PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

Team Udayavani, Jun 19, 2024, 11:23 PM IST

PDOಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಲು ಬಿ.ಸುರೇಶ್ ಆಗ್ರಹ

ಕುಣಿಗಲ್: ಗ್ರಾಮೀಣಾಭಿವೃದ್ದಿ ಆಯುಕ್ತಾಲಯದ ಕರಡು ಜ್ಯೇಷ್ಠತಾ ಪಟ್ಟಿ ಯಥಾವತ್ ಜಾರಿಯಾದರೇ ರಾಜ್ಯದ 16 ಜಿಲ್ಲೆಯ ಐದು ಸಾವಿರ ನೌಕರರ ಬಡ್ತಿಗೆ ಹಿನ್ನಡೆಯಾಗಲಿದ್ದು ಹಾಗಾಗಿ ಸರ್ಕಾರ 2009 ರ ಒಂದೇ ಅಧಿಸೂಚನೆಯಡಿಯಲ್ಲಿ ನೇರ ನೇಮಕಾತಿ ಹೊಂದಿದ್ದ 30 ಜಿಲ್ಲೆಗಳ ಎಲ್ಲಾ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಒಂದೇ ಜ್ಯೇಷ್ಠತಾ ದಿನಾಂಕವನ್ನು ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸುವಂತೆ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪರಿಷತ್ ಸದಸ್ಯ ಬಿ.ಸುರೇಶ್ ಸರ್ಕಾರವನ್ನು ಅಗ್ರಪಡಿಸಿದ್ದಾರೆ.

