ಮಕ್ಕಳಲ್ಲಿ ಆಟಿಸಂ ಉಂಟಾಗುವುದಕ್ಕೆ ಸಂಬಂಧಿಸಿದ ಹೆತ್ತವರ ಮಾನಸಿಕ ಅನಾರೋಗ್ಯಗಳು


Team Udayavani, Jun 16, 2024, 11:55 AM IST

4-

ಜಾಗತಿಕವಾಗಿ ಅಂದಾಜು 28 ದಶಲಕ್ಷ ಮಂದಿಯನ್ನು ಬಾಧಿಸುತ್ತಿರುವ, ವಂಶಪಾರಂಪರ್ಯವಾಗಿ ಬರಬಹುದಾದ ನರಮಂಡಲದ ಬೆಳವಣಿಗೆಗೆ ಸಂಬಂಧಿಸಿದ ಸಂಕೀರ್ಣವಾದ ಅನಾರೋಗ್ಯಗಳ ಸಮೂಹವೇ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ (ಎಎಸ್‌ಡಿ).

ಪ್ರಸ್ತುತ, ವಂಶವಾಹಿಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ಹಲವಾರು ಅಂಶಗಳು ಎಎಸ್‌ಡಿ ಉಂಟಾಗಲು ಕಾರಣ ಎಂಬುದು ವೈದ್ಯಕೀಯ ಜಗತ್ತಿನ ತಿಳಿವಳಿಕೆಯಾಗಿದೆ. ಹೆತ್ತವರಲ್ಲಿ ಇರಬಹುದಾದ ಮಾನಸಿಕ ಅನಾರೋಗ್ಯಗಳು ಮತ್ತು ಅವರ ಶಿಶು ಜನನಕ್ಕೆ ಮುನ್ನ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ಗೆ ತುತ್ತಾಗುವ ಸಂಭಾವ್ಯ ಅಪಾಯಗಳ ನಡುವಣ ಸಂಬಂಧದ ಬಗ್ಗೆ ಸ್ವೀಡನ್‌ ಮತ್ತು μನ್ಲಂಡ್‌ ದೇಶಗಳ ಅಧ್ಯಯನಕಾರರು ಇತ್ತೀಚೆಗೆ ನಡೆಸಿದ ಬೃಹತ್‌ ಜನಸಂಖ್ಯಾಧಾರಿತ ಅಧ್ಯಯನದ ವಿಷಯವಾಗಿ ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕ “ಲ್ಯಾನ್ಸೆಟ್‌’ನಲ್ಲಿ ಇತ್ತೀಚೆಗೆ ವರದಿಯೊಂದು ಪ್ರಕಟವಾಗಿದೆ.

ತಂದೆ ಮತ್ತು ತಾಯಿ ಇಬ್ಬರಿಗೂ ಮಾನಸಿಕ ಅನಾರೋಗ್ಯಗಳಿದ್ದ ಸಂದರ್ಭದಲ್ಲಿ ಶಿಶುವಿನಲ್ಲಿ ಎಎಸ್‌ಡಿ ಉಂಟಾಗುವ ಸಾಧ್ಯತೆ ಅತ್ಯಧಿಕ; ಅದರಲ್ಲೂ ತಾಯಿ ಮಾನಸಿ ಅನಾರೋಗ್ಯ ಬಾಧಿತೆಯಾಗಿದ್ದರೆ ಶಿಶುವಿನಲ್ಲಿ ಆಟಿಸಂ ಉಂಟಾಗುವ ಸಾಧ್ಯತೆ ಹೆಚ್ಚಿದ್ದರೆ, ತಂದೆ ಮಾತ್ರ ತೊಂದರೆಗೀಡಾಗಿದ್ದಲ್ಲಿ ಸಾಧ್ಯತೆ ಕಡಿಮೆ. ಹೆತ್ತವರ ಮಾನಸಿಕ ಅನಾರೋಗ್ಯಗಳು ಮಕ್ಕಳಲ್ಲಿ ಎಎಸ್‌ಡಿ ಉಂಟಾಗುವ ಅಪಾಯದ ಮೇಲೆ ಪರಿಣಾಮ ಬೀರುತ್ತವೆ, ಇದರ ಜತೆಗೆ ವಂಶವಾಹಿ ಅಂಶಗಳು ಕೂಡ ಪ್ರಭಾವ ಹೊಂದಿರುತ್ತವೆ.

