Padubidri ಗೃಹಬಳಕೆ ಜಾಡಿಯಿಂದ ಗ್ಯಾಸ್‌ ಕದಿಯುತ್ತಿದ್ದ ಇಬ್ಬರ ಬಂಧನ

ಮಾಲಕಿ ಸಹಿತ ನಾಲ್ವರ ವಿರುದ್ಧ ಕೇಸು

Team Udayavani, Jun 22, 2024, 11:03 PM IST

ಗೃಹಬಳಕೆ ಜಾಡಿಯಿಂದ ಗ್ಯಾಸ್‌ ಕದಿಯುತ್ತಿದ್ದ ಇಬ್ಬರ ಬಂಧನ

ಪಡುಬಿದ್ರಿ: ಮುದರಂಗಡಿಯ ಸಮನ್ಯು ಎಚ್‌ಪಿ ಗ್ಯಾಸ್‌ ಏಜೆನ್ಸಿಯ ಗೋದಾಮಿನ ಬಳಿ ಇರುವ ಅದರ ಮೂವರು ಲೋಡಿಂಗ್‌ ಕಾರ್ಮಿಕರಾಗಿರುವ ರಾಜಸ್ಥಾನ ಮೂಲದವರ ಮನೆಗೆ ಕಾಪು ಆಹಾರ ನಿರೀಕ್ಷಕರ ಜತೆಗೂಡಿ ಜೂ. 22ರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಪಡುಬಿದ್ರಿ ಪೊಲೀಸ್‌ ಠಾಣಾಧಿಕಾರಿ ಪ್ರಸನ್ನ ಹಾಗೂ ಸಿಬಂದಿ ಗ್ರಾಹಕರಿಗೆ ನೀಡಬೇಕಾಗಿರುವ ಗ್ಯಾಸ್‌ ಸಿಲಿಂಡರ್‌ಗಳಿಂದ ವಾಣಿಜ್ಯ ಸಿಲಿಂಡರ್‌ಗಳಿಗೆ ಅಕ್ರಮವಾಗಿ ಗ್ಯಾಸ್‌ ಮರುಪೂರಣ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದಾರೆ.

ಗ್ಯಾಸ್‌ ಏಜೆನ್ಸಿಯ ಮಾಲಕಿ ವಿದ್ಯಾ ಎಸ್‌. ಹೆಗ್ಡೆ, ಕಾರ್ಮಿಕರಾದ ಸುರೇಂದ್ರ ಕುಮಾರ್‌, ಸುಖ್‌ದೇವ್‌ ಮತ್ತು ದೇವರಾಮ್‌ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಸುರೇಂದ್ರ ಕುಮಾರ್‌ ಮತ್ತು ಸುಖ್‌ದೇವ್‌ ಅವರನ್ನು ಬಂಧಿಸಲಾಗಿದೆ. ದೇವರಾಮ್‌ ಪರಾರಿಯಾಗಿದ್ದಾನೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರಿಂದ ಗೃಹಬಳಕೆಯ 11 ಹಾಗೂ ವಾಣಿಜ್ಯೋದ್ದೇಶದ 4 ಗ್ಯಾಸ್‌ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಠಾಣಾಧಿಕಾರಿ ಪ್ರಸನ್ನ ಅವರಿಗೆ ಬಂದ ಖಚಿತ ಮಾಹಿತಿಯನ್ವಯ ಅದನ್ನು ಕಾಪು ತಹಶೀಲ್ದಾರ್‌ ಪ್ರತಿಭಾ ಅವರಿಗೆ ರವಾನಿಸಲಾಗಿತ್ತು. ಹಾಗಾಗಿ ಬೆಳಗ್ಗೆ 6 ಗಂಟೆಗೆ ಕಾಪು ಆಹಾರ ನಿರೀಕ್ಷಕ ಎಂ.ಟಿ. ಲೀಲಾನಂದ ಅವರ ಜತೆಗೇ ಪೊಲೀಸರು ದಾಳಿಯನ್ನು ಸಂಘಟಿಸಿ ಅಕ್ರಮವನ್ನು ಬಯಲಿಗೆಳೆದರು.

