ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !
Team Udayavani, Jun 17, 2024, 5:23 PM IST
ಉದಯವಾಣಿ ಸಮಾಚಾರ
ಬಾಗಲಕೋಟೆ: ಒಂದಷ್ಟು ಹಾಡು, ಮತ್ತೂಂದಿಷ್ಟು ನೃತ್ಯ, ಇನ್ನೊಂದಿಷ್ಟು ಹಾಸ್ಯ. ಜತೆಗೆ ಆರೋಗ್ಯಕ್ಕಾಗಿ ಓಟದ ಸ್ಪರ್ಧೆ. ಬರೋಬ್ಬರಿ 1500 ಮಹಿಳೆಯರು ಇಳಕಲ್ಲ ಸೀರೆಯುಟ್ಟು ಓಟದಲ್ಲಿ ಭಾಗಿ… ಹೌದು, ಈ ದೃಶ್ಯಗಳು ರವಿವಾರ ಬೆಳ್ಳಂಬೆಳಗ್ಗೆ ಕಂಡು ಬಂದಿದ್ದು ನವನಗರದ ಭೋವಿ ಪೀಠದ ಆವರಣದಲ್ಲಿ.
ಬಾಗಲಕೋಟೆಯ ರಿಯಲ್ ಸ್ಫೋರ್ಟ್ಸ್ ಸಂಸ್ಥೆ, ಆಲ್ ಇಂಡಿಯಾ ಸೆಲ್ಫ್ ಗವರ್ನಮೆಂಟ್, ಸಫಾಯಿ ಕರ್ಮಚಾರಿ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 10ಕೆ ಮಾನ್ಸೂನ್ ಮ್ಯಾರಥಾನ್ ಸ್ಪರ್ಧೆ, ವಿಶೇಷ ಗಮನ ಸೆಳೆಯಿತು. ವಿಶ್ವ ದಾಖಲೆಗಾಗಿ ಬಾಗಲಕೋಟೆ ನಗರದಲ್ಲಿ ಮ್ಯಾರಥಾನ್ ಓಟದಲ್ಲಿ ಬೆಳ್ಳಂಬೆಳಿಗ್ಗೆ ಸಾವಿರಾರು ಜನರು ಪಾಲ್ಗೊಂಡಿದ್ದರು.
ಯುವಕ-ಯುವತಿಯರು, ಗೃಹಿಣಿಯರು, ಅಧಿಕಾರಿಗಳು, ವೈದ್ಯರು, ಉದ್ಯಮಿಗಳೂ ಓಟಕ್ಕೆ ಹೆಜ್ಜೆ ಹಾಕಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರು, ಆಕಾಶಕ್ಕೆ ಬಲೂನ್ ಹಾರಿ ಬಿಡುವ ಮೂಲಕ ಮ್ಯಾರಥಾನ್‌ಗೆ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ, ಜಿ.ಪಂ. ಸಿಇಒ ಶಶಿಧರ ಕುರೇರ, ರಷ್ಯಾದ ಮ್ಯಾರಥಾನ್ ಓಟಗಾರ್ತಿ ಅಲೆಕ್ಸಾಂಡ್ರಾ ಓಟದಲ್ಲಿ ಭಾಗಿಯಾಗಿ ಗಮನ ಸೆಳೆದರು.
ರಷ್ಯಾದಿಂದ ಆಗಮಿಸಿದ್ದ ಅಲೆಕ್ಸಾಂಡ್ರಾ, ಮೊದಲು ಸ್ಫೋರ್ಟ್ಸ್ ವಿಯರ್‌ನಲ್ಲಿ ಓಡಿದರು. ನಂತರ ಇಳಕಲ್ ಸೀರೆಯುಟ್ಟು ಮಹಿಳೆಯರೊಂದಿಗೆ ಓಡಿದರು.