ತಾಯಿಯ ಮಾನಸಿಕ ಅನಾರೋಗ್ಯವು ಶಿಶುವಿನಲ್ಲಿ ಆಟಿಸಂ ಉಂಟಾಗುವುದಕ್ಕೆ ಜನನಪೂರ್ವ ಒಂದು ಬಲವಾದ ಕಾರಣವಾಗಿರುತ್ತದೆ ಎಂಬುದಾಗಿ ಡೆನ್ಮಾರ್ಕ್‌ ಮೂಲದ ಅಧ್ಯಯನವೊಂದು ಹೇಳಿದೆ. ಗರ್ಭ ಧರಿಸಿದ ಅವಧಿಯಲ್ಲಿ ತಾಯಿ ಒತ್ತಡಕ್ಕೆ ಒಳಗಾಗಿದ್ದರೆ ಅದರಿಂದ ರೋಗಪ್ರತಿರೋಧಕ ಶಕ್ತಿಯು ಅನಿಯಂತ್ರಿತವಾಗಿದ್ದು, ಇದರಿಂದ ಬಾಲ್ಯಕಾಲದಲ್ಲಿ ಆಟಿಸಂಗೆ ತುತ್ತಾಗುವ ಅಪಾಯ ಹೆಚ್ಚುತ್ತದೆ.

ಅಸಹಜ ದೈಹಿಕ ಒತ್ತಡ ಪ್ರತಿಸ್ಪಂದನೆಯು ಶಿಶುವಿನಲ್ಲಿ ಅಸಹಜ ಪ್ರತಿಸ್ಪಂದನೆಗೆ ಕಾರಣವಾಗಬಹುದಾಗಿದ್ದು, ಇದು ಆಟಿಸಂ ಅಪಾಯ ಹೆಚ್ಚಲು ಕಾರಣವಾಗುತ್ತದೆ. ತಾಯಿಯು ಒತ್ತಡಕ್ಕೆ ತುತ್ತಾಗಿರುವುದು ಮತ್ತು ಇದು ಎಎಸ್‌ಡಿಯ ಜತೆಗೆ ಹೊಂದಿರುವ ಸಂಬಂಧದ ಬಗ್ಗೆ ಪರಿಶೀಲಿಸುವುದಾದರೆ, ನಿರ್ದಿಷ್ಟವಾಗಿ ಸೆರೊಟೋನಿನ್‌ ಟ್ರಾನ್ಸ್‌ಪೊàರ್ಟರ್‌ (ಎಸ್‌ಇಆರ್‌ಟಿ) ವಂಶವಾಹಿಯ ಬಗ್ಗೆ ಗಮನ ಕೇಂದ್ರೀಕರಿಸಬೇಕಾಗುತ್ತದೆ; ಏಕೆಂದರೆ ಇದು ಒತ್ತಡ ಪ್ರತಿಸ್ಪಂದನೆಯ ವಿಷಯದಲ್ಲಿ ಪ್ರಧಾನ ಪಾತ್ರ ಹೊಂದಿದೆ ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ.

