Kannada: ಕನ್ನಡ ಕೂಟವೆಂಬ ಹೂರಣ

Team Udayavani, Jun 22, 2024, 3:49 PM IST

13-

ಬೆಂಗಳೂರು ಮಹಾನಗರ ಎಂಬುದು ಯುವಜನತೆಗೆ ಅವಕಾಶಗಳ ಹೆಬ್ಟಾಗಿಲನ್ನು ತೆರೆದಿಡುತ್ತದೆ. ಬೆಂಗಳೂರು ಮಾತ್ರವಲ್ಲದೆ ಕರ್ನಾಟಕದ ಬೇರೆ ಬೇರೆ ಮಹಾನಗರಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿದ್ದೂ ಕನ್ನಡ ಮಾತನಾಡುವುದು ಅಪರೂಪ ಎನಿಸುವ ವಾತಾವರಣ ಕಾಲೇಜುಗಳಲ್ಲಿದೆ.

ಗ್ರಾಮೀಣ ಭಾಗದಲ್ಲಿ ಕನ್ನಡವನ್ನು ಉಸಿರಾಗಿಸಿಕೊಂಡು ಬೆಳೆದ ವಿದ್ಯಾರ್ಥಿಗಳು ಕೂಡ ಮಹಾನಗರಗಳ ಕಾಲೇಜುಗಳಲ್ಲಿ ವೃತ್ತಿ ಶಿಕ್ಷಣದಂತದ ಕೋರ್ಸ್‌ಗಳಿಗೆ ದಾಖಲಾತಿ ಪಡೆದಾಗ ಆಂಗ್ಲ ಭಾಷೆ ಮತ್ತು ಇನ್ನಿತರ ಪರಭಾಷಿಕರ ನಡುವೆ ಕನ್ನಡದ ಬಳಕೆಯಲ್ಲಿ ಉಸಿರುಗಟ್ಟುವ ಪರಿಸ್ಥಿತಿ ಎದುರಿಸುತ್ತಾರೆ. ಕನ್ನಡದ ಅಸ್ಮಿತೆ ಉಳಿಸಲು, ಪರಭಾಷಿಕರೂ ಕನ್ನಡ ನೆಲದಲ್ಲಿ ಕನ್ನಡವನ್ನು ಗೌರವಿಸಲು ಕಾಲೇಜುಗಳಲ್ಲಿ ಬೇರೆ ಬೇರೆ ಕ್ಲಬ್‌ಗಳ ರೀತಿಯಲ್ಲಿ ಕನ್ನಡ ಕ್ಲಬ್‌ ಕೂಡ ಅತ್ಯವಶ್ಯಕವಾಗಿದೆ. ಕನ್ನಡ ಕೂಟವೆಂದರೆ ಅದು ಕೇವಲ ಸಾಂಸ್ಕೃತಿಕ ಕ್ಲಬ್‌ ಮಾತ್ರವಲ್ಲದೆ ಸಾಹಿತ್ಯ, ತಂತ್ರಜ್ಞಾನ ಹಾಗೂ ಕನ್ನಡ ಕಲೆಗಳ ಅನಾವರಣಕ್ಕಿರುವ ಸವಿ ಹೂರಣ.

