Desi Swara: ಕರ್ನಾಟಕ ಸಂಘ ಕತಾರ್‌: ವಿಶ್ವ ಪರಿಸರ ದಿನಾಚರಣೆ, ಚಿತ್ರಕಲಾ ಸ್ಪರ್ಧೆ

Team Udayavani, Jun 22, 2024, 2:25 PM IST

Desi Swara: ಕರ್ನಾಟಕ ಸಂಘ ಕತಾರ್‌: ವಿಶ್ವ ಪರಿಸರ ದಿನಾಚರಣೆ, ಚಿತ್ರಕಲಾ ಸ್ಪರ್ಧೆ

ಕತಾರ್‌:ಕರ್ನಾಟಕ ಸಂಘ ಕತಾರ್‌ನ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ನೂತನ ಸಮಿತಿಯ ಚೊಚ್ಚಲ ಕಾರ್ಯಕ್ರಮವಾಗಿ ಜೂ.5ರಂದು ಸಾಂಕೇತಿಕವಾಗಿ ಅಲ್‌ ಹಂಡಸಾ ವಸತಿ ಸಮುಚ್ಚಯದಲ್ಲಿ ಸಂಘದ ಕಾರ್ಯಕಾರಿ ಮಂಡಳಿ ಹಾಗೂ ಸಲಹಾ ಸಮಿತಿಯ ಸದಸ್ಯರು ಮತ್ತು ಅಧ್ಯಕ್ಷರ ಸಮ್ಮುಖದಲ್ಲಿ ಗಿಡ ನೆಡುವ ಮೂಲಕ ಚಾಲನೆಗೊಂಡಿತು.

ಕಾರ್ಯಕ್ರಮದ ಭಾಗವಾಗಿ ಜೂನ್‌ 7ರಂದು ಬ್ರಿಲಿಯಂಟ್‌ ಇಂಡಿಯನ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮದೊಂದಿಗೆ, ಮಕ್ಕಳಿಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಒಟ್ಟು 72 ಸ್ಪರ್ಧಿಗಳು ಭಾಗವಹಿಸಿದ್ದು ಎಲ್ಲ ಮಕ್ಕಳು ತಮ್ಮ ಅದ್ಭುತ ಚಿತ್ರಕಲಾ ಪ್ರತಿಭೆಯಿಂದ ಗಮನ ಸೆಳೆದರು. ಅತಿಥಿ ತೀರ್ಪುಗಾರರಾದ ವೈಷ್ಣವಿ ಶ್ರೀನಿವಾಸನ್‌ ಅವರು ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದರು.

ಸಂಘದ ಉಪಾಧ್ಯಕ್ಷರಾದ ರಮೇಶ ಕೆ.ಎಸ್‌. ಅವರು ಸ್ವಾಗತ ಭಾಷಣ ಮಾಡಿದರು. ಅಧ್ಯಕ್ಷರಾದ ಎಂ. ರವಿ ಶೆಟ್ಟಿಯವರು ಇಂದಿನ ಪರಿಸರದ ಉಳಿವಿನ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮಕ್ಕೆ ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಪಿ.ಎನ್‌.ಬಾಬುರಾಜನ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಗಿಡಗಳನ್ನು ನೀಡಿ ಪರಿಸರದ ಕಡೆಗೆ ಕಾಳಜಿ ಹಾಗೂ ಸಂರಕ್ಷಣೆ ಮಾಡುವಂತೆ ಪ್ರೋತ್ಸಾಹಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಂಘದ ಸಲಹಾ ಸಮಿತಿಯ ಅಧ್ಯಕ್ಷರಾದ ಮಹೇಶ್‌ ಗೌಡ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಮಿಲನ್‌ ಅರುಣ್‌, ಸಲಹಾ ಸಮಿತಿಯ ಸದಸ್ಯರುಗಳಾದ ಅರುಣ್‌ ಕುಮಾರ್‌, ಮಧು ಎಚ್‌.ಕೆ., ಡಾ| ಸಂಜಯ ಕುದರಿ, ಸಂಘದ ಸದಸ್ಯರ ಜತೆಗೆ ಕರ್ನಾಟಕ ಮೂಲದ ಭ್ರಾತೃ ಸಂಘಗಳ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು ಪಾಲ್ಗೊಂಡು ಪುಟಾಣಿಗಳಿಗೆ ಪ್ರೋತ್ಸಾಹ ನೀಡಿದರು.

ಸಂಘದ ಪರಿಸರ ಮತ್ತು ವ್ಯವಸ್ಥಾಪಕ ಕಾರ್ಯದರ್ಶಿಗಳಾದ ಶಶಿಧರ್‌ ಎಚ್‌.ಬಿ. ಅವರು ಸಮಾರೋಪ ಸಮಾರಂಭದ ನಿರೂಪಣೆಯ ಜತೆಗೆ ಪರಿಸರ ದಿನಾಚರಣೆಯನ್ನು ಯೋಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಸಂಘದ ಜಂಟಿ ಕಾರ್ಯದರ್ಶಿಗಳಾದ ಎಲ್‌. ಜಿ. ಪಾಟೀಲ್‌ ಅವರು ವಂದನಾರ್ಪಣೆಯನ್ನು ಮಾಡಿದರು. ಮಹಿಳಾ ಮತ್ತು ಮಕ್ಕಳ ಕಾರ್ಯದರ್ಶಿಗಳಾದ ಭುವನಾ ಸೂರಜ್‌ ಅವರ ಜತೆಗೆ ಸಮಿತಿಯ ಎಲ್ಲ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.

ಟಾಪ್ ನ್ಯೂಸ್

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ…  ಆರನೇ ಮಹಡಿಯಿಂದ ಬಿದ್ದು ಮೃತಪಟ್ಟ

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

UAE ರಾಸ್‌ ಅಲ್‌ ಖೈಮಾ-ಪ್ರತಿಭಾನ್ವೇಷಣೆ ಸ್ಪರ್ಧೆ: ಮಿಂಚಿದ ಪ್ರತಿಭೆಗಳು

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ವೀರಶೈವವು ಬಸವಪೂರ್ವ ಯುಗದ ಸನಾತನ ಧರ್ಮ

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಏನೂ ಇಲ್ಲದೆಯೂ ಸಂತೋಷವಾಗಿರಿ!

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಗಾದೆ ಮಾತು ಹೇಳಿದರೆ ಕೇಳಬೇಕಮ್ಮಾ…

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

Desi Swara: ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.