LIC ಆರೋಗ್ಯ ವಿಮೆಗೆ : ಖಾಸಗಿ ಕಂಪೆನಿ ಖರೀದಿ?
Team Udayavani, Jun 15, 2024, 6:10 AM IST
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಎಲ್‌ಐಸಿ ಆರೋಗ್ಯ ವಿಮಾ ಕ್ಷೇತ್ರ ಪ್ರವೇಶಿ ಸುವ ಅಂಶ ಬಹುತೇಕ ಖಚಿತವಾಗಿದೆ. ಅದಕ್ಕಾಗಿ ದೇಶದಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಆರೋಗ್ಯ ವಿಮಾ ಕ್ಷೇತ್ರದ ಲ್ಲಿನ 5 ಅಗ್ರ ಕಂಪೆನಿಗಳ ಪೈಕಿ ಒಂದನ್ನು ಖರೀದಿಸಿ ಹೊಸ ಕ್ಷೇತ್ರಕ್ಕೆ ಕಾಲಿಡುವ ಸಾಧ್ಯತೆ ಇದೆ ಎಂದು ಆಂಗ್ಲ ವಾಣಿಜ್ಯ ಪತ್ರಿಕೆಯೊಂದು ವರದಿ ಮಾಡಿದೆ. ಈ ಉದ್ದೇಶಕ್ಕಾಗಿ ಭಾರತೀಯ ವಿಮಾ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ)ಕ್ಕೆ ತಾನು ಜಾರಿಗೊಳಿಸ ಲಿರುವ ಉದ್ದೇಶಿತ ಆರೋಗ್ಯ ವಿಮೆಯ ಯೋಜನೆಯ ವಿವರಗಳನ್ನು ಸಲ್ಲಿಕೆ ಮಾಡಿದೆ ಎಂದು ತಿಳಿದು ಬಂದಿದೆ.
ಪರವಾನಿಗೆ ಪಡೆಯಲು ಇನ್ನೂ 2-3 ತಿಂಗಳು ಬೇಕಾಗಬಹುದು. ಆ ಅವಧಿ ಯಲ್ಲಿ ದೇಶದಲ್ಲಿ ಸದ್ಯ ಕಾರ್ಯ ವೆಸಗುತ್ತಿರುವ ಖಾಸಗಿ ಕ್ಷೇತ್ರದ ಅಗ್ರ ಆರೋಗ್ಯ ವಿಮೆ ನೀಡುವ ಕಂಪೆನಿಗಳ ಪೈಕಿ ಒಂದನ್ನು ಖರೀದಿ ಮಾಡುವ ಬಗ್ಗೆ ಎಲ್‌ಐಸಿ ಚಿಂತನೆ ನಡೆಸಲಿದೆ ಎನ್ನಲಾ ಗಿದೆ. ಈ ನಿಟ್ಟಿನಲ್ಲಿ ಆಂತರಿಕವಾಗಿ ಹಲವು ಕೆಲಸಗಳು ನಡೆದಿವೆ ಎಂದು ಹೇಳಲಾಗಿದೆ. ದೇಶದಲ್ಲಿ ಸದ್ಯ 29 ಕಂಪೆ ನಿಗಳು ಆರೋಗ್ಯ ವಿಮೆ ನೀಡುವ ಕಂಪೆನಿಗಳು ಇವೆ. ಎಲ್‌ಐಸಿಯ ಒಟ್ಟು 52,000 ಕೋ. ರೂ. ಮೌಲ್ಯದ ಆಸ್ತಿ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.