಳಿಸಲು ಬಹಳಷ್ಟು ಒದ್ದಾಟ ನಡೆಸಿತು. ಬ್ಯಾಟಿಂಗಿಗೆ ಕಠಿನವೆನಿಸಿದ ಈ ಪಿಚ್‌ನಲ್ಲಿ ಪ್ರಮುಖ ಆಟಗಾರರೂ ಕೂಡ ರನ್‌ ಗಳಿಸಲು ಕಷ್ಟಪಟ್ಟರು. ಡೆವೋನ ಕಾನ್ವೆ, ಕೇನ್‌ ವಿಲಿಯಮ್ಸನ್‌, ರಚಿನ್‌ ರವೀಂದ್ರ ಅಲ್ಪ ಮೊತ್ತಕ್ಕೆ ಔಟಾದರು. ಗ್ಲೆನ್‌ ಫಿಲಿಪ್ಸ್‌ ಮಾತ್ರ ಸ್ವಲ್ಪಮಟ್ಟಿಗೆ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರು 33 ಎಸೆತ ಎದುರಿಸಿ 40 ರನ್‌ ಗಹೊಡೆದರು.

ನ್ಯೂಜಿಲ್ಯಾಂಡ್‌ ಗೆಲ್ಲಲು ಅಂತಿಮ ಓವರಿನಲ್ಲಿ 33 ರನ್‌ ಗಳಿಸಬೇಕಾಗಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ಮಿಚೆಲ್‌ ಸ್ಯಾಂಟ್ನರ್‌ ಮೂರು ಸಿಕ್ಸರ್‌ ಬಾರಿಸಿದರು. ಮುಂದಿನೆರಡು ಎಸೆತಗಳಲ್ಲಿ ಒಂಟಿ ರನ್‌ ಮಾತ್ರ ಬಂತು. ಅಂತಿಮವಾಗಿ ತಂಡ 13 ರನ್ನುಗಳಿಂದ ಸೋಲನ್ನು ಕಂಡಿತು.

ಸಂಕ್ಷಿಪ್ತ ಸ್ಕೋರು
ವೆಸ್ಟ್‌ಇಂಡೀಸ್‌ 9 ವಿಕೆಟಿಗೆ 149 (ಶೆರ್ಫಾನೆ ರುಥರ್‌ಫೋರ್ಡ್‌ 68 ಔಟಾಗದೆ, ಟ್ರೆಂಟ್‌ ಬೌಲ್ಟ್ 16ಕ್ಕೆ 3, ಟಿಮ್‌ ಸೌಥಿ 21ಕ್ಕೆ 2, ಲೂಕಿ ಫೆರ್ಗ್ಯುಸನ್‌ 27ಕ್ಕೆ 2); ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 136 (ಗ್ಲೆನ್‌ ಫಿಲಿಪ್ಸ್‌ 40, ಅಲ್ಜಾರಿ ಜೊಸೆಫ್ 19ಕ್ಕೆ 4, ಗುಡಕೇಶ್‌ ಮೋಟಿ 25ಕ್ಕೆ 3).
ಪಂದ್ಯಶ್ರೇಷ್ಠ: ರುಥರ್‌ಫೋರ್ಡ್‌

ಟಾಪ್ ನ್ಯೂಸ್

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ, ಆದರೆ ಕಾಂಗ್ರೆಸ್ ನವರು….: ಕೆ.ಎಸ್ ಈಶ್ವರಪ್ಪ

Shimoga; ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ, ಆದರೆ ಕಾಂಗ್ರೆಸ್ ನವರು….: ಈಶ್ವರಪ್ಪ

ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್‌ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು

ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್‌ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು

ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ಕಳೆದಿದ್ದ ಕುಮಟಾದ ಈ ಹುಡುಗ ಈಗ ಟೀಂ ಇಂಡಿಯಾದ ಪ್ರಮುಖ ಶಕ್ತಿ!