ಕಾಲೇಜುಗಳಲ್ಲಿ ಕನ್ನಡ ಕ್ಲಬ್‌ಗಳ ಮೂಲಕ ಕನ್ನಡ ರಸ ಸಂಜೆ, ಜಾನಪದ ಗೀತ ಸಂಭ್ರಮ, ಜನಪದ ಕಲೆಗಳಾದ ಕರಗ, ಡೊಳ್ಳುಕುಣಿತ, ವೀರಗಾಸೆ, ಯಕ್ಷಗಾನ ಪ್ರದರ್ಶನ, ಕನ್ನಡ ಸಾಹಿತ್ಯದ ಮೇರು ಕವಿಗಳ ಪರಿಚಯ, ಸಾಧಕ ಕನ್ನಡಿಗರೊಂದಿಗೆ ಸಂವಾದ, ಸಾಹಿತ್ಯದ ರಸಪ್ರಶ್ನೆ, ಸದಭಿರುಚಿಯ ಕನ್ನಡ ಚಲನಚಿತ್ರ ಪ್ರದರ್ಶನ, ರಂಗಭೂಮಿಯತ್ತ ಚಿತ್ತ ಇಂತಹ ಕಾರ್ಯಕ್ರಮಗಳನ್ನು ಶೈಕ್ಷಣಿಕ ವರ್ಷಪೂರ್ತಿ ಹಮ್ಮಿಕೊಳ್ಳುವ ಮೂಲಕ ಕನ್ನಡದ ಚಲನಶೀಲತೆಯನ್ನು ಕಾಪಾಡಬಹುದು. ವಿದ್ಯಾರ್ಥಿಗಳ ಮನದಲ್ಲಿ ಕನ್ನಡದ ಕಂಪು ಹರಡಬಹುದು.

ಪರಭಾಷಿಕರಿಂದ ಕನ್ನಡ ಕಲಿಕೆ

ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಕನ್ನಡ ಕ್ಲಬ್‌ಗಳು ಕೇವಲ ಕನ್ನಡಿಗರಿಗೆ ಸೀಮಿತವಾಗಿರುವುದಿಲ್ಲ. ಹೊರ ರಾಜ್ಯದಿಂದ ಬಂದಿರುವ ವಿದ್ಯಾರ್ಥಿಗಳು ಕೂಡ ತಮ್ಮ ಸ್ನೇಹಿತರ ಜತೆಗೆ ಕನ್ನಡ ಕಲಿಯುತ್ತಾ ಕನ್ನಡ ಕ್ಲಬ್‌ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಹದಿಹರೆಯದ ಮಕ್ಕಳು ಸ್ನೇಹಿತರ ಒಡನಾಟದಿಂದ ಬಹಳಷ್ಟು ಕಲಿಯುವ ಇಚ್ಛೆಯನ್ನು ಹೊಂದಿರುವುದರಿಂದ ಯಾವುದೇ ಒತ್ತಡವಿಲ್ಲದೆ ಕನ್ನಡದ ಸೊಗಡನ್ನು ಸವಿಯುತ್ತಾ ತಾವೂ ಕನ್ನಡದ ಒಡನಾಡಿಗಳಾಗುತ್ತಾರೆ.

ಕನ್ನಡ ಹ್ಯಾಕಥಾನ್‌

ಸಾಫ್ಟ್ ವೇರ್‌ ಪ್ರೋಗ್ರಾಮಿಂಗ್‌ ಭಾಷೆಗಳನ್ನು ಬಳಸಿ ಗೇಮ್ಸ್,ಆ್ಯಪ್ಸ್‌, ರೋಬೋಗಳನ್ನು ರಚಿಸಬಹುದು. ಅದೇ ಹ್ಯಾಕಥಾನ್‌ಗಳಿಗೆ ಕನ್ನಡ ಸಂಬಂಧಿತ ಸಮಸ್ಯಾ ಹೇಳಿಕೆಗಳನ್ನು ನೀಡುವ ಮೂಲಕ ತಂತ್ರಜ್ಞಾನ ಮತ್ತು ಕನ್ನಡವನ್ನು ಬೆಸೆಯಬಹುದಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಕಾಲೇಜು ರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಹ್ಯಾಕಥಾನ್‌ ಅನ್ನು ಪಿ.ಇ.ಎಸ್‌. ವಿಶ್ವವಿದ್ಯಾಲಯದ ಕನ್ನಡ ಕೂಟದ ವತಿಯಿಂದ ಆಯೋಜಿಸಲಾಗಿತ್ತು.