ಈ ವಂಶವಾಹಿಯು ಆಟಿಸಂನ ಹಠ ಮತ್ತು ಆಗ್ರಹದ ಸ್ವಭಾವಗಳ ಜತೆಗೂ ಸಂಬಂಧ ಹೊಂದಿದೆ. ಆಟಿಸಂ ಉಂಟಾಗುವ ಅಪಾಯವು ಹೆತ್ತವರಲ್ಲಿ ಕಾಣಿಸಿಕೊಳ್ಳುವ ಎಲ್ಲ ವರ್ಗಗಳ ಮಾನಸಿಕ ಅನಾರೋಗ್ಯಗಳಿಂದಲೂ ಹೆಚ್ಚುತ್ತದೆ; ಅದರಲ್ಲೂ ತಾಯಿಯು ಮಾನಸಿಕ ಅನಾರೋಗ್ಯ ಹೊಂದಿದ್ದರೆ ಈ ಅಪಾಯವು ಹೆಚ್ಚು, ನರ ಅಭಿವೃದ್ಧಿಗೆ ಸಂಬಂಧಿಸಿದ ತೊಂದರೆಗಳು, ಮನೋಭಾವ ಸಮಸ್ಯೆಗಳು, ನ್ಯುರಾಟಿಕ್‌ ಸಮಸ್ಯೆಗಳು ಮತ್ತು ಸೈಕೊಆ್ಯಕ್ಟಿವ್‌ ದ್ರವ್ಯಗಳ ವ್ಯಸನ ಸಮಸ್ಯೆಗಳಿಂದಲೂ ಶಿಶು ಆಟಿಸಂಗೆ ತುತ್ತಾಗುವ ಅಪಾಯ ಹೆಚ್ಚುತ್ತದೆ.

ಆದರೆ ಸ್ಕಿಜೊಫ್ರೆàನಿಯಾ ಮತ್ತು ಇತರ ಸೈಕೊಟಿಕ್‌ ತೊಂದರೆಗಳು ತಂದೆ ಅಥವಾ ತಾಯಿಯಲ್ಲಿ ಇದ್ದರೆ ಶಿಶುವಿಗೆ ಎಎಸ್‌ಡಿ ಉಂಟಾಗುವ ಅಪಾಯ ಸಮಾನವಾಗಿರುತ್ತದೆ. ಈ ಅಧ್ಯಯನ ಫ‌ಲಿತಾಂಶಗಳು ಎಎಸ್‌ಡಿಗೆ ತುತ್ತಾಗಬಹುದಾದ ಅಪಾಯ ಹೆಚ್ಚಿರುವ ಶಿಶುಗಳನ್ನು ಆದಷ್ಟು ಬೇಗನೆ ಗುರುತಿಸಿ ಬೇಗನೆ ಚಿಕಿತ್ಸೆ ಒದಗಿಸುವ ಮೂಲಕ ಉತ್ತಮ ಫ‌ಲಿತಾಂಶ ಪಡೆಯುವಲ್ಲಿ ಹೆತ್ತವರ ವಿವಿಧ ಮಾನಸಿಕ ಅನಾರೋಗ್ಯಗಳನ್ನು ವಿಶ್ಲೇಷಿಸುವುದಕ್ಕೆ ಇರುವ ಪ್ರಾಮುಖ್ಯವನ್ನು ಒತ್ತಿ ಹೇಳುತ್ತವೆ.

ಡಾ| ಪೂನಂ ಸಂತೋಷ್‌,

ಕನ್ಸಲ್ಟಂಟ್‌ ಸೈಕಿಯಾಟ್ರಿ,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Terror 2

Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !

Border Gavaskar Trophy: India ready for Kangaroo Challenge; What is the team’s strength?

Border Gavaskar Trophy: ಕಾಂಗರೂ ಚಾಲೆಂಜ್‌ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?

Kollywood: ʼಅಮರನ್‌ʼ ಚಿತ್ರತಂಡದಿಂದ 1 ಕೋಟಿ ರೂ. ಪರಿಹಾರ ಕೇಳಿದ ವಿದ್ಯಾರ್ಥಿ; ಕಾರಣವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

crime (2)

Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ

1-honey

Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ‌,ಮಗಳು

1-pk

Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.