Document ಕೇಳಿದ ಪೊಲೀಸ್ನನ್ನು ಎಳೆದುಕೊಂಡು ಹೋದ ಚಾಲಕ
Team Udayavani, Jun 23, 2024, 1:07 AM IST
ಹೊಸದಿಲ್ಲಿ: ಕಾರು ಚಾಲಕನೊಬ್ಬ ಟ್ರಾಫಿಕ್ ಪೊಲೀಸ್ರೊಬ್ಬರನ್ನು ಎಳೆದುಕೊಂಡು ಹೋದ ಘಟನೆ ಹರಿಯಾಣದ ಫರಿದಾಬಾದ್ನಲ್ಲಿ ನಡೆದಿದೆ. ರಸ್ತೆ ಮಧ್ಯದಲ್ಲೇ ಕಾರ್ ನಿಲ್ಲಿಸಿ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ್ದ. ಆಗ ದಾಖಲೆ ತೋರಿಸಬೇಕು ಎಂದು ಪೊಲೀಸ್ ಸಿಬಂದಿ ಕೇಳಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ದಾಖಲೆ ಪರಿಶೀಲಿಸಲು ಪೊಲೀಸ್ ಕಾರಿನಲ್ಲಿ ಇಣುಕಿದಾಗ, ಚಾಲಕ ಎಕ್ಸಲರೇಟರ್ ಒತ್ತಿ ಪೊಲೀಸ್ನನ್ನು ಎಳೆದುಕೊಂಡು ಮುಂದೆ ಸಾಗಿದ್ದಾನೆ. ಕೂಡಲೇ ಅಲ್ಲಿದ್ದ ಸಾರ್ವಜನಿಕರು ಕಾರನ್ನು ಅಡಗಟ್ಟಿ, ಪೊಲೀಸ್ನನ್ನು ರಕ್ಷಿಸಿದ್ದಾರೆ. ಚಾಲಕನನ್ನು ಸೆರೆ ಹಿಡಿಯ ಲಾಗಿದೆ. ಚಾಲಕ ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.