ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ದರ್ಶನ್‌ ಕೇಸ್‌, ನೇಹಾ, ಅಂಜಲಿ ಹತ್ಯೆ ಪ್ರಕರಣದ ಬಳಿಕ ಎಚ್ಚೆತ್ತ ಕಾಂಗ್ರೆಸ್‌ ಪಾಳಯ

Team Udayavani, Jun 15, 2024, 6:40 AM IST

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಯಾವುದೇ ಸೂಕ್ಷ್ಮ ಮತ್ತು ಗಂಭೀರ ಘಟನೆಗಳ ಬಗ್ಗೆ ಸರಕಾರ ಹಾಗೂ ಪಕ್ಷದ ನಿಲುವು ಪ್ರಕಟಿಸಿ, ಆ ಮೂಲಕ ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡುವ ಸಲುವಾಗಿ ಸಲಹಾ ಸಮಿತಿ ರಚಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಹಿರಿಯ ನಾಯಕರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಈಚೆಗೆ ದರ್ಶನ್‌ ಮತ್ತು ಇತರರು ಸೇರಿ ನಡೆಸಿದ್ದಾರೆ ಎನ್ನಲಾದ ಕೊಲೆ ಪ್ರಕರಣ, ನೇಹಾ ಹತ್ಯೆ, ಅಂಜಲಿ ಕೊಲೆ ಪ್ರಕರಣ ಸಹಿತ ಯಾವುದೇ ಸೂಕ್ಷ್ಮ ಅಥವಾ ಗಂಭೀರ ಘಟನೆಗಳು ನಡೆದಾಗ, ಅದಕ್ಕೆ ವಿಪಕ್ಷಗಳು ರಾಜಕೀಯ ಬಣ್ಣ ನೀಡುತ್ತವೆ. ಆ ಮೂಲಕ ಸರಕಾರದ ಬಗ್ಗೆ ನಕಾರಾತ್ಮಕ ಭಾವನೆ ಮೂಡುವಂತೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆದಾಗ, ಪಕ್ಷದ ಚೌಕಟ್ಟಿನಲ್ಲಿ ಸಮಾಲೋಚಿಸಿ ಸೂಕ್ತ ನಿಲುವು ಪ್ರಕಟಿಸಲು ಸಲಹಾ ಸಮಿತಿ ರಚಿಸಬೇಕೆಂಬ ಒಕ್ಕೊರಲ ಅಭಿಪ್ರಾಯ ಕೇಳಿಬಂತು.

ಅದರಂತೆ ಘಟನೆಗಳು ಸಂಭವಿಸಿದಾಗ, ಅದರ ಎಲ್ಲ ಸೂಕ್ಷ್ಮತೆಗಳು, ಕೈಗೊಳ್ಳುವ ತೀರ್ಮಾನಗಳಿಂದ ಆಗಬಹು ದಾದ ಪರಿಣಾಮಗಳ ಬಗ್ಗೆ ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಸಲಹಾ ಸಮಿತಿಯಲ್ಲಿ ಚರ್ಚಿಸುವುದು. ಅನಂತರ ಅದಕ್ಕೆ ಪೂರಕವಾಗಿ ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಬೇಕು ಎಂದು ನಿರ್ಧರಿಸಲಾಯಿತು.

ಸೋತವರು ಪರ್ಯಾಯ ಶಾಸಕರು
ಇನ್ನು ರಾಜ್ಯದ 87 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರೂ, ಅವರೆಲ್ಲರನ್ನೂ ನಾವು “ಪರ್ಯಾಯ ಶಾಸಕರು’ ಅಂತ ಪರಿಗಣಿಸಿ ಪಕ್ಷ ಸಂಘ ಟನೆಗೆ ಒತ್ತು ನೀಡಬೇಕು. ನಿಗಮ-ಮಂಡಳಿಗಳ ಅಧ್ಯಕ್ಷ ರು ಅಧಿಕಾರಾವಧಿಯಲ್ಲಿ ಯಾವುದೇ ಅನಗತ್ಯ ಗೊಂದಲ ಸೃಷ್ಟಿಸಿಕೊಳ್ಳಬಾರದು. ಪಾರದರ್ಶಕ ಆಡಳಿತ ನೀಡುವುದರ ಜತೆಗೆ ಸಾಧ್ಯವಾದಷ್ಟು ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರಿಗೆ ಅನುಕೂಲ ಮಾಡಿ ಕೊಡ ಬೇಕು ಎಂದೂ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ, ಮಾಜಿ ಸಭಾಪತಿ ಬಿ.ಎಲ್‌. ಶಂಕರ್‌ ಮತ್ತಿತರರು ಉಪಸ್ಥಿತರಿದ್ದರು.