ನಾಲ್ಕೂವರೆ ವರ್ಷ ಸ್ಮಶಾನದಲ್ಲಿ ಕಳೆದಿದ್ದ ಕುಮಟಾದ ಈ ಹುಡುಗ ಈಗ ಟೀಂ ಇಂಡಿಯಾದ ಪ್ರಮುಖ ಶಕ್ತಿ!

Hassana: ಕೌಟುಂಬಿಕ ಕಲಹ… ದೂರು ನೀಡಲು ಬಂದ ಪತ್ನಿಗೆ SP ಕಚೇರಿಯಲ್ಲೇ ಚಾಕು ಇರಿದು ಹತ್ಯೆ

Hassana: ಕೌಟುಂಬಿಕ ಕಲಹ… ದೂರು ನೀಡಲು ಬಂದ ಪತ್ನಿಗೆ SP ಕಚೇರಿ ಆವರಣದಲ್ಲೇ ಚಾಕು ಇರಿತ

Crocodile: ವಾಹನಗಳು ಓಡಾಡುವ ರಸ್ತೆಯಲ್ಲೇ ದೈತ್ಯ ಮೊಸಳೆ ಸಂಚಾರ…

Crocodile: ವಾಹನಗಳು ಓಡಾಡುವ ರಸ್ತೆಯಲ್ಲೇ ದೈತ್ಯ ಮೊಸಳೆ ಸಂಚಾರ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK; ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಕಾರ್ತಿಕ್; ಈ ಬಾರಿ ಬೇರೆ ಜವಾಬ್ದಾರಿ

DK; ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಕಾರ್ತಿಕ್; ಈ ಬಾರಿ ಬೇರೆ ಜವಾಬ್ದಾರಿ

1-avadhesh

Ayodhya MP ಅವಧೇಶ್‌ ವಿಪಕ್ಷಗಳ ಉಪ ಸ್ಪೀಕರ್‌ ಅಭ್ಯರ್ಥಿ?

1-isl

2026 T20 World Cup; ಭಾರತ-ಶ್ರೀಲಂಕಾ ಆತಿಥ್ಯ

pragyananda

Superbet Chess; 4ನೇ ಸುತ್ತಿನಲ್ಲಿ ಪ್ರಜ್ಞಾನಂದಗೆ ಗೆಲುವು

1-dsdsadasdas

Olympics ಆ್ಯತ್ಲೀಟ್ಸ್‌  ಸಿದ್ಧ:  ಪ್ರಧಾನಿ ಮೋದಿ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

Davanagere; Protest by BJP Zilla Raitamorcha condemning the price hike

Davanagere; ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ರೈತಮೋರ್ಚಾದಿಂದ ಪ್ರತಿಭಟನೆ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಬಹುಮುಖ ಪ್ರತಿಭೆ: ಕಾಲಪೆಟ್ಟಿಗೆಯ ಹಾರ್ಮೋನಿಯಂ ಕಲಾವಿದ ಸದಾಶಿವ ತೇಲಿ

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಜೈಲಿನಲ್ಲಿ ಮಗನನ್ನು ಕಂಡು ಭಾವುಕರಾದ ಮೀನಾ: ತಾಯಿಯನ್ನು ನೋಡಿ ಕಣ್ಣೀರಿಟ್ಟ ದರ್ಶನ್

ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ, ಆದರೆ ಕಾಂಗ್ರೆಸ್ ನವರು….: ಕೆ.ಎಸ್ ಈಶ್ವರಪ್ಪ

Shimoga; ಮಠಾಧೀಶರಿಗೆ ದೇವರ ಸ್ಥಾನ ಕೊಟ್ಟಿದ್ದೇವೆ, ಆದರೆ ಕಾಂಗ್ರೆಸ್ ನವರು….: ಈಶ್ವರಪ್ಪ

ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್‌ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು

ಹೆಚ್ಚು ಮಂದಿ ವಿಡಿಯೋ ನೋಡಬೇಕೆಂದು ಟವರ್‌ ಏರಿದ ಯೂಟ್ಯೂಬರ್: ಮನವೊಲಿಕೆಗೆ ಖಾಕಿ ಸುಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.