ಈ ಕನ್ನಡ ಹ್ಯಾಕಥಾನ್‌ನ ಮೂಲಕ ಕನ್ನಡ ಸ್ಪೀಚ್‌ ಗುರುತಿಸುವಿಕೆ(ಅಲೆಕ್ಸಾ, ಸಿರಿಗಳು ಆಂಗ್ಲ ಭಾಷೆಯ ಸ್ಪೀಚ್‌ ಗುರುತಿಸುವಂತೆ), ಕನ್ನಡ ಲಿಪ್ಯಂತರಣ (ಟ್ರಾನ್ಸ್‌ ಲಿಟರೇಷನ್‌), ವಾಕ್ಯಗಳಿಗೆ ಛಂದಸ್ಸು, ಮಾತ್ರೆಗಳನ್ನು ಹಾಕುವಂತಹ ವೆಬ್‌ಸೈಟ್‌ಗಳನ್ನು ಬಳಸಿ ಮಾಡುವುದನ್ನು ಕನ್ನಡ ಹ್ಯಾಕಥಾನ್‌ ನ ಮೂಲಕ ಸಾಧ್ಯವಾಯಿತು ಎನ್ನುತ್ತಾರೆ ಹ್ಯಾಕಥಾನ್‌ನ ಆಯೋಜಕರು.

ಉನ್ನತ ಶಿಕ್ಷಣ ಪಡೆಯುವ ಹಂತದಲ್ಲಿ ಮಕ್ಕಳು ಕನ್ನಡ ಮಾತನಾಡಲು ಹಿಂಜರಿಕೆ ತೋರ್ಪಡಿಸುತ್ತಾರೆ. ಯುವ ಜನತೆ ಪರಭಾಷೆಯತ್ತ ಒಲವು ಬೆಳೆಸಿಕೊಳ್ಳುತ್ತಿ¨ªಾರೆ ಎಂಬ ಕಲ್ಪನೆ ವ್ಯಾಪಕವಾಗಿದೆ. ಇಂತಹ ಮನಸ್ಥಿತಿಯ ಸಾಮಾಜಿಕ ಪರಿಸರದಲ್ಲಿ ದೇಶ ವಿದೇಶಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ವ್ಯಾಸಂಗ ಮಾಡುತ್ತಿರುವ ಪದವಿ ಮತ್ತು ಸ್ನಾತಕೋತ್ತರ ಹಂತದ ಕಾಲೇಜುಗಳಲ್ಲಿ ಕನ್ನಡದ ಅಸ್ತಿತ್ವಕ್ಕೆ ನವೋಲ್ಲಾಸ ಕೊಡುತ್ತಿರುವ ಕನ್ನಡ ಕ್ಲಬ್‌ ಗಳ ಚಟುವಟಿಕೆಗಳು ಶ್ಲಾಘನೀಯ. “ಭಾರತದಂತಹ ವೈವಿಧ್ಯಮಯವಾದ ವಿಶಾಲ ರಾಷ್ಟ್ರದ ದೊಡ್ಡ ದೊಡ್ಡ ಔದ್ಯೋಗಿಕ ನಗರಗಳಲ್ಲಿ ವೇಷ ಭೂಷಣ ಭಾಷೆ ಸಂಸ್ಕೃತಿ ಮೊದಲಾದವುಗಳಲ್ಲಿ ಸಂಕ್ಷಿಪ್ತ ಭಾರತಗಳೇ ಆಗಿರಬೇಕಾದುದು ಅನಿವಾರ್ಯ. ಕನ್ನಡ ನಾಡಿನ ರಾಜಧಾನಿಯಾದ ಬೆಂಗಳೂರು ನಗರವು ಅಂತ ಒಂದು ಸಂಕ್ಷಿಪ್ತ ಭಾರತವೇ ಆಗಿದೆ. ಇಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಅಲ್ಪಸಂಖ್ಯಾಕರಿರುವುದು ಸಹಜ. ಆ ಎಲ್ಲ ಭಾಷೆಗಳಿಗೂ ಸಲ್ಲಬೇಕಾದುದನ್ನು ಸಲ್ಲಿಸಬೇಕಾದ ನಮ್ಮ ಕರ್ತವ್ಯವಾದರೂ ಇಲ್ಲಿ ಕನ್ನಡವೇ ಸಾರ್ವಜನಿಕ ಕ್ಷೇತ್ರದ ಸಾರ್ವಭೌಮ ಭಾಷೆಯಾಗಿರಬೇಕಾಗುತ್ತದೆ. ಕನ್ನಡಕ್ಕೆ ಮೊದಲ ಮನ್ನಣೆ ಸಲ್ಲಬೇಕಾದದ್ದು ಅಗತ್ಯವಾಗುತ್ತದೆ’ ಎಂದು ರಾಷ್ಟ್ರ ಕವಿ ಕುವೆಂಪುರವರು ಮನುಜ ಮತ ವಿಶ್ವ ಪಥದಲ್ಲಿ ನುಡಿದಿರುವಂತೆ, ಈ ಕನ್ನಡದ ನೆಲ ಜಲ ಬಳಸುವ ಎಲ್ಲರೂ ಕನ್ನಡ ಕಟ್ಟುವ ಕೈಂಕರ್ಯದಲ್ಲಿ ಭಾಗಿಗಳಾಗುವಲ್ಲಿ ಇಂತಹ ಕನ್ನಡ ಕೂಟಗಳು ಸಾಗಲಿ ಎಂದು ಆಶಿಸೋಣ.