ಇಳಕಲ್ಲ ಸೀರೆಯುಟ್ಟ 1500 ಮಹಿಳೆಯರು :
ಮ್ಯಾರಥಾನ್‌ನಲ್ಲಿ ಸುಮಾರು 1500ಕ್ಕೂ ಹೆಚ್ಚು ಮಹಿಳೆಯರು ಇಳಕಲ್ ಸೀರೆಯುಟ್ಟು ಮ್ಯಾರಥಾನ್ ನಲ್ಲಿ ಓಡಿದರು. ಇಳಕಲ್‌ಯ ಅಭಿವೃದ್ಧಿ ಹಾಗೂ ಪ್ರಚಾರದ ಭಾಗವಾಗಿಯೂ ಮ್ಯಾರಥಾನ್ ಗಮನ ಸೆಳೆಯಿತು. ಮ್ಯಾರಥಾನ್‌ಗೂ ಮುನ್ನ ಎರೊಬಿಕ್ಸ್ ನೃತ್ಯ ನಡೆಯಿತು. ಈ ವೇಳೆ ಮಹಿಳೆಯರು ಕುಣಿದು ಕುಪ್ಪಳಿಸಿದರು.
3ಕೆ, 5ಕೆ ಹಾಗೂ 10ಕೆ ಮ್ಯಾರಥಾನ್‌ಗಳಲ್ಲೂ ಜನ ವಯಸ್ಸಿನ ಹಂಗು ತೊರೆದು ಭಾಗವಹಿಸಿ ತಮ್ಮ ಫಿಟ್ನೆಸ್ ಪ್ರದರ್ಶಿಸಿದರು. ಈ ಬಾರಿ ಆರೋಗ್ಯ ಮತ್ತು ಮಹಿಳಾ ಸಬಲೀಕರಣದ ಶೀರ್ಷಿಕೆಯಡಿಲ್ಲಿ ಮ್ಯಾರಥಾನ್ ಜರುಗಿತು. ಅಲ್ಟ್ರಾ ಮ್ಯಾರಥಾನ್ ಓಟಗಾರ ಅರುಣ ಭಾರದ್ವಾಜ್, ರಷ್ಯಾ ದೇಶದ ಮಾಸ್ಕೋದ ಮ್ಯಾರಥಾನ್ ಚಾಂಪಿಯನ್ ಅಲೆಕ್ಸಾಂಡ್ರಾ ಅಫಾನಾಸೊವಾ ಮ್ಯಾರಥಾನ್‌ನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.
ವಿಜಯಪುರ ಅಕ್ಕಮಹಾದೇವಿ ವಿವಿ ವಿಶ್ರಾಂತ ಕುಲಪತಿ ಡಾ| ಮೀನಾ ಚಂದಾವರಕರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಪಂ ಸಿಇಒ ಶಶಿಧರ ಕುರೇರ, ಜಗದೀಶ ಹಿರೇಮನಿ, ಪ್ರವೀಣ ಸೋಲಂಕಿ, ಶಿವಕುಮಾರ ಸುರಪುರಮಠ, ವಿಂದ್ಯಾ ಸರದೇಸಾಯಿ, ಗೀತಾ ಗಿರಿಜಾ, ಶಶಿಕಲಾ ಸುರೇಶ ಮಜ್ಜಗಿ ಮುಂತಾದವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
ಲೋಕಾಪುರ: ಬಿಡಾಡಿ ದನಗಳ ಕಾಟಕ್ಕೆ ಜನ ಹೈರಾಣ
MUST WATCH
ಹೊಸ ಸೇರ್ಪಡೆ
Congress ಶಾಸಕರಿಗೆ ಬಿಜೆಪಿ ಆಫರ್; ರವಿ ಗಣಿಗ ಆರೋಪಕ್ಕೆ ಶಾಸಕ ತಮ್ಮಯ್ಯ ಸ್ಪಷ್ಟನೆ
BGT 2024: ಗಾಯಗೊಂಡ ಗಿಲ್: ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ
Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ
Malpe ಬೀಚ್ ಸ್ವಚ್ಛತೆ: 3 ದಿನದಲ್ಲಿ 26 ಲೋಡ್ ಕಸ ಸಂಗ್ರಹ
Sasthan: ಪಾಂಡೇಶ್ವರ; ಲಿಂಗ ಮುದ್ರೆ ಕಲ್ಲು ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.