Krishi Sakhi; 30 ಸಾವಿರ ಸ್ತ್ರೀಯರಿಗೆ ಮೋದಿ ಕೃಷಿ ಸಖಿ ಪತ್ರ
Team Udayavani, Jun 18, 2024, 11:25 PM IST
ವಾರಾಣಸಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತು ಬಿಡುಗಡೆ ವೇಳೆ ಪ್ರಧಾನಿ ನರೇಂದ್ರ ಮೋದಿ ಕೃಷಿ ಸಂಬಂಧಿಸಿದ ಸಲಹಾ ಕಾರ್ಯಗಳನ್ನು ನೆರವೇರಿಸುವ ಉದ್ದೇಶದಿಂದ “ಕೃಷಿ ಸಖಿ’ ತರಬೇತಿ ಪಡೆದ ಸ್ವ-ಸಹಾಯ ಗುಂಪುಗಳ 30,000ಕ್ಕೂ ಅಧಿಕ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಆಶಾ ಕಾರ್ಯಕರ್ತರೆಯಾಗಿ ನಮ್ಮ ಸಹೋದರಿಯರ ಕೆಲಸವನ್ನು ನಾವು ಕಂಡಿದ್ದೇವೆ. ಡಿಜಿಟಲ್ ಇಂಡಿಯಾ ಬೆಳವಣಿಗೆಯಲ್ಲಿ ಸಹೋದರಿ ಯರು ಕಾಣಿಕೆ ನೀಡಿದ್ದಾರೆ. ಈಗ ಕೃಷಿ ಸಖೀಯರ ರೂಪದಲ್ಲಿ ಕೃಷಿಯು ಹೊಸ ಶಕ್ತಿಯನ್ನು ಕಂಡು ಕೊಂಡಿದೆ. ಸದ್ಯ 12 ರಾಜ್ಯಗಳಲ್ಲಿ ಕಾರ್ಯಾ ಚರಣೆ ಯಲ್ಲಿರುವ ಕೃಷಿ ಸಖೀ ಉಪಕ್ರಮದಡಿ ಸ್ವ-ಸಹಾಯ ಗುಂಪುಗಳಿಗೆ ನಾವು 30 ಸಾವಿರ ಪ್ರಮಾಣ ಪತ್ರ ವಿತರಿಸಿದ್ದೇವೆ. ಭವಿಷ್ಯದಲ್ಲಿ ಈ ಯೋಜನೆಗೆ ಸಾವಿರಾರು ಸ್ವ-ಸಹಾಯ ಗುಂಪುಗಳನ್ನು ಸೇರಿಸಲಾಗುವುದು. ಸರಕಾರದ ಈ ಕ್ರಮವು, 3 ಕೋಟಿ ಲಕಪತಿ ದೀದಿಯರ ನಿರ್ಮಾಣಕ್ಕೂ ನೆರವು ನೀಡಲಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ನನ್ನ ಈ ಕಾಶಿಯಿಂದ ನಾನು ದೇಶದ ಎಲ್ಲ ಕೃಷಿಕರು ಹಾಗೂ ನಾಗರಿಕರಿಗೆ ಶುಭ ಹಾರೈಸುತ್ತಿದ್ದೇನೆ. ದೇಶದ ಎಲ್ಲ ರೈತರ ಖಾತೆಗೆ 20 ಸಾವಿರ ಕೋಟಿ ರೂ. ಹಣ ತಲುಪಿದೆ. ಜತೆಗೆ 3 ಕೋಟಿ ಲಕಪತಿ ದೀದಿಯರ ನಿರ್ಮಾಣಕ್ಕೆ ನಾವಿಂದು ಹೊಸ ಹೆಜ್ಜೆಯನ್ನು ಇಟ್ಟಿದ್ದೇವೆ. ನಾವು ಅವರಿಗೆ ಹೊಸ ಆದಾಯದ ಮೂಲ ಮತ್ತು ಗೌರವವನ್ನು ಖಾತ್ರಿಪಡಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದರು.