ಅನೀಶ್‌ ಬಿ. ಕೊಪ್ಪ

ಪಿ.ಇ.ಎಸ್‌ ವಿವಿ, ಬೆಂಗಳೂರು

ಟಾಪ್ ನ್ಯೂಸ್

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

10

Bengaluru: ನಿಮ್ಮ ಮನೆ ಬಳಿ ಸಸಿ ನೆಡಬೇಕಾ? ಹಸಿರು ತೇರು ಸಂಪರ್ಕಿಸಿ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Education: ಅಸಮತೋಲನೆ ನಿವಾರಣೆಗೆ ಸಹ ಶಿಕ್ಷಣ ಸರಿಯಾದ ದಾರಿ

13-tn-sitharama

T. N. Seetharam: ಧಾರಾವಾಹಿಗಳಿಗೆ ಹೊಸ ಭಾಷ್ಯ ನೀಡಿದ ನಿರ್ದೇಶಕ ಟಿ.ಎನ್‌. ಸೀತಾರಾಮ

11-uv-fusion

Rajeev Taranath: ಸರೋದ್‌ ಸ್ವರ ಮಾಂತ್ರಿಕನ ಸ್ವರ್ಗಾರೋಹಣ

10-uv-fusion

UV Fusion: ನೈಸರ್ಗಿಕ ಕಾಡು ಪುನರುತ್ಥಾನಕ್ಕೆ ಕೊಡುಗೆ ನೀಡುವ ಉಪ್ಪಳಿಗೆ

11-uv-fusion

UV Fusion: ಸಿನೆಮಾ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

12

Chowkidar Movie: ಚೌಕಿದಾರ್‌ಗೆ ಮುಹೂರ್ತ ಇಟ್ರಾ!

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Union Govt: ಕಚ್ಛಾ ಪೆಟ್ರೋಲಿಯಂ ತೆರಿಗೆ ಶೇ.160ರಷ್ಟು ಹೆಚ್ಚಳ: ಏನಿದು Windfall Tax?

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್…  25 ಲಕ್ಷಕ್ಕೆ ಡೀಲ್

Salman Khan ಹತ್ಯೆಗೆ 8 ತಿಂಗಳ ಹಿಂದೆಯೇ ನಡೆದಿತ್ತು ಪ್ಲಾನ್… 25 ಲಕ್ಷಕ್ಕೆ ಡೀಲ್

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Kunigal: ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಆಂಬ್ಯುಲೆನ್ಸ್ ಪಲ್ಟಿ; ಚಾಲಕ ಸ್ಥಳದಲ್ಲೇ ಸಾವು

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Americaದಲ್ಲಿ ಭಾರತೀಯ ಮೂಲದ ಉದ್ಯಮಿಯ ಬೃಹತ್‌ ವಂಚನೆ, ಹೂಡಿಕೆದಾರರು ಕಂಗಾಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.