ಪಕ್ಷದ ಮೂಲ ಸಿದ್ಧಾಂತವನ್ನು ಯಾವ ಕಾರಣಕ್ಕೂ ಕೈ ಬಿಡಬಾರದು. ಕಾರ್ಯಕರ್ತರ ಪಕ್ಷವಾಗಿ ಮಾಡಲು ಹಾಗೂ ತಳಮಟ್ಟದಿಂದ ಪಕ್ಷ ಬಲಪಡಿಸುವ ಬಗ್ಗೆ ನಮ್ಮ ನಾಯಕರು ಸಲಹೆ ನೀಡಿ¨ªಾರೆ. ಪಕ್ಷ ಸಂಘಟನೆ ಬಗ್ಗೆಯೂ ಮಾರ್ಗದರ್ಶನಗಳನ್ನು ನೀಡಿದ್ದಾರೆ.
-ಡಿ.ಕೆ. ಶಿವಕುಮಾರ್‌, ಅಧ್ಯಕ್ಷ, ಕೆಪಿಸಿಸಿ

ಟಾಪ್ ನ್ಯೂಸ್

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

prahlad-joshi

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ

6

ಯೂಟ್ಯೂಬ್‌ನಲ್ಲಿ IAS ಪಾಠ ಮಾಡಿ, 21ರ ಹರೆಯದಲ್ಲೇ 10 ಲಕ್ಷ ರೂ. ಕಾರು ಖರೀದಿಸಿದ ವಿದ್ಯಾರ್ಥಿ

1-qwewqewq

West Bengal; ನಡು ಬೀದಿಯಲ್ಲೇ ಮಹಿಳೆಗೆ ನಿರ್ದಯವಾಗಿ ಥಳಿತ:ವಿಡಿಯೋ ವೈರಲ್

MLA-Shivaganga

D.K. Shivakumar ಮುಖ್ಯಮಂತ್ರಿ ಆಗೋದು ನಿಶ್ಚಿತ : ಚನ್ನಗಿರಿ ಶಾಸಕ ಶಿವಗಂಗಾ

ARMY,-Navy-Chiefs

Indian Army: ಆಗ ಸಹಪಾಠಿಗಳು, ಈಗ ಭೂ ಸೇನೆ, ನೌಕಪಡೆ ಮುಖ್ಯಸ್ಥರು!

Bommai BJP

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ: ಬಸವರಾಜ ಬೊಮ್ಮಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsad

Election; ಧಾರವಾಡ ಕೆಎಂಎಫ್ ಗೆ 9 ಮಂದಿ ನಿರ್ದೇಶಕರ ಆಯ್ಕೆ

prahlad-joshi

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ

MLA-Shivaganga

D.K. Shivakumar ಮುಖ್ಯಮಂತ್ರಿ ಆಗೋದು ನಿಶ್ಚಿತ : ಚನ್ನಗಿರಿ ಶಾಸಕ ಶಿವಗಂಗಾ

Bommai BJP

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ: ಬಸವರಾಜ ಬೊಮ್ಮಾಯಿ

Hamsa Moily

Bengaluru; ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ; ಹಂಸ ಮೊಯ್ಲಿ ವಿಧಿವಶ

MUST WATCH

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

ಹೊಸ ಸೇರ್ಪಡೆ

1-sadasd

Harangi ಹಿನ್ನೀರಿನಲ್ಲಿ ಈಜಲು ತೆರಳಿದ್ದ ಪ್ರವಾಸಿಗ ನೀರು ಪಾಲು

1-qwewq-wq-ew

T20 World Cup ಚಾಂಪಿಯನ್ಸ್ ಗೆ ಭರ್ಜರಿ ಬಹುಮಾನ ಘೋಷಿಸಿದ ಬಿಸಿಸಿಐ

1-asdsad

Election; ಧಾರವಾಡ ಕೆಎಂಎಫ್ ಗೆ 9 ಮಂದಿ ನಿರ್ದೇಶಕರ ಆಯ್ಕೆ

1-kota

MP ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮಾತೃವಿಯೋಗ

prahlad-joshi

Siddaramaiah ಸರಕಾರದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ: ಸಚಿವ ಪ್ರಹ್ಲಾದ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.