ಆರೋಪಿಗಳು ಪ್ರತೀದಿನ ವಿತರಣೆಗಾಗಿ ಹಿಂದಿನ ದಿನದ ಸಾಯಂಕಾಲವೇ ಸಿಲಿಂಡರ್‌ಗಳನ್ನು ತಮ್ಮ ವಾಹನಗಳಿಗೆ ಪೇರಿಸಿ ತಮ್ಮ ಮನೆಯ ಸಮೀಪ ನಿಲ್ಲಿಸುತ್ತಿದ್ದರು. ರಾತ್ರಿ ವೇಳೆ ತಮ್ಮ ವಾಹನಗಳಿಂದ ಗೃಹಬಳಕೆಯ ಸಿಲಿಂಡರ್‌ಗಳನ್ನು ಇಳಿಸಿ ಪ್ರತೀ ಸಿಲಿಂಡರ್‌ನಿಂದಲೂ 2-3 ಕೆಜಿಯಷ್ಟು ಗ್ಯಾಸನ್ನು ತಮ್ಮಲ್ಲಿರುವ ವಾಣಿಜ್ಯ ಉದ್ದೇಶದ ಸಿಲಿಂಡರ್‌ಗೆ ತುಂಬಿಸಿ ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ಗೃಹಬಳಕೆಯ ಸಿಲಿಂಡರ್‌ಗಳ ಒಟ್ಟು ತೂಕ 30 ಕೆಜಿ ಇರಬೇಕಾಗಿದ್ದುದು ಸುಮಾರು 27 ಕೆಜಿ ಆಸುಪಾಸಿನಲ್ಲಿರುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಒಂದೂವರೆ ವರ್ಷದಿಂದ…
ಆರೋಪಿತ ಕಾರ್ಮಿಕರು ಸುಮಾರು 2 ವರ್ಷಗಳಿಂದ ಅಲ್ಲಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಿಂದ ಈ ಅಕ್ರಮ ನಡೆಯುತ್ತಿದ್ದ ಮಾಹಿತಿ ಲಭಿಸಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾವು
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ನ್ನು ದಾಟುತ್ತಿದ್ದ ವ್ಯಕ್ತಿಯೊಬ್ಬರು ಕೆಎಸ್ಸಾರ್ಟಿಸಿ ಬಸ್‌ ಢಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಜೂ. 21ರ ರಾತ್ರಿ ಸಂಭವಿಸಿದೆ. ಭವಾನಿ ಮಟನ್‌ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂಗಪ್ಪ (60) ಮೃತಪಟ್ಟವರು. ಮೂಲತಃ ಹುಬ್ಬಳ್ಳಿಯ ಕುಸುಗಲ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ಪಡುಬಿದ್ರಿಯಲ್ಲಿ ಒಂಟಿಯಾಗಿ ನೆಲೆಸಿದ್ದರು.

ಟಾಪ್ ನ್ಯೂಸ್

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Tax

Tax ಸ್ಟಾಂಡರ್ಡ್‌ ಡಿಡಕ್ಷನ್‌ ಒಂದು ಲಕ್ಷ ರೂ.ಗೆ ಏರಿಕೆ?

Goverment-school

Government Scheme; “ನಾವು- ಮನುಜರು’: ಶಾಲೆಗಳಲ್ಲಿ ವಾರಕ್ಕೆ 2 ಗಂಟೆ ಕಾರ್ಯಕ್ರಮ

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Mangaluru ಜಮೀನು ಮಾರಾಟ ವಂಚನೆ: ವಕೀಲ ಸಹಿತ 14 ಮಂದಿ ವಿರುದ್ಧ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Kasaragod ಅಪಾರ್ಟ್‌ಮೆಂಟ್‌ನಲ್ಲಿ ಮಹಿಳೆಯ ಸಾವು: ಕೊಲೆ ಪ್ರಕರಣ ದಾಖಲು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

Snake ಕುಂಬಳೆ: ನಾಗರ ಹಾವು ಕಡಿತ; ಮಹಿಳೆ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

Udupi ರೆಡ್‌ಕ್ರಾಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ ಆರೋಪ

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

5-byndoor

Heavy Rain: ಬೈಂದೂರು ವಲಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಣೆ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Dakshina Kannada; ಹಲವು ಸಚಿವರ ಭೇಟಿಯಾಗಿ ಅಭಿವೃದ್ಧಿಗೆ ಸಹಕಾರ ಕೇಳಿದ ಕ್ಯಾ| ಚೌಟ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

Toll Plazas ಸ್ಥಳೀಯರಿಗೆ ಟೋಲ್‌ ವಿನಾಯಿತಿ ಮುಂದುವರಿಸಲು ಡಿ.ಸಿ. ಸೂಚನೆ

musk

Tesla; ಭಾರತದಲ್ಲಿ ಹೂಡಿಕೆ ಮಾಡಲು ಉದ್ಯಮಿ ಮಸ್ಕ್ ಹಿಂದೇಟು

rape

Hyderabad: ಮಹಿಳೆ ಮೇಲೆ ಕಾರಿನಲ್ಲಿ ರಾತ್ರಿಯಿಡೀ ಅತ್ಯಾಚಾರ

Tax

Tax ಸ್ಟಾಂಡರ್ಡ್‌ ಡಿಡಕ್ಷನ್‌ ಒಂದು ಲಕ್ಷ ರೂ.ಗೆ ಏರಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.