ಪಟ್ಟಣದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ 13 ಜಿಲ್ಲೆಗಳ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ತಾವು ಮಾಡದ ತಪ್ಪಿನಿಂದ್ದಾಗಿ ಸರ್ಕಾರವು ಕರ್ನಾಟಕ ಆಡಳಿತ ನ್ಯಾಯ ಮಂಡಲಿಯ ಮಧ್ಯ ಪ್ರವೇಶದಿಂದ್ದಾಗಿ ವಿವಿಧ ದಿನಾಂಕಗಳಂದು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ ಪರಿಣಾಮವಾಗಿ ಸೇವೆಗೆ ಸೇರದ ದಿನಾಂಕವನ್ನು ಪರಿಗಣಿಸಿ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಜ್ಯೇಷ್ಠತಾ ಪಟ್ಟಿಯನ್ನು ಆರ್‌ಡಿಪಿಆರ್ ಇಲಾಖೆ ಪ್ರಕಟಿಸಿರುವರಿಂದ 13 ಜಿಲ್ಲೆಗಳ ಪಿಡಿಓ, ಕೆಳ ಹಂತದ ಗ್ರೇಡ್ 1 ಕಾರ್ಯದರ್ಶಿ, ಗ್ರೇಡ್ -2 ಕಾರ್ಯದರ್ಶಿ, ಬಿಲ್ ಕಲೆಕ್ಟರ್‌ಗಳಿಗೆ ಮುಂದಿನ 20 ವರ್ಷದ ಅವದಿಯಲ್ಲಿ ಮುಂಬಡ್ತಿ ಇಲ್ಲದಂತ್ತಾಗುತ್ತದೆ, ಪಿಡಿಓ ಹುದ್ದೆಗಳನ್ನು ಹೊಸದಾಗಿ ಸೃಜನೆ ಮಾಡಿ 2009 ರಲ್ಲಿ ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿತ್ತು ಪರೀಕ್ಷೆ ಎಲ್ಲರೂ ಒಂದೇ ಬಾರಿ ಬರೆದಿದ್ದರು, ತಾತ್ಕಾಲಿಕ ಆಯ್ಕೆ ಪಟ್ಟಿಯೂ ಒಂದೇ ಭಾರಿ ಬಿಡುಗಡೆ ಮಾಡಲಾಗಿತ್ತು, ಅಂತಿಮ ಆಯ್ಕೆ ಪಟ್ಟಿಯು ಬಿಡುಗಡೆ ಆಗುವ ಸಂದರ್ಭದಲ್ಲಿ ಕೆಲವು ಆಯ್ಕೆಯಾಗದಂತೆ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೊದ ಪರಿಣಾಮವಾಗಿ ಕರ್ನಾಟಕ ಆಡಳಿತ ನ್ಯಾಯ ಮಂಡಲಿಯು ಮೊದಲು ಎಲ್ಲ ಜಿಲ್ಲೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲು ತಡೆಯಾಜ್ಞೆ ನೀಡಲಾಗಿತ್ತು ನ್ಯಾಯಾಲಯವು 30 ಜಿಲ್ಲೆಗಳ ಪೈಕಿ 17 ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಿ ನಂತರ ಇನ್ನೂ 13 ಜಿಲ್ಲೆಗಳ ತಡೆಯಾಜ್ಞೆಯನ್ನು ವಿವಿಧ ದಿನಾಂಕದಂದು ತೆರವುಗೊಳಿಸಿತ್ತು, ಜ್ಯೇಷ್ಠತಾ ಪಟ್ಟಿಯ ನಿಯಮಗಳ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇದ್ದರೂ ಕೂಡ ಕರ್ನಾಟಕ ಆಡಳಿತ ನ್ಯಾಯ ಮಂಡಲಿಯು ತಡೆಯುವ ಹೆಜ್ಜೆಯನ್ನು ತೆರವುಗೊಳಿಸಿದಂತೆ ಆಯಾ ಜಿಲ್ಲೆಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರವು ಬಿಡುಗಡೆಗೊಳಿಸಿದ್ದು, ಸರ್ಕಾರದ ತಪ್ಪಗಿರುತ್ತದೆ, ಸರ್ಕಾರವು ಆ ಹಂತದಲ್ಲೇ ನ್ಯಾಯಾಲಯದಲ್ಲಿ ಬಾಕಿ ಇದ್ದ ಎಲ್ಲಾ ಪ್ರಕರಣಗಳು ತಿರುವಳಿ ಆಗುವವರೆಗೂ ಅಥವಾ ತಿರುಗುಗೊಳಿಸುವ ವರೆಗೂ ಕಾಯ್ದೆಯು 30 ಜಿಲ್ಲೆಗಳ ಎಲ್ಲಾ ಪಂಚಾಯ್ತಿಗಳ ಎಲ್ಲಾ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಒಂದೇ ಸಾರಿ ಬಿಡುಗಡೆಗೊಳಿಸಿದರೇ ಈ ಸಮಸ್ಯೆ ಉದ್ಬವವಾಗುತ್ತಿರಲಿಲ್ಲ, ಆದರೆ ಸರ್ಕಾರವು ಈ ನಿಯಮವನ್ನು ಪಾಲಿಸಿರುವುದಿಲ್ಲ, ಇದರಿಂದ ನ್ಯಾಯಾಲಯದ ಪ್ರಕರಣಗಳಿಂದ ನೇಮಕಾತಿ ಪ್ರಕ್ರಿಯೆ ತಡವಾದರಿಂದ ಹಲವು ಜಿಲ್ಲೆಗಳ ಪಿಡಿಓಗಳು ಬಡ್ತಿಯ ಅವಕಾಶ ಇಲ್ಲದೆ ಜೀವನ ಪರಿಯಂತ ತೊಂದರೆ ಅನುಭವಿಸುವ ವಾತಾವರಣ ನಿರ್ಮಾಣವಾಗಿದೆ ಹಾಗಾಗಿ 2009 ರ ಅಧಿ ಸೂಚನೆಯಲ್ಲಿ ನೇಮಕಗೊಂಡ ಪಿಡಿಓಗಳಿಗೆ ಒಂದೇ ದಿನ ಸೇವೆ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಾಮಾಜಿಕ ಅಸಮತೋಲ, ಅನ್ಯಾಯ ಉಂಟಾಗಿದೆ : ಮೈಸೂರು, ಮಂಡ್ಯ, ರಾಮನಗರ, ಕೊಪ್ಪಳ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಯಾದಗಿರಿ, ಕಲಬುರಗಿ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಹಾವೇರಿ ಜಿಲ್ಲೆ ಸೇರಿದಂತೆ ಇತರೆ ಜಿಲ್ಲೆಯ ಪಿಡಿಓ ಮತ್ತು ಅವರ ಕೆಳ ಹಂತದ ಅಧಿಕಾರಿಗಳಿಗೆ ಜ್ಯೇಷ್ಠತಾ ಪಟ್ಟಿಯಲ್ಲಿ ಅನ್ಯಾಯವಾಗಿದೆ ಕೂಡಲೇ ಸರ್ಕಾರ ಈ ಸಂಬಂಧ ಕ್ರಮತೆಗೆದುಕೊಳ್ಳಬೇಕೆಂದು ಹಿಂದಿನ ಸರ್ಕಾರಕ್ಕೆ ಹೀಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.15- 2022 ರಂದು ಪತ್ರ ಬರೆದಿದ್ದರೂ ಆದರೆ ಈಗ ಅವರದೇ ಸರ್ಕಾರ ಇರುವುದರಿಂದ ಈ ತಾರತಮ್ಯವನ್ನು ಹೋಗಲಾಡಿಸಿ 16 ಜಿಲ್ಲೆಯ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಅನ್ಯಾಯವಾಗದಂತೆ ಬಡ್ತಿ ಸಂಬಂಧ ಪ್ರಕ್ರಿಯೆಗಳನ್ನು ಕೂಡಲೇ ಕೈಗೊಂಡು ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸುರೇಶ್ ಮನವಿ ಮಾಡಿದರು.

