![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 23, 2024, 12:26 AM IST
ಬೆಂಗಳೂರು: ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಮೊದಲೆರಡು ಪಂದ್ಯಗಳಲ್ಲಿ ಉರುಳಿಸಿರುವ ಭಾರತದ ವನಿತೆಯರೀಗ ಏಕದಿನ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಳ್ಳುವ ಕಾತರದಲ್ಲಿದ್ದಾರೆ. ಇನ್ನೊಂದೆಡೆ ಲಾರಾ ವೋಲ್ವಾರ್ಟ್ ಬಳಗ ಕೊನೆಯ ಪಂದ್ಯವನ್ನಾದರೂ ಗೆದ್ದು ಪ್ರತಿಷ್ಠೆಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಮೊದಲ ಪಂದ್ಯವನ್ನು ಭಾರತ ಅಧಿಕಾರಯುತವಾಗಿಯೇ ಗೆದ್ದಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ತಾಕತ್ತಿನ ನಿಜದರ್ಶನವಾಗಿದೆ. 326 ರನ್ನುಗಳ ಬೃಹತ್ ಸವಾಲು ಮುಂದಿದ್ದರೂ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ಹರಿಣಗಳ ಪಡೆ ಕೇವಲ 4 ರನ್ನಿನಿಂದ ಹಿಂದುಳಿದಿತ್ತು. ಹೀಗಾಗಿ 3ನೇ ಪಂದ್ಯ ತೀವ್ರ ಪೈಪೋಟಿ ಕಾಣುವ ಸಾಧ್ಯತೆ ಇದೆ. ಸರಣಿ ಹೇಗೂ ಗೆದ್ದಾಯಿತೆಂದು ನಮ್ಮವರು ಪಂದ್ಯವನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಕೆಲವು ಪ್ರಯೋಗಗಳಿಗಾಗಿಯೂ ಇದನ್ನು ಬಳಸಿಕೊಳ್ಳಬೇಕಿದೆ.
ದ್ವಿತೀಯ ಪಂದ್ಯ ಬರೋಬ್ಬರಿ 4 ಶತಕಗಳನ್ನು ಕಂಡಿತ್ತು. ಭಾರತದ ಉಪನಾಯಕಿ ಸ್ಮತಿ ಮಂಧನಾ ಸತತ ಎರಡನೇ ಶತಕದ ಮೂಲಕ ಮುಹೂ ರ್ತವಿರಿಸಿದ್ದರು. ಈ ಸಾಧನೆಗೈದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆ ಇವರದ್ದಾಗಿತ್ತು.
ಬಳಿಕ ನಾಯಕಿ ಹರ್ಮನ್‌ಪ್ರೀತ್ ಕೌರ್, ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್ ಮತ್ತು ಮರಿಜಾನ್ ಕಾಪ್ ಕೂಡ ಸೆಂಚುರಿ ಸಂಭ್ರಮ ಆಚರಿಸಿದ್ದರು. ಉರುಳಿದ್ದು 9 ವಿಕೆಟ್ ಮಾತ್ರ. ಒಟ್ಟಾರೆ ಈ ಪಂದ್ಯ ಬೌಲರ್‌ಗಳ ಪಾಲಿಗೆ ದೊಡ್ಡದೊಂದು ಅಗ್ನಿಪರೀಕ್ಷೆಯಾಗಿತ್ತು. ಅಂತಿಮ ಪಂದ್ಯ ಯಾವ ಟ್ರ್ಯಾಕ್ ಮೇಲೆ ನಡೆದೀತು ಎಂಬುದರ ಮೇಲೆ ಇತ್ತಂಡಗಳ ಹೋರಾಟ ನಿಂತಿದೆ.
ಶ್ರೇಯಾಂಕಾಗೆ ಅವಕಾಶ?
ಈ ಎರಡೂ ಪಂದ್ಯಗಳಲ್ಲಿ ತವರಿನ ಬೌಲರ್ ಶ್ರೇಯಾಂಕಾ ಪಾಟೀಲ್ ಆಡಿರಲಿಲ್ಲ. ರವಿವಾರ ಇವರಿಗೆ ಅವಕಾಶ ಸಿಗುವ ಎಲ್ಲ ಸಾಧ್ಯತೆ ಇದೆ. ಹಾಗೆಯೇ ಎಡಗೈ ಬ್ಯಾಟರ್ ಸೈಕಾ ಇಶಾಖ್, ಅಗ್ರ ಕ್ರಮಾಂಕದ ಆಟಗಾರ್ತಿ ಪ್ರಿಯಾ ಪೂನಿಯ ಕೂಡ ಆಡಿಲ್ಲ. ಇವರೂ ಆಡುವ ಬಳಗದಲ್ಲಿ ಕಾಣಿಸಿ ಕೊಳ್ಳಬಹುದು. ಕಳೆದ 8 ಪಂದ್ಯಗಳಲ್ಲಿ ತೀವ್ರ ರನ್ ಬರಗಾಲ ಎದುರಿಸುತ್ತಿರುವ ಶಫಾಲಿ ವರ್ಮ ಅವರಿಗೆ ವಿಶ್ರಾಂತಿ ನೀಡಿದರೂ ಅಚ್ಚರಿ ಇಲ್ಲ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
You seem to have an Ad Blocker on.
To continue reading, please turn it off or whitelist Udayavani.