![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jun 20, 2024, 10:06 AM IST
ಹುಣಸೂರು; ಪತ್ನಿ, ಪುತ್ರಿಯ ದಾರುಣ ಸಾವು, ಮಗ ಜೈಲು ಸೇರಿದ್ದರಿಂದಾಗಿ ಖಿನ್ನತೆಗೊಳಗಾಗಿದ್ದ ತಂದೆ ಸಹ ಸಾವನ್ನಪ್ಪಿರುವ ಘಟನೆ ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹುಣಸೂರು ತಾಲೂಕಿನ ಹಿರಿಕ್ಯಾತನಹಳ್ಳಿಯ ಸತೀಶ್(೫೫) ಸಾವನ್ನಪ್ಪಿದವರು.
2024 ರ ಜನವರಿ 24ರಂದು ಸತೀಶ್‌ರ ಪುತ್ರ ನಿತೀಶ್ ತನ್ನ ತಂಗಿ ಧನುಶ್ರೀ ಅನ್ಯ ಕೋಮಿನ ಯುವಕನ ಜೊತೆ ಪ್ರೀತಿ ಪ್ರೇಮ ಎಂದು ಸುತ್ತಾಡುತ್ತಿದ್ದದನ್ನು ಕಂಡು ತಾಯಿ ಅನಿತಾ, ತಂಗಿ ಧನುಶ್ರೀಯನ್ನು ಬೈಕಿನಲ್ಲಿ ಗ್ರಾಮಕ್ಕೆ ಸಮೀಪದ ಮರೂರು ಕೆರೆಯ ಬಳಿ ಕರೆದೊಯ್ದು, ತಂಗಿಯನ್ನು ಕೆರೆಗೆ ತಳ್ಳಿದ್ದಾನೆ ನೀರಿನಲ್ಲಿ ಮುಳುಗುತ್ತಿದ್ದ ಮಗಳನ್ನು ರಕ್ಷಿಸಲು ಹೋದ ತಾಯಿ ಸಹ ಕೆರೆಗೆ ಹಾರವಾಗಿದ್ದರು. ಈ ಸಂಬಂಧ ನಿತೀಶ್ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತು. ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು.
ಅಂದಿನಿಂದ ಒಬ್ಬಂಟಿಯಾಗಿದ್ದ ಸತೀಶ್ ಖಿನ್ನತೆಗೊಳಗಾಗಿ ಒಬ್ಬೊಂಟಿಯಾಗಿದ್ದರು. ಮಂಗಳವಾರ ಮನೆಯಲ್ಲೇ ಸಾವನ್ನಪ್ಪಿದ್ದು, ಸ್ವಗ್ರಾಮದಲ್ಲಿ ಮೃತ ಸತೀಶ್‌ನ ಅಂತ್ಯಕ್ರಿಯೆ ನಡೆಯಿತು.
ಕುಟುಂಬದ ಮೂವರು ಸಾವನ್ನಪ್ಪಿದ್ದರೆ, ಕುಟುಂಬ ನಿರ್ವಹಣೆ ಮಾಡಬೇಕಿದ್ದ ನಿತೀಶ್ ಸೆರೆವಾಸ ಅನುಭವಿಸುತ್ತಿದ್ದಾನೆ.
ಇದನ್ನೂ ಓದಿ: Misspells: ಬೇಟಿ ಬಚಾವೋ, ಬೇಟಿ ಪಡಾವೋ ಬರೆಯಲು ಪರದಾಡಿದ ಕೇಂದ್ರ ಸಚಿವೆ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
You seem to have an Ad Blocker on.
To continue reading, please turn it off or whitelist Udayavani.