ಏನಿದು ಕೃಷಿ ಸಖೀ ಯೋಜನೆ?: ಮಣ್ಣಿನ ಆರೋಗ್ಯ, ಮಣ್ಣು ಸಂರಕ್ಷಣೆ ಕ್ರಮಗಳು, ಸಮಗ್ರ ಕೃಷಿ ವ್ಯವಸ್ಥೆ, ಪಶುಸಂಗೋಪನೆ ನಿರ್ವಹಣೆ ಸೇರಿದಂತೆ ಕೃಷಿ ವಿವಿಧ ಸಂಗತಿಗಳು ಕುರಿತು ಆಯ್ದ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಕೇಂದ್ರ ಸರಕಾರವು 56 ದಿನಗಳ ಕಾಲ ತರಬೇತಿ ನೀಡುತ್ತದೆ. ಬಳಿಕ ಅವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಈ ತರಬೇತಿ ಪಡೆದ ಮಹಿಳೆಯರು ಕೇಂದ್ರ ಕೃಷಿ ಮತ್ತು ಗ್ರಾಮೀಣಾ ಭಿವೃದ್ಧಿ ಸಚಿವಾಲಯದಡಿ ನಿರ್ದಿಷ್ಟ ಶುಲ್ಕಕ್ಕೆ ತಮ್ಮ ಸೇವೆಯನ್ನು ಒದಗಿಸಬೇಕಾಗುತ್ತದೆ. ಇದ ರಿಂದಾಗಿ ಕೃಷಿ ಸಖೀ ಪ್ರಮಾಣಪತ್ರ ಪಡೆದ ಮಹಿಳೆಯರು ವರ್ಷಕ್ಕೆ 60 ಸಾವಿರ ರೂ.ನಿಂದ 80 ಸಾವಿರ ರೂ.ವರೆಗೂ ಆದಾಯ ಗಳಿಸಬಹುದು. ಪರಿಣಾಮ, ಕೇಂದ್ರ ಸರಕಾರದ 3 ಕೋಟಿ ಲಕಪತಿ ದೀದಿ ನಿರ್ಮಾಣದ ಗುರಿಯೂ ಈಡೇರಲಿದೆ. ಸದ್ಯ ಕೃಷಿ ಸಖಿ ಯೋಜನೆಯು ಕರ್ನಾಟಕ ಸೇರಿ 12 ರಾಜ್ಯಗಳಲ್ಲಿ ಜಾರಿಯಲ್ಲಿದೆ.
ಅಮೆರಿಕ ಜನಸಂಖ್ಯೆಗೆ ನಮ್ಮ ಸ್ತ್ರೀ ಮತದಾರರು ಸಮ: ಪಿಎಂ
ನಾನು ಇತ್ತೀಚೆಗೆ ಜಿ-7 ರಾಷ್ಟ್ರಗಳ ಶೃಂಗಸಭೆಗಾಗಿ ಇಟಲಿಗೆ ತೆರಳಿದ್ದೆ. ಜಿ7ನ ಎಲ್ಲ ರಾಷ್ಟ್ರಗಳ ಮತ ದಾರರನ್ನು ಒಗ್ಗೂಡಿಸಿದರೂ ಭಾರತದ ಮತದಾರರ ಸಂಖ್ಯೆ ಇನ್ನೂ 1.5 ಪಟ್ಟು ಹೆಚ್ಚಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 31 ಕೋಟಿ ಮಹಿಳೆಯರು ಮತದಾನ ಮಾಡಿದ್ದಾರೆ. ಇದು ವಿಶ್ವದಲ್ಲೇ ಅತೀ ಹೆಚ್ಚು ಮಹಿಳಾ ಮತದಾರರ ಸಂಖ್ಯೆಯಾಗಿದೆ. ಅಷ್ಟೇ ಅಲ್ಲದೇ ನಮ್ಮ ಮಹಿಳಾ ಮತದಾರರ ಸಂಖ್ಯೆ ಇಡೀ ಅಮೆರಿಕದ ಜನಸಂಖ್ಯೆಗೆ ಸಮೀಪವಾಗಿದೆ. ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಈ ಚೆಲುವು ಮತ್ತು ಶಕ್ತಿ ಇಡೀ ಜಗತ್ತನ್ನು ಆಕರ್ಷಿಸುತ್ತಿದೆ, ಪ್ರೇರೇಪಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದಲ್ಲಿ ಹೇಳಿದರು.
60 ವರ್ಷಬಳಿಕ ಈಗ ಹ್ಯಾಟ್ರಿಕ್ ಸರಕಾರ
ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಹ್ಯಾಟ್ರಿಕ್ ಸರಕಾರಗಳ ರಚನೆ ತೀರ ಅಪರೂಪ ಭಾರತ ಇದನ್ನು ಸಾಧಿಸಿದೆ. 60 ವರ್ಷಗಳ ಬಳಿಕ ಈಗ ದೇಶದಲ್ಲಿ ಸತತ 3ನೇ ಬಾರಿಗೂ ಒಂದೇ ಸರಕಾರ ಆಡಳಿತಕ್ಕೆ ಬರುವಂತಾಗಿದೆ. ಲೋಕ ಸಭೆ ಚುನಾವಣೆಯಲ್ಲಿ ದೇಶದ ಜನರು ನೀಡಿ ರುವ ಜನಾದೇಶ ಅಭೂತ ಪೂರ್ವವಾಗಿದ್ದು, ಇದರಿಂದ ಇತಿಹಾಸ ಸೃಷ್ಟಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.