ಟಾಪ್ ನ್ಯೂಸ್

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

vidhana-Soudha

Karnataka Government: 21 ಐಎಎಸ್‌ ಅಧಿಕಾರಿಗಳ ವರ್ಗ

rahul gandhi (2)

UP; ಹಾಥರಸ್‌ ಕಾಲ್ತುಳಿತಕ್ಕೆ ಆಡಳಿತ ವೈಫ‌ಲ್ಯ ಕಾರಣ: ರಾಹುಲ್‌

1-weww

Bhojashala dispute: ಜೈನರ ಪರ ಸಲ್ಲಿಸಿದ್ದ ಅರ್ಜಿ ಹಿಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

vidhana-Soudha

Karnataka Government: 21 ಐಎಎಸ್‌ ಅಧಿಕಾರಿಗಳ ವರ್ಗ

BJP-flag

Lokasabha Election: ಬಿಜೆಪಿ ಆತ್ಮಾವಲೋಕನದಲ್ಲಿ ಆರೋಪ-ಪ್ರತ್ಯಾರೋಪ

MUST WATCH

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

ಹೊಸ ಸೇರ್ಪಡೆ

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Dengue ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಸಿವಿಕ್‌ ಬೈಲಾ!

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Renukaswamy ಶವ ಸಾಗಣೆ: ಬ್ಲೂ ಪ್ರಿಂಟ್‌ಗಾಗಿ ಪಿ.ಡಬ್ಲ್ಯೂಡಿ.ಗೆ ಮೊರೆ

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Manvi ವಸತಿ ನಿಲಯ; 29ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

HD-Kumaraswamy

Congress Government; ಜನತಾದರ್ಶನಕ್ಕೆ ಅಧಿಕಾರಿಗಳಿಗೆ ತಡೆ ಸರಕಾರದ ಸಣ್ಣತನ: ಎಚ್‌ಡಿಕೆ

1-ree

Sworn in; ಜೈಲಲ್ಲಿದ್ದೇ ಆಯ್ಕೆ ಆಗಿದ್ದ ಅಮೃತ್‌ಪಾಲ್‌, ರಶೀದ್‌ ಸಂಸದರಾಗಿ ಪ್ರಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.