Enemy ಎನ್ನುತ್ತಲೇ ಭಾರತವನ್ನು ಹೊಗಳಿದ ಪಾಕಿಸ್ಥಾನದ ರಾಜಕೀಯ ನಾಯಕ!
Team Udayavani, Jun 14, 2024, 6:42 AM IST
ಇಸ್ಲಾಮಾಬಾದ್: ಭಾರತವನ್ನು “ಶತ್ರು ರಾಷ್ಟ್ರ’ ಎಂದು ಉಲ್ಲೇಖಿಸುತ್ತಲೇ ಭಾರತದಲ್ಲಿ ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯನ್ನು ಪಾಕಿಸ್ಥಾನದ ರಾಜಕಾರಣಿ ಶಿಬ್ಲಿ ಫರಾಜ್ ಹಾಡಿ ಹೊಗಳಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾಕಿಸ್ಥಾನ ಸಂಸತ್ತಿನಲ್ಲಿ ಮಾತನಾಡಿ ರುವ ವಿಪಕ್ಷ ನಾಯಕ ಶಿಬ್ಲಿ, “ಶತ್ರುರಾಷ್ಟ್ರವನ್ನು ಉದಾಹರಣೆಯಾಗಿ ನೀಡುವ ಉದ್ದೇಶ ನನಗಿಲ್ಲ. ಆದರೆ ಇತ್ತೀಚೆಗಷ್ಟೇ ಅಲ್ಲಿ ಸಾರ್ವತ್ರಿಕ ಚುನಾ ವಣೆ ಮುಕ್ತಾಯಗೊಂಡಿದೆ. ಅಲ್ಲಿನ 80 ಕೋಟಿಗೂ ಅಧಿಕ ಜನರು ಲಕ್ಷಾಂತರ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ. ಇವಿಎಂಗಳನ್ನು ಬಳಸಿ ತಿಂಗಳುಗಳವರೆಗೆ ಚುನಾವಣೆ ನಡೆಸಿದರೂ ಅಲ್ಲಿ ಯಾರಾದರೂ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿರುವರೇ? ಅದೇ ರೀತಿಯ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಯನ್ನು ಪಾಕ್‌ನಲ್ಲಿ ಏಕೆ ನಡೆಸಲು ಸಾಧ್ಯವಿಲ್ಲ’ ಎಂದು ಪ್ರಶ್ನಿಸಿದ್ದಾರೆ.
ಫೆಬ್ರವರಿಯಲ್ಲಿ ನಡೆದ ಪಾಕ್ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ವಿಪಕ್ಷಗಳು ಆರೋ ಪಿಸುತ್ತಲೇ ಇದ್ದರೂ, ಈ ವಿಚಾರವನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳದೇ ಇರುವ ಹಿನ್ನೆಲೆಯಲ್ಲಿ ಶಿಬ್ಲಿ ಈ ಹೇಳಿಕೆ ನೀಡಿದ್ದಾರೆ.
“Don’t want to quote example of enemy country, abhi elections hui hai wahan..did anyone say election is rigged'”, Pakistan opposition leader Shibli Faraz lauds Indian election process, & asks why can’t ‘Pakistan hv free & fair elections’
Location: Inside Pakistan Parliament pic.twitter.com/jChKNI7BWr
— Sidhant Sibal (@sidhant) June 13, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.