Kannada ಮಾತನಾಡಲು ಬಾರದ ಶಿಕ್ಷಣ ಸಚಿವರು: ಭೋಜೇಗೌಡ ಟೀಕೆ
Team Udayavani, Jun 17, 2024, 11:48 PM IST
ಉಳ್ಳಾಲ: ರಾಜ್ಯದಲ್ಲಿ ಕನ್ನಡ ಮಾತನಾಡಲು ಬಾರದ ಸಚಿವರನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳು ಯಾವ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ನೀಡುತ್ತಾರೆ ಎಂಬುದೇ ಸದ್ಯದ ಪ್ರಶ್ನೆ. ಮೊದಲಿಗೆ ಶೇ.50ರಷ್ಟು ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಭರ್ತಿಗೊಳಿಸಿ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಆಗ್ರಹಿಸಿದರು.
ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯ ಇರುವಂತಹ ರಾಜ್ಯದಲ್ಲಿ ಇದು ಅಪಹಾಸ್ಯಕರ ಸಂಗತಿ. ಒಂದೆಡೆ ಮುಖ್ಯಮಂತ್ರಿ ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಬೇಕು ಎನ್ನುತ್ತಾರೆ. ಕನ್ನಡ ಬಾರದೇ ಇರುವ ಸಚಿವರ ಹಿಡಿದುಕೊಂಡು ಕನ್ನಡ ಆಡಳಿತ ಭಾಷೆಯ ನ್ನಾಗಿಸುವುದು ಹೇಗೆ ಎಂಬುದೇ ಯಕ್ಷ ಪ್ರಶ್ನೆ ಎಂದರು.
ಮೊದಲ ಪಿಯುಸಿ ಆರಂಭವಾಗಿ ಹಲವು ದಿನಗಳೇ ಕಳೆದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಿಸಿಲ್ಲ. ಸರಕಾರಿ ಹಾಗೂ ಅನುದಾನಿತ ಶಾಲೆಗಳನ್ನು ತಾರತಮ್ಯ ಭಾವನೆಯಿಂದ ನೋಡಲಾಗುತ್ತಿದೆ. ಎಲ್ಲಾ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಹಾಗೂ ಎಲ್ಲ ಶಿಕ್ಷಕರಿಗೆ ಒಂದೇ ರೀತಿಯ ತರಬೇತಿ ಕೊಡಿ ಎಂದು ಒತ್ತಾಯಿಸಿದರು.
ಈ ಸಂದರ್ಭ ಅವರನ್ನು ಕೊರಗಜ್ಜ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಅಭಿನಂದಿಸಲಾಯಿತು. ದ.ಕ ಜಿಲ್ಲಾ ಯುವಜನತಾದಳ ಅಧ್ಯಕ್ಷ ಅಶ್ವಿತ್ ಸುವರ್ಣ, ಸಮಿತಿ ಟ್ರಸ್ಟಿ ದೇವಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.